Monday, December 15, 2025
Monday, December 15, 2025

Royal Challengers Bangalore “ಈ ಸಲ ಕಪ್ ನಮ್ದೆ”ಅಂತ ಅಭಿಮಾನಿಗಳ ಮಾತಿಗೆಆರ್ ಸಿ ಬಿ ಕ್ರಿಕೆಟ್ ತಂಡ ಪ್ಲೇ ಆಫ್ ಪಟ್ಟಿಯಲ್ಲಿ ಮಿಂಚಿದೆ

Date:

Royal Challengers Bangalore ಐಪಿಎಲ್ ನ ತನ್ನ ಕೊನೆಯ ಲೀಗ್ ನಲ್ಲಿ ಆರ್‌‌ಸಿಬಿ ಸಿ ಎಸ್ ಕೆ ವಿರುದ್ಧದ ಪಂದ್ಯವನ್ನು ಗೆಲ್ಲುವುದರೊಂದಿಗೆ ಪ್ಲೇಆಫ್‌ಗೆ ಎಂಟ್ರಿಕೊಟ್ಟಿದೆ.
ಐಪಿಎಲ್‌ 2024ರ 17ನೇ ಸೀಸನ್‌ನ ಮಹತ್ವದ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಆರ್‌‌ಸಿಬಿ ನಿಗದಿತ 20 ಓವರ್‌‌ಗೆ 5 ವಿಕೆಟ್‌‌ ನಷ್ಟಕ್ಕೆ 218 ರನ್‌ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಚೆನ್ನೈ ನಿಗದಿತ 20 ಓವರ್‌ಗೆ 7 ವಿಕೆಟ್‌‌ ನಷ್ಟಕ್ಕೆ 191 ರನ್‌ ಗಳಿಸುವ ಮೂಲಕ 27 ರನ್‌ ಗಳಿಂದ ಸೋಲನ್ನಪ್ಪಿತು.
ಈ ರಣರೋಚಕ ಗೆಲುವಿನ ಮೂಲಕ ಆರ್‌‌ಸಿಬಿ ಪ್ಲೇಆಫ್‌ ತಲುಪಿತು. ಈ ಪಂದ್ಯವು ಆರ್‌‌ಸಿಬಿ ಹಾಗೂ ಚೆನ್ನೈ ಪಾಲಿಗೆ ಅಗ್ನಿ ಪರೀಕ್ಷೆಯಂತಿತ್ತು. ಅದರಲ್ಲಿಯೂ ಆರ್‌‌ಸಿಬಿ ತಂಡ 181 ಓವರ್‌ನಲ್ಲಿ ಅಥವಾ 18 ರನ್‌ ಇರುವಂತೆಯೇ ಗೆಲುವು ದಾಖಲಿಸಬೇಕಿತ್ತು. ಈ ಹೋರಾಟದ ಪಂದ್ಯದಲ್ಲಿ ಆರ್‌‌ಸಿಬಿ ರೋಚಕ ಗೆಲುವು ಪ್ಲೇಆಫ್‌ಗೆ ತಲುಪಿತು.
ಆದರೆ ಈ ರೋಚಕ ಹಣಾಹಣಿಯಲ್ಲಿ ಆರ್‌‌ಸಿಬಿ ಬೌಲರ್‌ಗಳ ಸಂಘಟಿತ ದಾಳಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗಿದ್ದರೆ ಆರ್‌‌ಸಿಬಿ ಪಂದ್ಯವನ್ನು ಗೆಲ್ಲುವುದರೊಂದಿಗೆ ಪ್ಲೇಆಫ್‌ಗೆ ಎಂಟ್ರಿಕೊಡಲು ಆ ಒಂದು ಓವರ್‌ನಲ್ಲಿ ಬಿದ್ದ ವಿಕೆಟ್ ಕಾರಣ ಎನ್ನಬಹುದು. ಅದೇ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌‌ ಆಯಿತು.
Royal Challengers Bangalore ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರು ಎಸೆದ 13ನೇ ಓವರ್‌ನಲ್ಲಿ ಶಿವಂ ದುಬೆ ಅವರ ಸತತ 2 ಕ್ಯಾಚ್‌‌ ಕೈಚಲ್ಲಿದಾಗ ಅಭಿಮಾನಿಗಳು ನಿರಾಸೆಗೊಂಡಿದ್ದರು. ಆದರೆ ಅದೇ ಓವರ್‌ನ ಕೊನೆ ಎಸೆತದಲ್ಲಿ ದುಬೆ ಮತ್ತು ರಚಿನ್‌ ರವೀಂದ್ರ ಅವರ ಮಿಸ್‌‌ ಕಮ್ಯೂನಿಕೇಶನ್ ಮೂಲಕ ರಚಿನ್‌ ರನೌಟ್‌ ಆದರು. ಇದು ತಂಡದ ಗೆಲುವಿನಲ್ಲಿ ಪ್ರಮುಖ ಟರ್ನಿಂಗ್‌ ಪಾಯಿಂಟ್ ಆಯಿತು.
