ಮತದಾನದ ಬಳಿಕ ಹೀಗೊಂದು ಲೆಕ್ಕಾಚಾರ….
ಕಾಂಗ್ರೆಸ್ ಗೆಲುವಿನ ಸಾಧ್ಯತೆಯೇ ಹೆಚ್ಚು…
Klive Special Article ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಶೇ. 62ರಷ್ಟು ಮತದಾನವಾಗಿದೆ. ಅಂದರೆ 21 ಲಕ್ಷ ಮತದಾರರಲ್ಲಿ 13 ಲಕ್ಷ ಮತಗಳಷ್ಟು ಚಲಾವಣೆಯಾಗಿದೆ.
ಒಂದು ಲೆಕ್ಕಾಚಾರದ ಪ್ರಕಾರ ಮುಸ್ಲಿಮರು ಶೇ. 65-70ರಷ್ಟು ಮತದಾನ ಮಾಡಿದ್ದು ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿಗೆ ಕಾಂಗ್ರೆಸ್‌ಗೆ 3,10 ಲಕ್ಷ ಮತಗಳು ಬಿದ್ದಂತಾಯ್ತು. ಇನ್ನು ಎಸ್‌ಸಿ (ಬಲಗೈ) 2 ಲಕ್ಷ ಮತದಾರರು ಇದ್ದು, ಇವರಲ್ಲಿ ಶೇ. 70ರಷ್ಟು ಮತದಾನ ಮಾಡಿದ್ದು, ಅವರಲ್ಲಿ ಶೇ. 95%ರಷ್ಟು ಜನ ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿ 1.30 ಲಕ್ಷ ಮತಗಳು ಕಾಂಗ್ರೆಸ್‌ಗೆ ಬಂದಂತಾಯ್ತು.
ಕೋಲಿ-ಕಬ್ಬಲಿಗರು 2.50 ಲಕ್ಷ ಮತದಾರರಿದ್ದು, ಅವರಲ್ಲಿ ಶೇ. 60 ಮತದಾನ ಮಾಡಿದ್ದು, ಆ ಪೈಕಿ ಶೇ. 75ರಷ್ಟು ಜನರು ಕಾಂಗ್ರೆಸ್‌ಗೆ ಹಾಕಿರುತ್ತಾರೆ. ಅಂದರೆ ಅಲ್ಲಿ 1.10 ಲಕ್ಷ ಮತಗಳು ಕಾಂಗ್ರೆಸ್‌ಗೆ ಬಂದಂತಾಯ್ತು.
ಲಿಂಗಾಯತರು 4.60 ಲಕ್ಷ ಇದ್ದು, ಇವರಲ್ಲಿ ಶೇ. 65ರಷ್ಟು ಮತದಾನ ಮಾಡಿದ್ದು, ಆ ಪೈಕಿ ಕಾಂಗ್ರೆಸ್‌ಗೆ 25ರಷ್ಟು ಮತ ಹಾಕಿರುತ್ತಾರೆ. ಅಂದರೆ 75 ಸಾವಿರ ಮತಗಳು ಬಂದAತಾಯ್ತು.
ಬAಜಾರ ಮತದಾರರು 1.40 ಲಕ್ಷ ಇದ್ದು, ಇವರಲ್ಲಿ ಶೇ. 70ರಷ್ಟು ಮತದಾನ ಮಾಡಿದ್ದು, 95 ಸಾವಿರ ಮತದಾರರು ಮತದಾನ ಮಾಡಿದ್ದು, ಇದರಲ್ಲಿ ಶೇ. 10ರಷ್ಟು ಅಂದರೆ 15 ಸಾವಿರ ಮತದಾರರು ಕಾಂಗ್ರೆಸ್‌ಗೆ ಹಾಕಿರುತ್ತಾರೆ.
ಮಾದಿಗ ಮತದಾರರು 1.50 ಲಕ್ಷ ಇದ್ದು, ಇವರಲ್ಲಿ ಶೇ. 60ರಷ್ಟು ಮತದಾನ ಮಾಡಿದ್ದು, ಅವರಲ್ಲಿ ಶೇ. 40ರಷ್ಟು ಕಾಂಗ್ರೆಸ್‌ಗೆ ಮತದಾನ ಮಾಡಿದ್ದು, 35 ಸಾವಿರ ಕಾಂಗ್ರೆಸ್‌ಗೆ ಹಾಕಿರುತ್ತಾರೆ.
Klive Special Article ಭೋವಿ-ವಡ್ಡರು, ಕುರುಬರು, ವಿಶ್ವಕರ್ಮ, ರೆಡ್ಡಿ, ಕೊರಮ-ಕೊರಚ, ಡೋರ, ವಾಲ್ಮೀಕಿ, ಮಡಿವಾಳ, ಹೂಗಾರ, ಸವಿತಾ-ಹಡಪದ, ಕ್ಷತ್ರಿಯ, ಮರಾಠ,
ಮತ್ತಿತರ ಸಮುದಾಯಗಳಿಂದ ಕನಿಷ್ಠ ತಲಾ 5-10 ಸಾವಿರ ಮತ ಬಂದರೂ ಸಾಕು ಕಾಂಗ್ರೆಸ್ ಗೆಲ್ಲಲಿದೆ. ಹೀಗೆಯೇ ಆಗಲಿದೆ.