Saturday, December 6, 2025
Saturday, December 6, 2025

DC Shivamogga ಮತದಾನ ಮಹತ್ವ ಕುರಿತು ಕವಿತೆ ಬರೆಯಿರಿ, ಆಯ್ಕೆಯಾದರೆ ಕವಿಗೋಷ್ಠಿಗೆ ಆಹ್ವಾನ

Date:

DC Shivamogga ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಶಿವಮೊಗ್ಗ ಇವರ ಸಹಯೋಗದಲ್ಲಿ ಹಾಗೂ ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ವತಿಯಿಂದ 2024ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ‘ಮತದಾನ ಜಾಗೃತಿಯ ಕುರಿತ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ. ಈ ಕವಿಗೋಷ್ಠಿಯು ದಿನಾಂಕ 23-04- 2024ರಂದು ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಬಿ.ಎಡ್. ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಮತದಾನ ಜಾಗೃತಿಯ ಹಿನ್ನಲೆಯಲ್ಲಿ ಬರೆದಿರಬೇಕು. ಕವನಗಳು ಚಿಕ್ಕದಾಗಿದ್ದು ಎಲ್ಲೂ ಪ್ರಕಟವಾಗಿರಬಾರದು.

DC Shivamogga ಕವನಗಳು ಮೌಲ್ಯಯುತವಾಗಿದ್ದು, ಸ್ಫೂರ್ತಿದಾಯಕವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವಂತಿರಬೇಕು. ಕವನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಹೆಸರು, ಚಿಹ್ನೆ, ಗುರುತು, ವ್ಯಕ್ತಿಗಳ ಹೆಸರುಗಳನ್ನು ನಮೂದಿಸಬಾರದು. 3-4 ನಿಮಿಷಗಳಲ್ಲಿ ವಾಚನ ಮಾಡುವಂತಿರಬೇಕು. ಅತ್ಯುತ್ತಮ ಕವನಗಳಿಗೆ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಪ್ರಮಾಣಪತ್ರ ನೀಡಲಾಗುವುದು. ಕವಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿ ಹಾಗೂ ಕವನಗಳನ್ನು ದಿನಾಂಕ 22-04-2024ರ ಸಂಜೆ 5ಗಂಟೆಯೊಳಗಾಗಿ ತಲುಪಿಸಬೇಕು.

ಸಂಪರ್ಕಿಸಿ:-

ಬಸವನಗೌಡ ಹೆಚ್ ಎನ್:- 9901347264

ಕೆ.ಸಿ ಬಸವರಾಜು
:- 9483003823

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...