Mallikarjun Kharge ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ,ಸಿಎಂ, ಡಿಸಿಎಂ ಸೇರಿ ರಾಜ್ಯದಲ್ಲಿ ಐದು ಗ್ಯಾರಂಟಿ ಗಳನ್ನು ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಯವರು ರಾಷ್ಟ್ರ ಮಟ್ಟದಲ್ಲಿ ಮೈತ್ರಿ ನಾಯಕರು ಸೇರಿ, ನ್ಯಾಯ ಯೋಜನೆ ಗಳನ್ನು ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಆ ಯೋಜನೆ ಗಳನ್ನು ಜಾರಿಗೆ ತಂದೆ ತರುತ್ತೇವೆ ಎಂದರು.
ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ಹಣವನ್ನು ಹಾಕುತ್ತೇವೆ.
ಮಹಾಲಕ್ಷ್ಮಿ ಯೋಜನೆ ಯನ್ನು ಕೊಡ್ತಿದ್ದೇವೆ.ಯುವಕರಿಗೆ 1 ಲಕ್ಷ ಹಣ ಕೊಟ್ಟು, ಟ್ರೈನಿಂಗ್ ಕೊಟ್ಟು, ನೌಕರರನ್ನಾಗಿ ಮಾಡ್ತೀವಿ.
ಮತ್ತೊಂದು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ತಿಳಿಸಿದರು.
ಶಿವಮೊಗ್ಗ ಬುದ್ದಿ ವಂತರ ಜಿಲ್ಲೆ, ಇಡೀ ರಾಜ್ಯದ ಜನರು ಶಿವಮೊಗ್ಗದ ಕಡೆ ನೋಡ್ತಾರೆ.
ಇಲ್ಲಿ ಭೂ ಸುಧಾರಣೆ ಕಾನೂನು ಹೋರಾಟ ನಡೆದಿತ್ತು.
ಭೂಸುಧಾರಣೆ ಕಾನೂನಿಂದ ಸಾಕಷ್ಟು ಜನರಿಗೆ ಅನುಕೂಲ ಆಗಿದೆ.ಭೂಮಿ ಕಸಿದುಕೊಳ್ತಾರೆ, ಮಂಗಳ ಸೂತ್ರ ಕಸಿದುಕೊಳ್ತಾರೆ ಅಂತಾರೆ.ಆದರೆ ನಾವು ಯಾರು ಆ ರೀತಿ ಮಾಡೋದಿಲ್ಲ.
ನಾವು ಬಡವರ ಪರ ಇದ್ದೇವೆ, ಹೋರಾಟ ಮಾಡ್ತೀವಿ ಎಂದರು.
Mallikarjun Kharge ರಾಹುಲ್ ಗಾಂಧಿ ಮೇಲೆ ಹತ್ತಾರು ಕೇಸ್ ಗಳನ್ನು ಹಾಕಿದ್ದಾರೆ.ಇದಕ್ಕೆಲ್ಲಾ ನಾವು ಹೆದರೋದಿಲ್ಲ.ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು.
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಕ್ಷಣೆ ಮಾಡಬೇಕು.
ಅದಕ್ಕಾಗಿ ಕಾಂಗ್ರೆಸ್ ಚಿಹ್ನೆಗೆ ಮತ ನೀಡಿ ಎಂದು ಖರ್ಗೆ ಮನವಿ ಮಾಡಿದರು.