Monday, February 2, 2026
Monday, February 2, 2026

Klive Special Article ಮಳೆ ಬೀಳುವ ಮುನ್ನ ಮರಗಿಡಗಳ ಬಗ್ಗೆ ಯೋಚಿಸಿ

Date:

ಎಚ್.ಕೆ.ವಿವೇಕಾನಂದ

Klive Special Article ಈ ವರ್ಷದ ಬೇಸಿಗೆಯ ತಾಪಮಾನ ಬಹುತೇಕ ಇಡೀ ಕರ್ನಾಟಕದ ಜನರನ್ನು ಅಲುಗಾಡಿಸಿ ಬಿಟ್ಟಿತು. ಅದರಲ್ಲೂ ಮಧ್ಯಮ, ಕೆಳಮಧ್ಯಮ ಮತ್ತು ಬಡವರ್ಗದ ಜನರು ತಾಪಮಾನದ ಏರಿಕೆಯಿಂದ ತತ್ತರಿಸಿ ಹೋದರು. ಕೆಲವು ಜೀವಗಳು ಹೊರಟೇ ಹೋದವು. ಇನ್ನೊಂದಷ್ಟು ಜನ ಅನಾರೋಗ್ಯಗಳಿಗೆ ತುತ್ತಾದರು. ಪ್ರಾಣಿಪಕ್ಷಿಗಳು ಕಣ್ಣ ಮುಂದೆಯೇ ತುಂಬಾ ಒದ್ದಾಡಿದವು……

ಈಗ ಎರಡು ಮೂರು ದಿನದಿಂದ ಸ್ವಲ್ಪಮಟ್ಟಿಗೆ ಉಷ್ಣಾಂಶ ಕಡಿಮೆಯಾಗಿದೆ. ಆದರೆ ಆ ತಾಪಮಾನದ ಹೊಡೆತ ನಮಗೆ ಒಂದು ಬಹುದೊಡ್ಡ ಪಾಠವಾಗಬೇಕು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ವರ್ಷ ಹೀಗೆ ಒಂದೊಂದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜಾಸ್ತಿಯಾಗುತ್ತಾ ಹೋಗುತ್ತದೆ ಎಂದು ಯಾರೋ ಬರೆದ ಒಂದು ಲೇಖನ ಪ್ರಸಾರವಾಗುತ್ತಿದೆ. ಅದು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ ಮುಂದೆಯೂ ಪರಿಸರವನ್ನು ಹೀಗೇ ನಿರ್ಲಕ್ಷಿಸಿದರೆ ಖಂಡಿತವಾಗಿಯೂ ತಾಪಮಾನದ ಹೊಡೆತಕ್ಕೆ ನಾವೆಲ್ಲರೂ ನಾಶವಾಗುವುದು ನಿಶ್ಚಿತ. ಅದಕ್ಕಾಗಿ ಆ ಹಂತ ತಲುಪುವ ಮುನ್ನವೇ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಮತ್ತು ಆ ನಿಟ್ಟಿನಲ್ಲಿ ಒಂದಷ್ಟು ಕೆಲಸ ಮಾಡಬೇಕಾಗಿದೆ……..

Klive Special Article ಮುಖ್ಯವಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ಈ ವರ್ಷದ ಈಗ ಪ್ರಾರಂಭವಾಗಿರುವ ಮಳೆಗಾಲದಲ್ಲಿ ಕನಿಷ್ಠ ಒಂದು ಲಕ್ಷ ಗಿಡಗಳನ್ನು ಬೆಳೆಸುವ ಪ್ರತಿಜ್ಞೆ ಮಾಡಬೇಕು. ಹಾಗೆಯೇ ಹೋಬಳಿ ಮಟ್ಟದಲ್ಲಿ 10 ಲಕ್ಷ ಗಿಡಗಳು, ತಾಲೂಕು ಮಟ್ಟದಲ್ಲಿ 50 ಲಕ್ಷದಷ್ಟು ಗಿಡಗಳು ಮತ್ತು ಗ್ರೇಡ್-ಒನ್ ನಗರಗಳಲ್ಲಿ ಅಂದರೆ ಜಿಲ್ಲಾಮಟ್ಟದಲ್ಲಿ ಒಂದು ಕೋಟಿ ಗಿಡಮರಗಳನ್ನು ನೆಡುವ ಕಾರ್ಯಕ್ರಮವನ್ನು ತತ್ ಕ್ಷಣದಿಂದಲೇ ಹಮ್ಮಿಕೊಳ್ಳಬೇಕು. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಜಂಟಿ ನೇತೃತ್ವದಲ್ಲಿ ಇದನ್ನು ಆರಂಭಿಸಬೇಕು. ಅಂದರೆ ಇಡೀ ರಾಜ್ಯದಲ್ಲಿ ನೂರಾರು ಕೋಟಿ ಗಿಡಗಳನ್ನು ಈ ಮಳೆಗಾಲದ ಸಮಯದಲ್ಲಿ ನೆಟ್ಟರೆ ಕನಿಷ್ಠ ಅದರಲ್ಲಿ ತೀರಾ ಕಡಿಮೆ ಎಂದರೂ 30 ರಿಂದ 40 ಶೇಕಡಾ ಗಿಡಗಳು ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾದರೆ ಎಷ್ಟೋ ಕೋಟಿ ಮರಗಳು ಬೆಳೆಯುತ್ತವೆ. ಇಡೀ ರಾಜ್ಯದಲ್ಲಿ ಅರಣ್ಯ ಪ್ರದೇಶ ತುಂಬಾ ಹೆಚ್ಚಾಗುತ್ತದೆ…..

