Sunday, December 14, 2025
Sunday, December 14, 2025

Kote Anjaneya Swamy Shivamogga ಮೇ 15 ರಿಂದ 23 ರವರೆಗೆ ಶ್ರೀಕೋಟೆ ಆಂಜನೇಯ ಸನ್ನಿಧಿಯಲ್ಲಿ ವಿವಿಧ ಕಾರ್ಯಕ್ರಮಗಳು- ಮಾಹಿತಿ

Date:

Kote Anjaneya Swamy Shivamogga ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದ ಭಾರತೀಯ ವಿಚಾರ ವೇದಿಕೆ, ಭಕ್ತ ಶಿರೋಮಣಿ ಶ್ರೀ ಅನಂತರಾಮ ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್ ಗಳ ಸಹಭಾಗಿತ್ವದಲ್ಲಿ ದೇವಾಲಯದ ಆವರಣದಲ್ಲಿ, ಮೇ. ೧೫ರಿಂದ ಹನುಮ ಜಯಂತಿ ಅಂಗವಾಗಿ ಪ್ರತಿ ನಿತ್ಯ ಸಂಜೆ ೦೭.೦೦ ಗಂಟೆಗೆ ವೈವಿಧ್ಯಮಯ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮೇ. ೧೫ರಂದು ಬೆಂಗಳೂರಿನ ಹೆಸರಾಂತ ಚಲನ ಚಿತ್ರ ಸಂಗೀತ ನಿರ್ದೇಶಕ, ಕಲಾವಿದ, ಬಿಗ್‌ಬಾಸ್ ಖ್ಯಾತಿಯ ವಾಸುಕಿ ವೈಭವ್ ಮತ್ತು ತಂಡದವರಿAದ ಭಕ್ತಿಭಾವ ಸಂಗಮ,

ಮೇ. ೧೬ರಂದು ಪ್ರಸಿದ್ಧ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ರವರಿಂದ ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಮೌಲ್ಯಗಳು ಕುರಿತು ಉಪನ್ಯಾಸ,

ಮೇ. ೧೭ರಂದು ಬೆಂಗಳೂರಿನ ಹಾರಿಕಾ ಮಂಜುನಾಥ್‌ರವರಿAದ ಭಾರತೀಯ ಸಂಸ್ಕೃತಿ ಕುರಿತು ಉಪನ್ಯಾಸ,

ಮೇ. ೧೮ರಂದು ಪೃಥ್ವಿಗೌಡ ಕ್ರಿಯೇಷನ್ಸ್ ವತಿಯಿಂದ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರಿಂದ ಚಿರಂಜೀವಿ ಸಾವಿರದ ಹನುಮ ಕುರಿತು ಉಪನ್ಯಾಸ,

ಮೇ. ೧೯ರಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರಿಂದ ವಿಶ್ವಗುರು ಭಾರತ ಕುರಿತು ಉಪನ್ಯಾಸ,

ಮೇ. ೨೦ರಂದು ಬೆಂಗಳೂರಿನ ವೀಣಾ ಬನ್ನಂಜೆಯವರಿಂದ ಭಾರತೀಯ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಕುರಿತು ಉಪನ್ಯಾಸ,

ಮೇ. ೨೧ರಂದು ಭಾರತೀಯ ಸಂಸ್ಕೃತಿಗೆ ಮಂದಿರಗಳ ಕೊಡುಗೆ ಕುರಿತು ದೇವಾಲಯ ಸಂವರ್ಧನ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ್ ಹಾಗೂ ಭಾರತೀಯ ಸಂಸ್ಕೃತಿಗೆ ಸೋದರಿ ನಿವೇದಿತಾ ಕೊಡುಗೆ ಕುರಿತು ಪ್ರಿಯಾ ಅನಂತರಾಮನ್‌ರವರಿಂದ ಉಪನ್ಯಾಸ ನಡೆಯಲಿದೆ.

Kote Anjaneya Swamy Shivamogga ಮೇ. ೨೨ರಿಂದ ಧಾರ್ಮಿಕ ಕಾರ್ಯಕ್ರಮಗಳು
ಹನುಮ ಜಯಂತಿ ಅಂಗವಾಗಿ ಮೇ. ೨೨ರ ಬುಧವಾರ ಸ್ವಾತಿ ನಕ್ಷತ್ರ, ಬೆಳಿಗ್ಗೆ ೮.೦೦ ರಿಂದ ಶ್ರೀ ಆಂಜನೇಯರಿಗೆ ಹಾಗೂ ಶ್ರೀ ನಾರಸಿಂಹರಿಗೆ ಅಭಿಷೇಕ, ಬೆಳಿಗ್ಗೆ ೧೦.೦೦ ರಿಂದ ಶ್ರೀ ನಾರಸಿಂಹ ಸುದರ್ಶನ ಹೋಮ ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ತೀರ್ಥಪ್ರಸಾದ ವಿನಿಯೋಗ ರಾತ್ರಿ ೮.೦೦ ರಿಂದ ಶ್ರೀ ಲಕ್ಷಿ÷್ಮÃನರಸಿಂಹರ ಪಲ್ಲಕ್ಕಿ ಉತ್ಸವ ಸಹಸ್ರ ನಾಮ, ತೀರ್ಥ ಪ್ರಸಾದ ವಿನಿಯೋಗ.

ಮೇ. ೨೩ರ ಗುರುವಾರ ವಿಶಾಖ ನಕ್ಷತ್ರ, ಬೆಳಿಗ್ಗೆ ೮.೦೦ ರಿಂದ ಶ್ರೀ ಆಂಜನೇಯರಿಗೆ ಅಭಿಷೇಕ, ಬೆಳಿಗ್ಗೆ ೧೦.೦೦ ರಿಂದ ಶ್ರೀ ರಾಮತಾರಕ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ತೀರ್ಥಪ್ರಸಾದ ವಿನಿಯೋಗ, ರಾತ್ರಿ ೯.೦೦ ರಿಂದ ಶ್ರೀ ಪಟ್ಟಾಭಿರಾಮರ ಪಲ್ಲಕ್ಕಿ ಉತ್ಸವ, ತೀರ್ಥ ಪ್ರಸಾದ ವಿನಿಯೋಗ.
೨೪ರ ಶುಕ್ರವಾರ ಹನುಮಜಯಂತಿ ಅನುರಾಧ ನಕ್ಷತ್ರ, ಬೆಳಿಗ್ಗೆ ೯.೦೦ ರಿಂದ ಶ್ರೀ ಆಂಜನೇಯರಿಗೆ ಮಹಾಭಿಷೇಕ, ಬೆಳಿಗ್ಗೆ ೧೦.೦೦ ರಿಂದ ಶ್ರೀ ಮಾರುತಿ ಮೂಲ ಮಂತ್ರ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ ಸಂಜೆ ೭.೦೦ ರಿಂದ ಶ್ರೀ ರಾಮಹನುಮರ ಎದುರು ಉತ್ಸವ ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...