Friday, March 6, 2026
Friday, March 6, 2026

McGann Hospital ತರೀಕೆರೆ ರೈಲು ನಿಲ್ದಾಣದಲ್ಲಿ ಮೃತಪಟ್ಟ ವ್ಯಕ್ತಿಯ ಶವ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ

Date:

McGann Hospital ತರೀಕೆರೆ ರೈಲುನಿಲ್ದಾಣದಲ್ಲಿ ಸುಮಾರು ೩೦-೩೫ ವರ್ಷದ ಅಪರಿಚಿತ ವ್ಯಕ್ತಿಯು ಚಲಿಸುತ್ತಿರುವ ರೈಲುಗಾಡಿಯನ್ನು ಹತ್ತಲು ಹೋಗಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ಈತನ ವಾರಸ್ಸುದಾರರು, ವಿಳಾಸ ಪತ್ತೆಯಾಗಿರುವುದಿಲ್ಲ.

ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈತನ ಚಹರೆ ಸುಮಾರು ೫.೬ ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲುಮುಖ, ದಪ್ಪಮೂಗು, ೨ ಇಂಚು ಉದ್ದದ ಕಪ್ಪು ತಲೆಕೂದಲು, ಗಡ್ಡ,ಮೀಸೆ ಬಿಟ್ಟಿರುತ್ತಾನೆ. ಬಲಗೈಯಲ್ಲಿ ಕನ್ನಡ ಅಕ್ಷರದಲ್ಲಿ ಅಮ್ಮ ಎಂದು ಹಾಗು ಎಡಗೈಯಲ್ಲಿ ರಾಕಿ ಮತ್ತು McGann Hospital ಇಂಗ್ಲೀಷ್‌ನಲ್ಲಿ ಆರ್ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಮೈಮೇಲೆ ನಕ್ಷತ್ರಾಕಾರದ ಚುಕ್ಕೆಗಳುಳ್ಳ ಗುಲಾಬಿ ಬಣ್ಣದ ಉದ್ದತೋಳಿನ ಅಂಗಿ, ಕಡನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕೊರಳಲ್ಲಿ ಮತ್ತು ಎಡಗೈಯಲ್ಲಿ ಕೇಸರಿ ಬಣ್ಣದ ದಾರ ಕಟ್ಟಿಕೊಂಡಿರುತ್ತಾನೆ.
ಈ ಅಪರಿಚಿತ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್, ದೂ.ಸಂ.-೦೮೧೮೨-೨೨೨೯೭೪/ ೯೪೮೦೮೦೨೧೨೪ ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Sanga ಮಾರ್ಚ್ 09 ಕರ್ನಾಟಕ ಸಂಘದಲ್ಲಿ ಸಾಹಿತಿ ರಂಜನಿ ರಾಘವನ್ ತಿಂಗಳ ಅತಿಥಿ

Karnataka Sanga ದಿನಾಂಕ 09ನೇ ಮಾರ್ಚ್ 2026ರ ಸೋಮವಾರ, ಸಂಜೆ 5:30ಕ್ಕೆ...

CM Siddharamaiah ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ

CM Siddharamaiah ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ...

Klive Special Article ನಿಮ್ಮೂರು ನಮ್ಮ ಮಾಹಿತಿ ಸ್ಥಳ: ಸುಣ್ಣದಹಳ್ಳಿ ಲೇ: ದಿಲೀಪ್ ನಾಡಿಗ್

Klive Special Article ಸುವರ್ಣ ಹಳ್ಳಿ ಕಾಲಕ್ರಮೇಣ ಸುಣ್ಣದ ಹಳ್ಳಿಯಾಯಿತು. ಇಲ್ಲಿದ್ದಾನೆ...

Department of Tourism ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟೀನ್ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Department of Tourism ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ರಾಜ್ಯದ...