Vidhusekhara Bharati Swamiji ಹೊಸಗುಂದದ ಶ್ರೀ ಉಮಾ ಮಹೇಶ್ವರಿ ದೇಗಲ ಟ್ರಸ್ಟ್ ವತಿಯಿಂದ ಬಾಲಾಲಯದಲ್ಲಿ ಶ್ರೀ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಮತ್ತು ಮಹಾರುದ್ರ ಹವನದ ಪೂರ್ಣಾಹುತಿ ನಡೆಯಿತು.
ಶೃಂಗೇರಿ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿ ಕಾರ್ಯಕ್ರಮ ನೆರವೇರಿಸಿದರು.
‘ಒಳ್ಳೆಯ ಕೆಲಸಕ್ಕೆ ತೊಂದರೆಗಳು ಸಹಜ’
ಇದೇ ವೇಳೆ ಆಶೀರ್ವಚನ ನೀಡಿದ ಜಗದ್ಗರು ವಿಧುಶೇಖರ ಭಾರತಿ ಸ್ವಾಮೀಜಿ, ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ ತೊಂದರೆಗಳು ಸಹಜ. ಆದರೆ ಎಲ್ಲವನ್ನೂ ಧೈರ್ಯವಾಗಿ ಎದುರಿಸುವ ಮನೋಸಂಕಲ್ಪವನ್ನು ದೇವರು ಕರುಣಿಸುತ್ತಾನೆ. ಭಗವಂತನ ಸಂಕಲ್ಪವಿಲ್ಲದೆ ಯಾವುದೆ ಕೆಲಸಗಳು ನಡೆಯುವುದಿಲ್ಲ ಎಂದು ತಿಳಿಸಿದರು.
Vidhusekhara Bharati Swamiji ಉಮಾ ಮಹೇಶ್ವರಿ ಸೇವಾ ಟ್ರಸ್ಟ್ ಮುಖ್ಯಸ್ಥ ಸಿ.ಎಂ.ಎನ್.ಶಾಸ್ತ್ರಿ, ಸಾಗರದ ಶೃಂಗೇರಿ ಶಂಕರಮಠದ ಅಶ್ವಿನಿಕುಮಾರ್, ಡಾ. ಗೌರಿಶಂಕರ್, ಮ.ಸ.ನಂಜುಂಡಸ್ವಾಮಿ, ಡಾ. ಗೌರಿ ಶಂಕರ್ ಸೇರಿದಂತೆ ಹಲವರು ಇದ್ದರು.