ಆಗ ಆಮ್ಲಜನಕ ಹೆಚ್ಚಾಗುತ್ತದೆ. ಮಳೆಯ ಕೊರತೆ ಕಡಿಮೆಯಾಗುತ್ತದೆ. ತಾಪಮಾನದ ಕುಸಿತ, ಮನಸ್ಸಿನ ಆಹ್ಲಾದ, ಆರೋಗ್ಯ ಎಲ್ಲವುಗಳಲ್ಲಿ ಕೆಲವೇ ವರ್ಷದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟು ಮಾಡುತ್ತದೆ‌…..

ಇಷ್ಟನ್ನು ಸಹ ನಮ್ಮಿಂದ ಮಾಡಲು ಸಾಧ್ಯವಿಲ್ಲವೇ ! ಪ್ರಕೃತಿ ತನ್ನ ಕಷ್ಟ ಸಹಿಸಿ ನಮಗೆ ಸಹಾಯ ಮಾಡುತ್ತದೆ. ನಾವು ಆ ಪರಿಸರವನ್ನು ಉಳಿಸಲು ಇಷ್ಟೂ ಪ್ರಯತ್ನ ಪಡದಿದ್ದರೆ ನಮಗೆ ಕ್ಷಮೆಯೇ ಇಲ್ಲ…..

ಯಾರು ಏನು ಮಾಡುತ್ತಿರೋ ಗೊತ್ತಿಲ್ಲ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಾಮಾನ್ಯ ಜನರು ದಯವಿಟ್ಟು ಇದನ್ನು ಒಂದು ದೊಡ್ಡ ಅಭಿಯಾನವಾಗಿ ಪ್ರಾರಂಭಿಸಿ, ಮಳೆಗಾಲದಲ್ಲಿ ಗಿಡ ನೆಟ್ಟರೆ, ನೀರು ಉಣಿಸುವ ತೊಂದರೆಯೂ ಇರುವುದಿಲ್ಲ. ಸಹಜವಾಗಿಯೇ ಮಳೆ ನೀರಿನಲ್ಲಿ ಅವು ಬೆಳೆಯುತ್ತವೆ. ಸ್ವಲ್ಪ ಸಸಿ ದೊಡ್ಡದಾಗುವವರೆಗೂ ಒಂದಷ್ಟು ಜಾಗೃತಿ ವಹಿಸಿದರೆ ಸಾಕು….

ಯೋಚಿಸಿ, ಏನನ್ನಾದರೂ ಮಾಡಿ. ಮುಂದಿನ ವರ್ಷಕ್ಕೆ ಇಷ್ಟೊಂದು ತಾಪಮಾನ ಹೆಚ್ಚಾಗದೆ ನಿಯಂತ್ರಿಸಲು ನಮ್ಮ ನಮ್ಮ ಕರ್ತವ್ಯ ನಿರ್ವಹಿಸೋಣ. ಈ ವರ್ಷದ ಭೀಕರ ಬಿಸಿಲನ್ನು ಮರೆಯುವುದು ಬೇಡ. ಅದು ಸದಾ ನೆನಪಾಗಿ ಗಿಡ ಬೆಳೆಸುವ ಕೆಲಸ ವೇಗ ಪಡೆಯಲಿ……

ಹಾಗೆಯೇ, ಫ್ಲೈ ಓವರ್ ಗಳು,
ಅನಾವಶ್ಯಕವಾದ ಉದ್ದುದ್ದ, ಹೆಚ್ಚು ಅಗಲದ ರಸ್ತೆಗಳು ಮುಂತಾದವುಗಳನ್ನು ಕಡಿಮೆ ಮಾಡಿ, ಆ ಜಾಗದಲ್ಲಿ ಕೆರೆಕಟ್ಟೆಗಳು, ಇಂಗು ಗುಂಡಿಗಳು ಮುಂತಾದ ನೀರಾವರಿ ಯೋಜನೆಗಳು, ನೀರಿನ ಸಂಗ್ರಹ ಕಾಲುವೆಗಳ ಬಗ್ಗೆ ಹೆಚ್ಚು ಗಮನಹರಿಸುವಂತೆ ಸ್ಥಳೀಯ ಜನರು ಅಲ್ಲಿನ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯನ್ನು ಒತ್ತಾಯಿಸಬೇಕಾಗುತ್ತದೆ. ಅಭಿವೃದ್ಧಿಯ ಪರಿಕಲ್ಪನೆಯನ್ನು ನಾವು ಬದಲಾಯಿಸಿಕೊಳ್ಳದಿದ್ದರೆ ಇಡೀ ದೇಶ ಸಿಮೆಂಟ್ ಕಾಡಾಗಿ ತಾಪಮಾನ, ಬರಗಾಲ ನಮ್ಮನ್ನು ನಿರಂತರವಾಗಿ ಕಾಡುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಅತ್ಯಂತ ಅಪಾಯಕಾರಿ ವಾತಾವರಣವನ್ನು ಕೊಡುಗೆಯಾಗಿ ನೀಡಿದಂತಾಗುತ್ತದೆ.
ಅವರು ನಮ್ಮನ್ನು ಕ್ಷಮಿಸುವುದಿಲ್ಲ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,

ಬರಹ : ವಿವೇಕಾನಂದ.ಹೆಚ್.ಕೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...