Monday, April 13, 2026
Monday, April 13, 2026

Dr. RC Jagdish ಸುಸ್ಥಿರ ಜೀವನಕ್ಕಾಗಿ ಸೂಕ್ತ ಕೌಶಲ್ಯಾಭಿವೃದ್ಧಿ ತರಬೇತಿ ಅಗತ್ಯ-ಡಾ.ಆರ್.ಸಿ.ಜಗದೀಶ್

Date:

Dr. RC Jagdish ಶಿವಮೊಗ್ಗ ಕೃಷಿ ವಿವಿಯು ವಿಶ್ವವಿದ್ಯಾಲಯವು ೪ ಲಕ್ಷ ರೈತರಿಗೆ ಕೃಷಿ ಹಾಗೂ ಕೃಷಿಯೇತರ ತಂತ್ರಜ್ಞಾನಗಳನ್ನು ತಲುಪಿಸುವ ಗುರಿ ಹೊಂದಿದೆ. ಬೇಕರಿ ಮತ್ತು ಅಣಬೆ ಉದ್ಯಮಗಳು ಸ್ವ ಉದ್ಯೋಗವನ್ನು ಸೃಷ್ಟಿಸುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತಹ ಆಹಾರಗಳನ್ನು ಪೂರೈಸಲು ಹಾಗೂ ಸುಸ್ಥಿರ ಜೀವನಕ್ಕಾಗಿ ಸೂಕ್ತ ಕೌಶಲ್ಯಾಭಿವೃದ್ಧಿ ತರಬೇತಿಯು ಅತ್ಯಗತ್ಯವಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ. ಜಗದೀಶ್ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಮತ್ತು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಬೇಕರಿ ಹಾಗೂ ಕನ್ಫೆಕ್ಷನರೀಸ್ ಮತ್ತು ಹೈಟೆಕ್ ಅಣಬೆ ಬೇಸಾಯ ಕುರಿತ ೧೦ ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪರ್ಕದೊಂದಿಗೆ ರೈತ ಮತ್ತು ರೈತ ಮಹಿಳೆಯರು ಯಶಸ್ವಿ ಉದ್ಯಮಿಗಳು ಆಗಬಹುದು ಎಂದರು.
ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಬೇಕು. ಅಣಬೆ ಸ್ವ ಉದ್ಯೋಗದ ಬಗ್ಗೆ, ಮೌಲ್ಯವರ್ಧನೆಯ ಬಗ್ಗೆ ಯುವಕ ಯುವತಿಯರಲ್ಲಿ ಜ್ಞಾನವನ್ನು ಹೆಚ್ಚಿಸುವುದರೊಂದಿಗೆ, ಸ್ವ-ಉದ್ಯೋಗ ಪ್ರಾರಂಭಿಸಲು ದೊರೆಯುವ ಹಣಕಾಸಿನ ಸೌಲಭ್ಯಗಳು, ಖರ್ಚು-ವೆಚ್ಚಗಳ ನಿರ್ವಹಣೆ, ಮಾರುಕಟ್ಟೆಯ ಮಾರ್ಗಗಳ ಬಗ್ಗೆ ತರಬೇತಿಯಲ್ಲಿ ಶಿಬಿರಾರ್ಥಿಗಳು ಆಸಕ್ತಿಯಿಂದ ಕಲಿಯಬೇಕು ಮತ್ತು ತರಬೇತಿಯನ್ನು ಪಡೆದ ನಂತರ ಇತರರಿಗೂ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಬಹುದು ಎಂದರು.
ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಬಿ. ಹೇಮ್ಲಾ ನಾಯ್ಕ್ ಮಾತನಾಡಿ, ರೈತರಿಗೆ, ಮುಖ್ಯವಾಗಿ ಯುವಕ ಯುವತಿಯರಿಗೆ ಬದುಕು ಕಟ್ಟಿಕೊಳ್ಳಲು ತರಬೇತಿ ಶಿಬಿರಗಳು ಉಪಯುಕ್ತವಾಗಲಿದೆ. ಆರೋಗ್ಯಕರ ತಿಂಡಿ ತಿನಿಸುಗಳನ್ನು ಮಾಡಲು ಬೇಕರಿ ಉದ್ಯಮ ಮತ್ತು ಅಪೌಷ್ಟಿಕತೆಯನ್ನು ನಿರ್ವಹಣೆ ಮಾಡುವಲ್ಲಿ ಅಣಬೆ ಬೇಸಾಯ ಉದ್ಯಮಗಳು ಬಹಳ ಪ್ರಾಮುಖ್ಯತೆ ಹೊಂದಿದೆ. ಪೂರಕ ಮಾರುಕಟ್ಟೆ
Dr. RC Jagdish ಕೃಷಿ ವಿಸ್ತರಣಾ ನಿರ್ದೇಶಕ ಡಾ. ಕೆ. ಟಿ. ಗುರುಮೂರ್ತಿ ಮಾತನಾಡಿ, ಶುಲ್ಕ ಸಹಿತ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವುದು ವಿಶ್ವವಿದ್ಯಾಲಯದ ಹಲವು ವರ್ಷಗಳ ಪರಿಶ್ರಮವಾಗಿದೆ. ಹಾಗಾಗಿ ಈ ತರಬೇತಿಯಿಂದ ಸಿಗುವ ಮಾಹಿತಿಯನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟದ ಉದ್ಯಮಶೀಲರಾಗಿ ಎಂದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ. ಎಂ. ದಿನೇಶ್ ಕುಮಾರ್, ಆಯೋಜಕ ಡಾ. ನಂದೀಶ್ ಎಂ. ಎಸ್, ಡಾ. ಸುಧಾರಾಣಿ, ಡಾ. ಜಿ. ಕೆ. ಗಿರಿಜೇಶ್ ವಿವಿಧ ತಾಲೂಕುಗಳಿಂದ ಆಗಮಿಸಿದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Asha Bhosle ಭಾರತೀಯ‌ “ಇನಿದನಿ “ಆಶಾ ಭೋಂಸ್ಲೆ ಇನ್ನಿಲ್ಲ.!

Asha Bhosle ಭಾರತದ ಜನಪ್ರಿಯ ಗಾಯಕಿ ಆಶಾ ಭೋಂಸ್ಲೆ (92). ಅವರು...

Bapuji Institute of Hi-Tech Education ಯಶಸ್ವಿ ಬದುಕಿಗೆ ಶಾಲಾ ಪಾಠಕ್ಕಿಂತ ಜೀವನ ಪಾಠವೇ ಮುಖ್ಯ- ಡಾ.ರಾಹುಲ್ ದೇವರಾಜ್

Bapuji Institute of Hi-Tech Education ಜಾಗತಿಕ ಸವಾಲುಗಳನ್ನೆದುರಿಸುತ್ತಾ ಬದುಕಿನಲ್ಲಿ ಯಶಸ್ಸು...

Rovers and Rangers ರಕ್ತದಾನ ಅತ್ಯಂತ ಮಹತ್ವದ ದಾನ – ಕೆ.ಎಸ್.ಗೌತಮ್

Rovers and Rangers ಸಾಗರದ ಎಲ್ ಬಿ ಮತ್ತು ಎಸ್ ಬಿ...