Tuesday, November 18, 2025
Tuesday, November 18, 2025

Prajwal Revanna ಬಂದಿರುವ ಕಳಂಕ‌ ನಿವಾರಣೆಗೆ ಮಾಜಿ ಸಚಿವ ರೇವಣ್ಣ ಅವರ ಸ್ವಗೃಹದಲ್ಲಿ ಹವನ ಹೋಮ

Date:

Prajwal Revanna ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಚುರುಕು ಪಡೆದುಕೊಳ್ಳುತ್ತಿದ್ದಂತೆ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ದೇವರ ಮೊರೆ ಹೋಗಿದ್ದಾರೆ.

ಬೆಳಿಗ್ಗೆಯಿಂದ ಅವರ ಮನೆಯಲ್ಲಿ ಹೋಮ, ಹವನ ನಡೆದಿದೆ.
ರೇವಣ್ಣ ಪುತ್ರನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸದ್ಯ ಪ್ರಕರಣದ ತನಿಖೆ ಎಸ್‌ಐಟಿಗೆ ವರ್ಗಾವಣೆಯಾಗಿದೆ.

ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೂಡ ಜಾರಿಗೊಳಿಸಲಾಗಿದೆ. ಇದರ ಬೆನ್ನಲ್ಲೇ ಎಚ್‌ಡಿ ರೇವಣ್ಣ ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

Prajwal Revanna ಪೆನ್‌ಡ್ರೈವ್ ವಿಚಾರ ಹೊರಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಜರ್ಮನಿಗೆ ಪರಾರಿಯಾಗಿದ್ದಾರೆ. ಸದ್ಯ ತನಿಖೆಯ ಭಾಗವಾಗಿ ಎಸ್‌ಐಟಿ ಪ್ರಜ್ವಲ್‌ ರೇವಣ್ಣಾಗೆ ಬುಲಾವ್ ನೋಟೀಸ್ ನೀಡಿದೆ. ಹೀಗಾಗಿ ಮೇ ಮೂರರಂದು ಪ್ರಜ್ವಲ್ ವಾಪಾಸ್ಸಾಗಲಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಎಚ್‌ಡಿ ರೇವಣ್ಣ ಅವರಿಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿದೆ. ಹೀಗಾಗಿ ರೇವಣ್ಣ ಹೊಳೆನರಸೀಪುರದ ಮನೆಯಲ್ಲಿ ಹೋಮ, ಹವನ ನೆರವೇರಿಸಿದ್ದಾರೆ.

ಮನೆಯಲ್ಲಿ ಹೋಮ ಕುಂಡ ನಿರ್ಮಿಸಿ ಹೋಮ-ಹವನ ಮಾತ್ರವಲ್ಲದೆ, ಬೆಳಗ್ಗೆಯಿಂದಲೇ ವಿವಿಧ ಪೂಜೆಯನ್ನೂ ಮಾಡಿಸಿದ್ದಾರೆ. ಮಂಗಳವಾರ ತಡರಾತ್ರಿ ಬೆಂಗಳೂರಿನಿಂದ ಎಚ್‌ಡಿ ರೇವಣ್ಣ ಹೊಳೆನರಸೀಪುರಕ್ಕೆ ಆಗಮಿಸಿದ್ದರು. ಇಂದು ಮುಂಜಾನೆ ಮಾವಿನ ಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವೇಶ್ವರ, ಲಕ್ಷ್ಮಿ ನರಸಿಂಹ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯಲ್ಲಿ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರ ಸಂಕಿರಣ

Kuvempu University ಶ್ರೀ ಭಗವದ್ಗೀತಾ ಅಭಿಯಾನ 2025ರ ಅಂಗವಾಗಿ ನ.18ರಂದು...

Agricultural University ರೈತರಿಗೆ ಕೃಷಿಯಿಂದ ಆದಾಯ ಹೆಚ್ಚಬೇಕು.ಕೃಷಿಯಲ್ಲಿ ಆಂದೋಲನವಾಗಬೇಕು- ಸಚಿವ ಎನ್.ಚಲುವರಾಯ ಸ್ವಾಮಿ

Agricultural University ಸರ್ಕಾರದ ವಿವಿಧ ಕಾರ್ಯಕ್ರಮಗಳು, ಯೋಜನೆಗಳು, ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನೆ,ಹೊಸ...

ಮಾಹಿತಿ ಹಕ್ಕು ಕೋರಿ ಬರುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡಿ- ಆಯುಕ್ತ ರುದ್ರಣ್ಣ ಹರ್ತಿಕೋಟೆ

ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ನಿಗಧಿತ...