Tuesday, February 3, 2026
Tuesday, February 3, 2026

Actress Malashree ಸೆಟ್ ಏರಿದ ಸಿನಿಮಾ”ಅಧ್ಯಾಯ” ನಟಿ ಮಾಲಾಶ್ರೀ ಅವರಿಂದ ‘ಫಸ್ಟ್ ಲುಕ್’ ಬಿಡುಗಡೆ

Date:

Actress Malashree ಸ್ಯಾಂಡಲ್ ವುಡ್ ನಲ್ಲಿ ಹೊಸ ‘ಅಧ್ಯಾಯ’ ಶುರುವಾಗಿದೆ.

ಏನಿದು ಹೊಸ ಅಧ್ಯಾಯ ಅಂತೀರ! ಹೌದು ‘ಜೈ ಭವಾನಿ ಕ್ರಿಯೇಷನ್ಸ್’ ಎಂಬ ಬ್ಯಾನರ್ ನ ಅಡಿಯಲ್ಲಿ ‘ಜೈ ಭವಾನಿ ಕ್ರಿಯೇಶನ್ಸ್‘ ಸಂಸ್ಥೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ “ಅಧ್ಯಾಯ” ಎಂಬ ಶೀರ್ಷಿಕೆಯ ಚಿತ್ರವು ಈಗಾಗಲೆ ಸೆಟ್ಟೇರಿದ್ದು ಈ ಚಿತ್ರದ ಫಸ್ಟ್ ಲುಕ್ಕನ್ನು ರೇಣುಕಾಬ ಸ್ಟೋಡಿಯೋದಲ್ಲಿ “ಕನಸಿನ ರಾಣಿ” ನಾಯಕ ನಟಿ ಮಾಲಾಶ್ರೀಯವರು ಬಿಡುಗಡೆ ಮಾಡಿದರು.

ಈ ಚಿತ್ರಕ್ಕೆ ನಾಯಕ ನಟರಾಗಿ ಚೈತನ್ಯ ವಂಜಾರ ರವರು ಅಭಿನಯಿಸಲಿದ್ದಾರೆ, ಈಗಾಗಲೇ ಎರಡು ಚಿತ್ರಕ್ಕೆ ನಾಯಕ ನಟರಾಗಿ ಅಭಿನಯಿಸಿದ ಅನುಭವ ಇವರಿಗಿದ್ದು ಈ ಹಿಂದೆ ರುಧೀರ ಕಣಿವೆ, ನವ ಇತಿಹಾಸ ಹಾಗೂ ಅಥಣಿ ಚಿತ್ರಗಳನ್ನು ನಿರ್ದೇಶಸಿದ್ದ ಸಮರ್ಥ್ ಎಂ. ರವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

Actress Malashree ಇದೇ ಸಂದರ್ಭದಲ್ಲಿ ನಟ, ನಿರ್ದೇಶಕ ಯತಿರಾಜು, ಪಿ,ಆರ್,ಒ, ಸುಧೀಂದ್ರ ವೆಂಕಟೇಶ್, ನಿರ್ದೇಶಕ ಶ್ರೀ ರಜಿನಿ, ನಟ ದತ್ತಾಶ್ರೀ ಹೆಗಡೆ ಮುಂತಾದವರು ಚಿತ್ರಕ್ಕೆ ಶುಭ ಹಾರೈಸಿದರು.

ಮೇ 01ರಂದು ನಂದಿನಿ ಲೇಔಟ್ ನ ‘ಶ್ರೀ ಪಂಚಮುಖಿ ಗಣಪತಿ’ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದ್ದು ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಧ್ಯಾಯ ಬರೆಯುವುದಕ್ಕೆ ಚಿತ್ರತಂಡ ಸಜ್ಜಾಗಿದೆ ಎಂದು ಚಿತ್ರದ ನಾಯಕ ನಟ ಚೈತನ್ಯ ವಂಜಾರ ಹಾಗೂ ನಿರ್ದೇಶಕ ಸಮರ್ಥ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...