Chittara Star Award ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು ನಿರ್ಮಿಸಿ, ಮಲೆನಾಡ ಕ್ರಿಯಾಶೀಲ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿದ ಜಲಪಾತ ಸಿನಿಮಾ ಕ್ಕೆ 2024 ರ ಚಿತ್ತಾರ ಸ್ಟಾರ್ ಅವಾರ್ಡ್ ಲಭಿಸಿದೆ.
ಉತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ವಿಭಾಗದಲ್ಲಿ ಜಲಪಾತ ನಾಮ ನಿರ್ದೇಶನಗೊಂಡಿತ್ತು.
ಜೊತೆಗೆ ಚಿತ್ರದ ನಾಯಕ ನಟಿ ನಾಗಶ್ರೀ ಬೇಗಾರ್ ಮೊದಲ ಸಿನಿಮಾದ ಶ್ರೇಷ್ಠ ನಾಯಕಿ ವಿಭಾಗದಲ್ಲಿ ನಾಮಿನೆಟ್ ಆಗಿದ್ದರು. ಈ ಪೈಕಿ ಸಿನಿಮಾ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಆನ್ ಲೈನ್ ವೋಟಿಂಗ್ ಮತ್ತು ತೀರ್ಪು ಗಾರ ತಂಡ ದ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಜೂನ್ 15 ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ಗ್ರಾಂಡ್ ಸಭಾಂಗಣ ದಲ್ಲಿ ಚಿತ್ತಾರ ಸಿನಿ ಮ್ಯಾಗಜಿನ್ ಕಲರ್ಸ್ ಕನ್ನಡ ಸಹಯೋಗದಲ್ಲಿ ಆಯೋಜಿಸಿದ್ದ ಚಂದನವನ ಸಂಭ್ರಮ ಕಾರ್ಯಕ್ರಮ ದಲ್ಲಿ ಪ್ರಸಿದ್ಧ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನ್ಸೋರೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ನಿರಂಜನ್ ದೇಶಪಾಂಡೆ ಮತ್ತು ಜಾಹ್ನವಿ ಕಾರ್ತಿಕ್ ನಿರೂಪಣೆ ಯ ಈ ವರ್ಣ ರಂಜಿತ ಕಾರ್ಯಕ್ರಮ ದಲ್ಲಿ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ ಸಿನಿಮಾ ರಂಗದ ಪ್ರಸಿದ್ದ ಕಲಾವಿದರು ಭಾಗವಹಿಸಿದ್ದರು.
ಜಲಪಾತ ತಂಡದ ಪರವಾಗಿ ನಿರ್ಮಾಪಕ ರವೀಂದ್ರ ಮತ್ತು ನಿರ್ದೇಶಕ ರಮೇಶ್ ಬೇಗಾರ್, ನಾಯಕ ರಜನೀಶ್, ನಾಯಕಿ ನಾಗಶ್ರೀ ಈ ಪ್ರಶಸ್ತಿಯನ್ನು ಸ್ವೀಕರಿದರು.
Chittara Star Award ಕಾರ್ಯಕ್ರಮದಲ್ಲಿ ಮುಖ್ಯ ತಾಂತ್ರಿಕ ವರ್ಗ ಛಾಯಾಗ್ರಾಹಕ ಶಶಿರ ಶೃಂಗೇರಿ, ಸಂಕಲನ ಕಾರ ಅವಿನಾಶ್ ಶೃಂಗೇರಿ ಕಲಾನಿರ್ದೇಶಕ ಅಭಿಷೇಕ್ ಮತ್ತು ನಿರ್ವಾಹಕ ಕಾರ್ತಿಕ್ ಶೃಂಗೇರಿ ಇವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಮೇಶ್ ಮಾತನಾಡಿ ” ಇದೊಂದು ಸಾಮಾಜಿಕ ಸಂದೇಶ ದ ಚಿತ್ರವಾದರೂ ವಾಣಿಜ್ಯ ವಿಭಾಗ ದಲ್ಲೂ ಉತ್ತಮ ಸಾಧನೆ ಮಾಡಿದ ಹೆಗ್ಗಳಿಕೆ ಪಡೆದಿದೆ. ಮಲೆನಾಡ ಗ್ರಾಮೀಣ ಪ್ರದೇಶ ದ ಕಲಾವಿದ ತಂತ್ರಜ್ಞರಿಗೆ ಮೊದಲು ಒಳಿದ ಪ್ರಶಸ್ತಿ ಇದಾಗಿದ್ದು ಮಲೆನಾಡ ಸಮಸ್ತ ಜನತೆಗೆ ಪ್ರಶಸ್ತಿ ಯನ್ನು ಸಮರ್ಪಿಸುತ್ತೇವೆ ” ಎಂದರು.
2023 ರಲ್ಲಿ ಚಿತ್ರೀಕರಣ ಗೊಂಡು ಬಿಡುಗಡೆ ಆಗಿ ಎ ಬಿ ಸಿ ಕೇಂದ್ರ ಗಳಲ್ಲಿ 50 ದಿನ ಪ್ರದರ್ಶಿತ ಗೊಂಡ ಜಲಪಾತ ಪ್ರತಿಷ್ಠಿತ ಆಮೇಜಾನ್ ಪ್ರೈಮ್ ನಲ್ಲೂ ಬಿಡುಗಡೆ ಗೊಂಡಿದೆ ಮಾತ್ರವಲ್ಲ 8 ಕ್ಕೂ ಮಿಕ್ಕಿದ ಐ ಎಂ ಡಿ ಬಿ ರೇಟಿಂಗ್ ದಾಖಲಿಸಿದ ವಿಶಿಷ್ಟ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದೆ.