Radio Shimoga ರೇಡಿಯೋ ಶಿವಮೊಗ್ಗ ಸಮುದಾಯ ಬಾನುಲಿಯ ದ್ವಿತೀಯ ವಾರ್ಷಿಕೋತ್ಸವ, ವಿಶ್ವ ಭೂ ದಿನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮವನ್ನು ಏಪ್ರಿಲ್ 22ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಮಥುರಾ ಪ್ಯಾರಡೈಸ್ ನ ಮೂರನೆಯ ಮಹಡಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ರೇಡಿಯೋ ಶಿವಮೊಗ್ಗ, ಕೊಡಚಾದ್ರಿ ಇಂಟಿಗ್ರೇಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರ, ಜ್ಞಾನಸಾಗರ ನಾವೆ ಟ್ರಸ್ಟ್ ಹಾಗೂ ಸ್ವೀಪ್ ಸಮಿತಿ ಶಿವಮೊಗ್ಗ ಇವರ ಸಹಯೋಗದಲ್ಲಿ ಕಾರ್ಯಕ್ರಮವು ಆಯೋಜನೆಗೊಂಡಿದೆ.
Radio Shimoga ಬಾನುಲಿಯ ಕೇಳುಗರೊಂದಿಗೆ ಅಪ್ಪಿಕೋ ಚಳುವಳಿಯ ಪ್ರವರ್ತಕ ಪಾಂಡುರಂಗ ಹೆಗಡೆ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್. ಸಿ. ಜಗದೀಶ್ ಹಾಗೂ ಐಐಟಿ ಧಾರವಾಡದ ಸಂದರ್ಶಕ ಪ್ರಾಧ್ಯಾಪಕ ಡಾ. ಎಲ್.ಕೆ. ಶ್ರೀಪತಿ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗೆ ನಿಲಯದ ಸಂಯೋಜಕ ಗುರುಪ್ರಸಾದ್ (72591 76279)ಗೆ ಸಂಪರ್ಕಿಸಬಹುದು ಎಂದು ಆಯೋಜಕ ಸಂಸ್ಥೆಗಳ ಪರವಾಗಿ ಬಾನುಲಿ ಕೇಂದ್ರದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ತಿಳಿಸಿದ್ದಾರೆ.