ಹೌದು, ಏಕೆಂದರೆ ರಚಿನ್‌ ರವೀಂದ್ರ ಆಗಲೇ ಸೆಟಲ್ಡ್‌ ಆಗಿದ್ದರು. ಆಕರ್ಷಕ ಅರ್ಧಶತಕ ಸಿಡಿಸಿ ಉತ್ತಮ ಲಯದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದರು. ರಚಿನ್‌ 37 ಎಸೆತದಲ್ಲಿ 3 ಸಿಕ್ಸ್‌ ಹಾಗೂ 5 ಫೋರ್‌ ಸಹಿತ 61 ರನ್‌ ಗಳಿಸಿದ್ದರು. ಹೀಗಾಗಿ ಅವರು ಇನ್ನೂ ಕ್ರೀಸ್‌‌ನಲ್ಲಿದ್ದರೆ ಆರ್‌‌ಸಿಬಿಗೆ ತೊಂದರೆ ಆಗುತ್ತಿತ್ತು. ಆದರೆ ಆಕ್ರಮಣಕಾರಿ ವಿಕೆಟ್‌ ತಂಡದ ಗೆಲುವಿನ ಮೊದಲ ಮೆಟ್ಟಿಲಾಯಿತು.
ಇದಾದ ಬಳಿಕ ಮತ್ತೆ 14ನೇ ಓವರ್‌ನಲ್ಲಿ ಕ್ಯಾಮರೂನ್‌ ಗ್ರೀನ್‌ ಅವರ 14.2 ಎಸೆತದಲ್ಲಿ ರವೀಂದ್ರ ಜಡೇಜಾ ನೀಡಿದ ಸುಲಭವಾದ ಕೀಪರ್‌ ಕ್ಯಾಚ್‌‌ನ್ನು ದಿನೇಶ್ ಕಾರ್ತಿಕ್‌ ಕೈಚಲ್ಲಿದರು. ಆದರೆ ಅದೇ ಓವರ್‌ನಲ್ಲಿ ಚೆನ್ನೈನ ಫವರ್‌ ಹಿಟ್ಟರ್ ಆಗಿದ್ದ ಶಿವಂ ದುಬೆ ನೇರವಾಗಿ ಲೂಕಿ ಫರ್ಗ್ಯೂಸನ್‌ ಅವರಿಗೆ ಕ್ಯಾಚ್‌ ನೀಡಿ ಔಟ್ ಆದರು. ಇದು ಆರ್‌ಸಿಬಿ ಗೆಲುವಿನಲ್ಲಿ ಇನ್ನೊಂದು ಪ್ಲಸ್‌‌ ಆಯಿತು.
ಇದೆಲ್ಲದ ನಡುವೆ ಪ್ರಥಮವಾಗಿ ಚೆನ್ನೈ ತಂಡಕ್ಕೆ ದೊಡ್ಡ ಆಘಾತ ನೀಡಿದ್ದು ಎಂದರೆ ಅದು ಮೊದಲ ಓವರ್‌ನಲ್ಲಿ ಮ್ಯಾಕ್ಸ್‌ವೆಲ್‌ ಎಸೆತದ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ನಾಯಕ ರುತುರಾಜ್‌ ಗಾಯಕ್ವಾಡ್‌‌ ಶೂನ್ಯಕ್ಕೆ ಔಟ್ ಮಾಡುವ ಮೂಲಕ ಮೊದಲ ಬ್ರೇಕ್‌ ಥ್ರೂ ಪಡೆದರು. ಅಲ್ಲದೇ ಕೊನೆಯ ಡೆತ್‌ ಓವರ್‌ಗಳಲ್ಲಿ ಆರ್‌‌ಸಿಬಿ ಬೌಲರ್‌ಗಳು ಹಾಗೂ ಫಿಲ್ಡಿಂಗ್‌ ಅದ್ಭುತವಾಗಿತ್ತು.
ಆರ್‌‌ಸಿಬಿ ಪರ ವಿರಾಟ್ ಕೊಹ್ಲಿ 29 ಎಸೆತದಲ್ಲಿ 4 ಸಿಕ್ಸ್‌ ಹಾಗೂ 3 ಫೋರ್‌ ಮೂಲಕ 47 ರನ್‌ ಸಿಡಿಸಿದರೆ, ನಾಯಕ ಫಾಫ್‌ ಡುಪ್ಲೇಸಿಸ್‌‌ 39 ಎಸೆತದಲ್ಲಿ 3 ಸಿಕ್ಸ್, 3 ಬೌಂಡರಿ ಸಹಿತ 54 ರನ್‌ ಗಳಿಸಿದರು. ಬಳಿಕ ರಜತ್‌ ಪಾಟಿದಾರ್‌‌ 23 ಎಸೆತದಲ್ಲಿ 2 ಫೋರ್‌ 4 ಸಿಕ್ಸ್‌ ಮೂಲಕ 41 ರನ್‌, ಕ್ಯಾಮರೂನ್‌ ಗ್ರೀನ್‌ 17 ಎಸೆತದಲ್ಲಿ 3 ಸಿಕ್ಸ್‌ ಮತ್ತು 3 ಫೋರ್‌ ಮೂಲಕ 38 ರನ್ ತಂಡ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಹಾಗೂ ಗೆಲುವಿನಲ್ಲಿ ಪ್ರಮುಖ ಕಾರಣ ಎಂದರೂ ತಪ್ಪಾಗಲಾರದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...