Shivamogga Police ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸರು ದಿಢೀರ್ ಏರಿಯಾ ಡಾಮಿನೇಷನ್ (Area Domination) ವಿಶೇಷ ಗಸ್ತು ನಡೆಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು 71 ಲಘು ಪ್ರಕರಣ ದಾಖಲು ಮಾಡಿದ್ದಾರೆ.
ಎಲ್ಲೆಲ್ಲಿ ನಡೆಯಿತು ವಿಶೇಷ ಗಸ್ತು?:
Shivamogga Police ಶಿವಮೊಗ್ಗದ ಎಂ.ಕೆ.ಕೆ ರಸ್ತೆ, ಭರ್ಮಪ್ಪ ನಗರ, ಕ್ಲಾರ್ಕ್ ಪೇಟೆ, ಶೇಷಾದ್ರಿ ಪುರಂ, ಕೋಟೆ ರಸ್ತೆ, ಟಿಪ್ಪು ನಗರ, ಗೋಪಾಲ ಗೌಡ ಬಡಾವಣೆ, ಪದ್ಮ ಟಾಕೀಸ್ ಹತ್ತಿರ, ಬೊಮ್ಮನಕಟ್ಟೆ, ಶಿವಮೂರ್ತಿ ವೃತ್ತ, ತಿಲಕ್ ನಗರ, ರಾಗಿಗುಡ್ಡ.
ಶಿಕಾರಿಪುರ ಟೌನ್, ಸಂತೆ ಮಾರ್ಕೆಟ್, ಅಂಬರಗೊಪ್ಪ, ಸೊರಬದ ಆನವಟ್ಟಿ, ಸಾಗರದ ಉಪ್ಪಾರ ಕೇರಿ, ಜನ್ನತ್ ನಗರ, ಚೈನಾ ಗೇಟ್, ಕಾರ್ಗಲ್, ಯಡೆಹಳ್ಳಿ, ಆನಂದಪುರ ಮತ್ತು ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ವಿಶೇಷ ಗಸ್ತು ನಡೆಸಲಾಯಿತು. ಆಯಾ ಠಾಣೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ವಿಶೇಷ ಗಸ್ತಿನಲ್ಲಿ ಪಾಲ್ಗೊಂಡಿದ್ದರು.