Monday, April 13, 2026
Monday, April 13, 2026

Shivamogga CBSE Results ಸಿಬಿಎಸಿಇ 10 ನೇ ತರಗತಿ ಪರೀಕ್ಷಾ ಫಲಿತಾಂಶ. ಶಿವಮೊಗ್ಗ ನ್ಯಾಷನಲ್ ಪಬ್ಲಿಕ್ ಶಾಲೆಯ ಗಮನಾರ್ಹ ಸಾಧನೆ

Date:

Shivamogga CBSE Results ನೇ ಸಾಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಹತ್ತನೇ ತರಗತಿಗಳ ಫಲಿತಾಂಶ ಪ್ರಕಟವಾಗಿದ್ದು, ನಗರದ
ರಾಷ್ಟ್ರೀಯ ಶಿಕ್ಷಣ ಸಮಿತಿಯ ನ್ಯಾಷನಲ್ ಪಬ್ಲಿಕ್ ಶಾಲೆಗೆ ಶೇ.99.34% ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದ 150 ವಿದ್ಯಾರ್ಥಿಗಳಲ್ಲಿ 149 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿನಿಯರಾದ ಅನ್ವೇಷ.ಡಿ.ಆರ್ (ಶೇ.97.60), ಸೃಷ್ಟಿ. ಎಸ್.(ಶೇ.96.20), ಮೌಲ್ಯ.ಹೆಚ್ (ಶೇ.95.80), ತೇಜಲ್ ಸ್ವಾಮಿ (ಶೇ.95.80), ಅನಮ್ ತಾಜ್ (ಶೇ.95.20) ಅಂಕಗಳೊಂದಿಗೆ ಅಮೋಘ ಸಾಧನೆ ತೋರಿದ್ದಾರೆ.
Shivamogga CBSE Results ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related