DIPR Karnataka ದಿನದಿಂದ ದಿನಕ್ಕೆ ಬೇಸಿಗೆಯ ತಾಪ ಏರುತ್ತಿದ್ದು, ಇದು ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ. ಅತಿ ಸುಸ್ತು, ತಲೆಸುತ್ತಿನಂತಹ ಲಕ್ಷಣಗಳಿಗೆ ಎಲ್ಲಾ ವಯೋಮಾನದವರು ಒಳಗಾಗುತ್ತಿದ್ದಾರೆ.
ಅಧಿಕ ತಾಪವು ನಿರ್ಜಲೀಕರಣದಂತಹ ಸಮಸ್ಯೆ ಉಂಟು ಮಾಡುತ್ತದೆ ಎಂದು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
DIPR Karnataka ಇದನ್ನು ನಿರ್ಲಕ್ಷಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ದೇಹದ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವಾಗಿ ಹೃದಯಾಘಾತ, ಸ್ಟ್ರೋಕ್‌ನಂತಹ ಸಮಸ್ಯೆಗಳಿಗೆ ತುತ್ತಾಗಬಹುದು. ಆದ್ದರಿಂದ ಬಿಸಿಲ ಸಂಬಂಧಿ ದೇಹದಲ್ಲಾಗುವ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದೆ