KSRTC ಶಿವಮೊಗ್ಗದಿಂದ ಕುಂದಾಪುರಕ್ಕೆ ಹೋಗುವ ಬಸ್‌ವೊಂದು ಡೀಸೆಲ್ ಖಾಲಿಯಾಗಿ ನಡು ರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸಿದ ಘಟನೆಯೊಂದು ನಡೆದಿದೆ.
ಶಿವಮೊಗ್ಗದಿಂದ ಕುಂದಾಪುರ ಕ್ಕೆ ಹೋಗುತ್ತಿದ್ದ ಬಸ್ ನಿನ್ನೆ ಸಂಜೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪ ನಿಂತು ಬಿಟ್ಟಿದೆ. ಬಸ್‌ನ ಡ್ರೈವರ್ ಹಾಗೂ ಕಂಡಕ್ಟರ್ ವಿಷಯವನ್ನು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ನಿಮ್ಮ ದುಡ್ಡಿನಲ್ಲಿ ಡೀಸೆಲ್ ಹಾಕಿಸಿಕೊಂಡು ಬನ್ನಿ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.
ಇತ್ತ ಡ್ರೈವರ್ ಹಾಗೂ ಕಂಡಕ್ಟರ್ ಅಸಹಾಯಕವಾಗಿ ಪ್ರಯಾಣಿಕರತ್ತ ನೋಡುತ್ತಾ ಸುಮ್ಮನಾಗಿದ್ದಾರೆ. ಆದರೆ ಪ್ರಯಾಣಿಕರ ಸ್ಥಿತಿ ದೇವರಿಗೆ ಪ್ರೀತಿಯಾಗಿತ್ತು.
KSRTC ಹಿಂದಕ್ಕೂ ಮುಂದಕ್ಕೂ ಹೋಗಲಾಗದೇ ಸುಮಾರು ನಲವತ್ತಕ್ಕೂ ಹೆಚ್ಚು ಪ್ರಯಾಣಿಕರು ರಾತ್ರಿಯಾದರೆ ಕಥೆ ಏನು ಎಂದು ಪ್ರಶ್ನಿಸುತ್ತಿದ್ದರು. ಮಹಿಳೆಯರು ಮಕ್ಕಳು ಆತಂಕಗೊಂಡಿದ್ದರು. ಕೊನೆಗೆ ವಿಷಯ ತಿಳಿದು ಸ್ಥಳೀಯರು ಬಂದು ವಿಚಾರಿಸಿ ಅಲ್ಲಿಗೆ ಬಂದ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರನ್ನು ಹತ್ತಿಸಿ ಅವರವರ ಊರಿಗೆ ಕಳಿಸಿದ್ದಾರೆ.
ಕಳೆದ ಒಂದು ತಿಂಗಳಿನಲ್ಲಿ ಇದೇ ಮಾರ್ಗದಲ್ಲಿ ಮೂರು ಸಲ ಕೆಎಸ್‌ಆರ್‌ಟಿಸಿ ಬಸ್ ಡೀಸೆಲ್ ಇಲ್ಲದೆ ನಿಂತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
KSRTC ಡಿಸೇಲ್ ಶಾರ್ಟೇಜ್, ಮಾರ್ಗಮಧ್ಯೆ ಕೆಎಸ್ ಆರ್ ಟಿಸಿ ಸಾರಿಗೆ ಬಸ್ ನಿಂತು ಪ್ರಯಾಣಿಕರಿಗೆ ಅಡಚಣೆ
Date: