IPL Cricket ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿದೆ. ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಜೋರು ಮಳೆ ನಡವೆ ಶಿವಮೊಗ್ಗದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
ಕಲ್ಯಾಣ ಮಂಟಪದಲ್ಲಿ ಆರ್‌ಸಿಬಿ ಘೋಷಣೆ
ನಗರದ ಸರ್ಜಿ ಕನ್ವೆನ್‌ಷನ್ ಹಾಲ್‌ನಲ್ಲಿ ಬಿ.ಹೆಚ್.ಮಂಜುನಾಥ್ ಮತ್ತು ಬಿ.ಟಿ.ತನುಜಾ ಅವರ ಮದುವೆ ರಿಸೆಪ್ಷನ್ ನಡೆಯುತ್ತಿತ್ತು. ವಿಡಿಯೋ ವೀಕ್ಷಣೆಗೆ ಎರಡು ಪರದೆ ಹಾಕಲಾಗಿತ್ತು. ಐಪಿಎಲ್ ಪಂದ್ಯ ಆರಂಭವಾಗುತ್ತಿದ್ದಂತೆ ಒಂದು ಪರದೆಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನೆಂಟರು, ಇಷ್ಟರು ವೇದಿಕೆಗೆ ತೆರಳಿ ಮದುಮಕ್ಕಳ ಜೊತೆಗೆ ಫೋಟೊ ತೆಗೆಸಿ ಬಂದು ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿದರು.
IPL Cricket ಆರ್‌ಸಿಬಿ ತಂಡ ಗೆಲ್ಲುತ್ತಿದ್ದಂತೆ ಸರ್ಜಿ ಕನ್ವೆನ್‌ಷನ್ ಹಾಲ್‌ನಲ್ಲಿ ಜೋರಾಗಿ ಘೋಷಣೆಗಳನ್ನು ಕೂಗಿ, ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಮದುಮಕ್ಕಳು ಕೂಡ ಎಲ್ಲರೊಂದಿಗೆ ಕುಳಿತು ಪಂದ್ಯ ವೀಕ್ಷಿಸಿ ಖುಷಿ ಪಟ್ಟರು.
ಪಟಾಕಿ ಸಿಡಿಸಿ ಖುಷಿ
ಶನಿವಾರ ರಾತ್ರಿ ನಗರದಲ್ಲಿ ಗುಡುಗು ಸಹಿತ ಜೋರು ಮಳೆ ಸುರಿಯಿತ್ತಿತ್ತು. ಇದರ ನಡುವೆಯು ಅಭಿಮಾನಿಗಳು ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಮಾಡಲಾಯಿತು. ನಗರದ ವಿವಿಧೆಡೆ ನಡುರಾತ್ರಿಯು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ, ಘೋಷಣೆಗಳನ್ನು ಕೂಗಿ ಖುಷಿ ಪಟ್ಟರು.
IPL Cricket ಮದುವೆ ಸಡಗರದೊಂದಿಗೆ ಆರ್ ಸಿ ಬಿ ಕ್ರಿಕೆಟ್ ಮ್ಯಾಚ್ ಆನಂದ ಅನುಭವಿಸಿದ ಮಂದಿ
Date: