Tuesday, October 1, 2024
Tuesday, October 1, 2024

Srinidhi Silks Shivamogga ಶ್ರೀನಿಧಿ ಸಿಲ್ಕ್ಸ್ ವ್ಯಾವಹಾರಿಕ ಸಂಸ್ಥೆಗೆ40 ವರ್ಷಗಳ ಪರಂಪರೆ ಇರುವುದು ಸುಲಭದ ವಿಷಯವಲ್ಲ- ಡಿ.ಎಸ್.ಅರುಣ್

Date:

Srinidhi Silks Shivamogga ಶಿವಮೊಗ್ಗ ನಗರದ ಪ್ರಸಿದ್ಧ ಬಟ್ಟೆಗಳ ಮಳಿಗೆಯಾದ ಶ್ರಿನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ಸ್ 40ನೇ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿರುವ ಬಟ್ಟೆಗಳ ಮೇಲಿನ ವಿಶೇಷ ರಿಯಾಯ್ತಿ ಮಾರಾಟಕ್ಕೆ ಶಾಸಕ ಡಿ. ಎಸ್. ಅರುಣ್ ಚಾಲನೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದಲ್ಲಿ ಆಯೋಜನೆಗೊಂಡಿರುವ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಒಂದು ವ್ಯಾವಹಾರಿಕ ಸಂಸ್ಥೆಗೆ ನಲವತ್ತು ವರ್ಷಗಳ ಪರಂಪರೆ ಇದೆ ಎಂದರೆ ಅದು ಸುಲಭದ ವಿಷಯವಲ್ಲ. ಇದರ ಹಿಂದೆ ಸಂಸ್ಥೆಯನ್ನು ಹುಟ್ಟು ಹಾಕಿದವರ ದೂರದೃಷ್ಟಿ ಹಾಗೂ ನಡೆಸಿಕೊಂಡು ಬರುತ್ತಿರುವವರ ಪ್ರಾಂಜಲ ಪರಿಶ್ರಮ ಎರಡೂ ಸೇರಿದೆ ಎಂದು ಪ್ರಶಂಸಿಸಿದರು.

ಅನಿರೀಕ್ಷಿತವಾಗಿ ಸುರಿದ ಮಳೆಯ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ಯಾಷನ್ ಷೋಗಳನ್ನು ರದ್ದು ಪಡಿಸಲಾಗಿದೆ. ಗ್ರಾಹಕರ ಹಿತ ದೃಷ್ಟಿಯಿಂದ ರಿಯಾಯ್ತಿ ಮಾರಾಟವನ್ನು ಏರ್ಪಡಿಸಿರುವುದು ಗಮನಾರ್ಹ ಎಂದ ಅವರು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಎನ್. ಗೋಪಿನಾಥ್‌ರವರು, ಶ್ರೀನಿಧಿ ಪರಂಪರೆಯೊಂದಿಗೆ ಶ್ರೇಷ್ಠ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಂಡು ಬಂದಿರುವುದರಿಂದಲೇ ನಿರಂತರವಾಗಿ ನಾಲ್ಕು ದಶಕಗಳ ಕಾಲ ಮುನ್ನಡೆಯಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀನಿಧಿ ಸಂಸ್ಥೆಯ ಹಿರಿಯರಾದ ಟಿ. ಆರ್. ಅಶ್ವತ್ಥನಾರಾಯಣ ಶೆಟ್ಟಿ, ಟಿ. ಆರ್. ವೆಂಕಟೇಶ ಮೂರ್ತಿ ಸೇರಿದಂತೆ ಕುಟುಂಬದ ಹಿರಿಯ ಕಿರಿಯ ಸದಸ್ಯರು ಹಾಜರಿದ್ದರು.

Srinidhi Silks Shivamogga ಈ ಪ್ರದರ್ಶನ ಹಾಗೂ ಮಾರಾಟ ಮೇಳ ಬೆಳಿಗ್ಗೆ 10ರಿಂದ ಸಂಜೆ 08ರವರೆಗೆ ನಡೆಯಲಿದೆ. ಶ್ರೀನಿಧಿಯ ಅದೃಷ್ಟ ಬಹುಮಾನದ ಯೋಜನೆಯ ಬಹುಮಾನಗಳ ಬಂಪರ್ ಡ್ರಾ ಮೇ. 19ರ ಭಾನುವಾರ ಸಂಜೆ 6 ಗಂಟೆಗೆ ನಡೆಯಲಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದ ಆವರಣದಲ್ಲಿ, ನಿರ್ಮಿಸಲಾಗಿರುವ ವಿಶೇಷ ಜರ್ಮನ್ ಟೆಂಟ್‌ನಲ್ಲಿ ಈ ಡ್ರಾ ನಡೆಯಲಿದ್ದು, ನಗರದ ಗಣ್ಯರು, ಆಹ್ವಾನಿತರು ಹಾಗೂ ಗ್ರಾಹಕರು ನಡೆಸಿಕೊಡಲಿದ್ದಾರೆ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...