B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ನಾಲ್ಕನೇ ಬಾರಿ ಗೆಲುವು ಸಾಧಿಸುವ ಮೂಲಕ ಬಂಗಾರಪ್ಪ ಅವರ ದಾಖಲೆ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದ ಅತಿ ಹೆಚ್ಚು ಅಂತರದ ಗೆಲುವು ಸಾಧಿಸುವ ಮೂಲಕ ಹಿಂದಿನ ರೆಕಾರ್ಡ್ ಮುರಿದಿದ್ದಾರೆ.
ರಾಘವೇಂದ್ರ ಈ ಸಲ ಪ್ರಮುಖ ಸಾಧನೆಗಳನ್ನ ದಾಖಲಿಸಿದ್ದಾರೆ. ೨೦೦೯ ರಲ್ಲಿ ಅವರು ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿ ೪೮೨,೭೮೩ ಮತಗಳನ್ನು ಪಡೆದಿದ್ದು ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಶೇಕಡಾ ೫೦ ಕ್ಕಿಂತ ಹೆಚ್ಚು ಮತ ಪಡೆದಿದ್ದರು. ಆನಂತರ ೨೦೧೪ ರಲ್ಲಿ ಬಿಎಸ್ ಯಡಿಯೂರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು, ಅದಾದ ಬಳಿಕ ೨೦೧೮ ರಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಬಿವೈಆರ್ ಮತ್ತೆ ಸ್ಪರ್ಧಿಸಿ ೫೪೩,೩೦೬ ಮತಗಳನ್ನ ಪಡೆದಿದ್ದರು. ಆಗಲು ಸಲ ಅವರು ೫೦.೭೩ ಶೆಕಡಾವಾರು ಮತ ಪಡೆದಿದ್ದರು. ಹಿಂದಿನ ಚುನಾವಣೆಗೆ ಹೋಲಿಸಿದ್ದರೇ ಶೇಕಡಾವಾರು ಮತಗಳಲ್ಲಿ ತುಸು ಕಡಿಮೆಯಾಗಿತ್ತು.
ಇನ್ನೂ ೨೦೧೯ ರಲ್ಲಿ ನಡೆದ ಚುನಾವಣೆಯಲ್ಲಿ ೭೨೯,೮೭೨ ಮತ ಪಡೆದಿದ್ದ ರಾಘವೇಂದ್ರ ಶೇಕಡಾ ವಾರು೫೬.೮೬ ರಷ್ಟು ಮತಪಡೆದು ತಮ್ಮ ಗ್ರಾಫ್ ಏರಿಸಿಕೊಂಡಿದ್ದರು. ಇನ್ನೂ ಈ ಸಲ ಅಂದರೆ ೨೦೨೪ ರ ಚುನಾವಣೆಯಲ್ಲಿ ೭,೭೮,೭೨೧ ಮತಗಳನ್ನ ಪಡೆದು ನಾಲ್ಕನೇ ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಈ ಸಲ ರಾಘವೇಂದ್ರರವರು ತಮ್ಮ ಮತಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು ೧೫ ವರ್ಷದಲ್ಲಿ ಅವರಿಗೆ ಬಿದ್ದ ಮತಗಳ ಪ್ರಮಾಣ ಎರಡುವರೆ ಲಕ್ಷಕ್ಕಿಂತಲೂ ಹೆಚ್ಚಾಗಿದೆ.
B.Y. Raghavendra ನಾಲ್ಕನೆ ಬಾರಿಗೆ ಆಯ್ಕೆಯಾಗುವ ಮೂಲಕ ಶಿವಮೊಗ್ಗದಲ್ಲಿ ಅತಿಹೆಚ್ಚು ಬಾರಿ ಸಂಸದರಾದ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ. ಶಿವಮೊಗ್ಗದಲ್ಲಿ ಟಿವಿ ಚಂದ್ರಶೇಖರಪ್ಪ ಎರಡು ಸಲ ಎಂಪಿಯಾಗಿದ್ದರು. ಆ ಬಳಿಕ ಮಾಜಿ ಸಿಎಂ ಬಂಗಾರಪ್ಪ ೧೯೯೬, ೧೯೯೯, ೨೦೦೪, ಮತ್ತು ೨೦೦೫ ಸಂಸದರಾಗಿದ್ದರು. ಈ ಮೂಲಕ ಅವರು ನಾಲ್ಕು ಸಲ ಸಂಸದರಾಗಿ ಆಯ್ಕೆಯಾದ ಸಾಧನೆ ಮಾಡಿದ್ದರು.. ಇನ್ನೂ ೨೦೦೯ರಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಎಸ್ ಬಂಗಾರಪ್ಪ ಬಳಿಕ ಸೋಲು ಕಂಡಿದ್ದರು. ೨೦೦೯ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ ಬಿ.ವೈ.ರಾಘವೇಂದ್ರ, ೨೦೧೮ರ ಉಪ ಚುನಾವಣೆ, ೨೦೧೯ ಜನರಲ್ ಎಲೆಕ್ಷನ್ ನಲ್ಲಿ ಗೆದ್ದಿದ್ದರು. ಇದೀಗ ಅಂದರೆ, ೨೦೨೪ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಂಗಾರಪ್ಪರವರ ಸಾಲಿನಲ್ಲಿ ಸೇರಿದ್ದಾರೆ. ಬಂಗಾರಪ್ಪ, ಮಧು ಬಂಗಾರಪ್ಪ, ಗೀತಾ ಶಿವರಾಜಕುಮಾರ್ ಹೀಗೆ ಸಾರೆಕೊಪ್ಪ ಬಂಗಾರಪ್ಪರವರು ಹಾಗೂ ಅವರ ಮಕ್ಕಳನ್ನ ಸೋಲಿಸಿದ ದಾಖಲೆಯನ್ನು ಸಹ ಬಿವೈ ರಾಘವೇಂದ್ರ ತಮ್ಮದಾಗಿಸಿಕೊಂಡಿದ್ದಾರೆ.
B.Y. Raghavendra ಬಂಗಾರಪ್ಪ ದಾಖಲೆ ಸರಿಗಟ್ಟಿದ ಬಿ.ವೈ.ರಾಘವೇಂದ್ರ
Date: