Monday, April 21, 2025
Monday, April 21, 2025

Narendra Modi “ದೇವರಿಂದ ಕಳಿಸಲ್ಪಟ್ಟಿದ್ದೇನೆ” ಎಂಬ ಪ್ರಧಾನಿ ಮೋದಿ ಹೇಳಿಕೆಗೆ ರಾಹುಲ್ ವ್ಯಂಗ್ಯ

Date:

Narendra Modi ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ, ಈ ರೀತಿಯ ಶಕ್ತಿಯು ಜೈವಿಕ ದೇಹದಿಂದ ಬರಲು ಸಾಧ್ಯವಿಲ್ಲ, ದೇವರು ಮಾತ್ರ ಅಂತಹ ಶಕ್ತಿಯನ್ನು ನೀಡಬಲ್ಲನು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ನೀಡಿದ್ದು, ಇದೀಗ ಅಪಹಾಸ್ಯಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಗಂಗಾನದಿಯ ದಡದಲ್ಲಿ ಮೃತದೇಹಗಳು ಜಮಾಯಿಸುತ್ತಿದ್ದಾಗ, ‘ದೇವರ ದೂತರು’ ತಮ್ಮ ಮೊಬೈಲ್ ಫೋನ್‌ನ ಪ್ಲ್ಯಾಶ್‌ಲೈಟನ್ನು ಆನ್ ಮಾಡಲು ಜನರಿಗೆ ಹೇಳಿದ್ದಾರೆ ಎಂದು ಕೋವಿಡ್‌ ಮೊದಲ ಹಂತದ ಲಾಕ್‌ಡೌನ್‌ ವೇಳೆ ಪ್ರಧಾನಿ ಮೋದಿ ದೀಪಗಳು ಅಥವಾ ಟಾರ್ಚ್‌ಗಳನ್ನು ಬೆಳಗಿಸಲು ನಾಗರಿಕರಿಗೆ ಸೂಚಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

ಯಾರಾದರೂ ನಿಮ್ಮ ಬಳಿಗೆ ಬಂದು ಅಂತಹ ಮಾತುಗಳನ್ನು ಹೇಳಿದರೆ, ನೀವು ಏನು ಹೇಳುತ್ತೀರಿ? ನೀನು ನನ್ನನ್ನು ಕ್ಷಮಿಸು ಸಹೋದರ, ನೀನು ನಿನ್ನ ಕೆಲಸ ಮಾಡು, ನನ್ನ ಕೆಲಸ ಮಾಡಲು ನನಗೆ ಬಿಡು ಎಂದು ಹೇಳುತ್ತೀರಿ. ಆದರೆ ಅವರ ಭಕ್ತರು ಪ್ರಧಾನಿಯನ್ನು ಹೊಗಳುತ್ತಾರೆ ಮತ್ತು ಅವರು ದೇವರಿಂದ ಕಳುಹಿಸಲ್ಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಚಪ್ಪಾಳೆ ತಟ್ಟುವಂತೆ ಅವರು ಜನರಿಗೆ ಹೇಳಿದ್ದಾರೆ. ಜನರು ಆಸ್ಪತ್ರೆಗಳ ಹೊರಗೆ ಕೊನೆಯುಸಿರೆಳೆದಾಗ, ಪ್ರಧಾನಿ ಇರಲಿಲ್ಲ. ಪ್ರಧಾನಿ ಅಲ್ಲ, ಆದರೆ ದೇವರಿಂದ ಕಳುಹಿಸಲ್ಪಟ್ಟವರು, ಜನರಿಗೆ ಮೊಬೈಲ್ ಫೋನ್ ಪ್ಲ್ಯಾಶ್‌ಲೈಟ್‌ ಆನ್ ಮಾಡಲು ಕೇಳುತ್ತಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಪ್ರಧಾನಿ ಮೋದಿ, ನನ್ನ ತಾಯಿ ಬದುಕಿರುವವರೆಗೂ ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ಭಾವಿಸುತ್ತಿದ್ದೆ. ಆಕೆಯ ನಿಧನದ ನಂತರ, ನನ್ನ ಅನುಭವಗಳನ್ನು ನೋಡಿದಾಗ, ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ.

ಈ ಶಕ್ತಿ ನನ್ನ ದೇಹದ್ದಲ್ಲ. ಅದನ್ನು ದೇವರು ನನಗೆ ಕೊಟ್ಟಿದ್ದಾನೆ. ಅದಕ್ಕಾಗಿಯೇ ದೇವರು ನನಗೆ ಸಾಮರ್ಥ್ಯ, ಶಕ್ತಿ, ಶುದ್ಧ ಹೃದಯ ಮತ್ತು ಇದನ್ನು ಮಾಡಲು ಸ್ಫೂರ್ತಿ ನೀಡಿದ್ದಾನೆ. ನಾನು ದೇವರು ಕಳುಹಿಸಿದ ಸಾಧನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದರು.

Narendra Modi ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕನ್ಹಯ್ಯಾ ಕುಮಾರ್ ಅವರಿಗೆ ವ್ಯಾಪಕವಾದ ವಿಷಯಗಳ ಬಗ್ಗೆ ಸಾಕಷ್ಟು ಜ್ಞಾನವಿದೆ. ಆದರೆ ಅವನು ಒಂದು ದಿನ ಬಂದು ನನ್ನಲ್ಲಿ ತಾನು ಜೈವಿಕನಲ್ಲ ಮತ್ತು ದೇವರಿಂದ ಕಳುಹಿಸಲ್ಪಟ್ಟವನು ಎಂದು ನನ್ನಲ್ಲಿ ಹೇಳಿದರೆ, ನಾನು ಅದನ್ನು ಯಾರಿಗೂ ಹೇಳಬೇಡಿ ಅಥವಾ ಇದನ್ನು ಜೋರಾಗಿ ಹೇಳಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಆದರೆ ಪ್ರಧಾನಿ ತಾನು ಜೈವಿಕ ಅಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಬೇರೆ ಎಲ್ಲಾ ಜನರು ಜೈವಿಕರು ಮತ್ತು ನಾನು ಮಾತ್ರ ಅಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ...

Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ...