Tuesday, May 26, 2026
Tuesday, May 26, 2026

Enforcement Directorate ಕಳೆದ ಹತ್ತು ವರ್ಷಗಳಲ್ಲಿ ಇಡಿ ನಿರ್ದೇಶನಾಲಯದಿಂದ ದಾಳಿಗಳ ಸಂಖ್ಯೆ ಹೆಚ್ವಳ

Date:

Enforcement Directorate ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ ‘ಇಡಿ’ ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸಲು, ಮಟ್ಟಹಾಕಲು ಬಳಸುತ್ತಿದೆ ಎಂದು ವಿಪಕ್ಷಗಳು ಟೀಕಿಸುತ್ತಿರುವ ಹೊಸ್ತಿಲಲ್ಲೇ ಈ ವರದಿ ಬಹಿರಂಗವಾಗಿದೆ.

2014ರಿಂದ ಕಳೆದ 10 ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಗಳ ಪ್ರಮಾಣದಲ್ಲಿ 86 ಪಟ್ಟು ಹೆಚ್ಚಾಗಿದೆ, ಆಸ್ತಿ ಮುಟ್ಟುಗೋಲು ಪ್ರಮಾಣದಲ್ಲಿ 25 ಪಟ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಜುಲೈ 2005ರಿಂದ ಮಾರ್ಚ್ 2014 ರವರೆಗಿನ ಒಂಬತ್ತು ವರ್ಷಗಳ ಅವಧಿ ಮತ್ತು ಏಪ್ರಿಲ್ 2014ರಿಂದ ಮಾರ್ಚ್ 2024ರ ನಡುವೆ ಕಳೆದ 10 ವರ್ಷಗಳಲ್ಲಿನ ದಾಖಲೆಯನ್ನು ವಿಶ್ಲೇಷಿಸಿ ಪಿಟಿಐ ಈ ಕುರಿತ ವರದಿಯನ್ನು ಸಿದ್ಧಪಡಿಸಿದೆ.
PMLAಅನ್ನು 2002ರಲ್ಲಿ ಜಾರಿಗೊಳಿಸಲಾಗಿದೆ ಮತ್ತು ತೆರಿಗೆ ವಂಚನೆ, ಕಪ್ಪು ಹಣ ಮತ್ತು ಅಕ್ರಮ ಹಣ ವರ್ಗಾವಣೆ ಕುರಿತ ಗಂಭೀರ ಅಪರಾಧಗಳ ಬಗ್ಗೆ ಕ್ರಮಕ್ಕೆ ಜುಲೈ 1, 2005ರಿಂದ PMLA ಕಾಯ್ದೆಯನ್ನು ಜಾರಿತರಲಾಗಿದೆ.
ಕಳೆದ 1 ದಶಕದಲ್ಲಿ ಇಡಿ ಕ್ರಮವು ಪ್ರತಿಪಕ್ಷಗಳು ಮತ್ತು ಬಿಜೆಪಿ ವಿರುದ್ಧ ಮಾತನಾಡುವವರ ವಿರುದ್ಧದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ “ದಬ್ಬಾಳಿಕೆಯ” ತಂತ್ರಗಳ ಭಾಗವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದರೆ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷವು, ಜಾರಿ ನಿರ್ದೇಶನಾಲಯವು ಸ್ವತಂತ್ರವಾಗಿದೆ ಮತ್ತು ಅದರ ತನಿಖೆಗಳು ಸಂಪೂರ್ಣವಾಗಿ ಅಕ್ರಮ ಮತ್ತು ಭ್ರಷ್ಟರ ವಿರುದ್ಧದ ಕಾರ್ಯಚರಣೆಯ ಭಾಗವಾಗಿದೆ ಎಂದು ‘ಇಡಿ’ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದೆ.

Enforcement Directorate 2005-14ರ ಅವಧಿಯಲ್ಲಿ ಒಟ್ಟು 1,797 ದೂರುಗಳು ಮಾತ್ರ ಜಾರಿ ನಿರ್ದೇಶನಾಲಯ ದಾಖಲಿಸಿದ್ದವು, ಆದರೆ 2014ರಿಂದ 2024ರ ಅವಧಿಯಲ್ಲಿ ಕಳೆದ 10 ವರ್ಷಗಳಲ್ಲಿ 5,155 PMLA ಪ್ರಕರಣಗಳನ್ನು ದಾಖಲಿಸಿದೆ, ಇದು 2005-14ರ ಅವಧಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳ ಎಂದು ವಿಶ್ಲೇಷಣೆಯು ಉಲ್ಲೇಖಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಬದುಕಿನ ಪುಟದಲ್ಲೊಂದು ಘಟನೆ

ಪ್ರಸಾದ್ ಶ್ರೀವತ್ಸ ,ದಾವಣಗೆರೆ. Klive Special Article ಮನುಷ್ಯನೆಂದ ಮೇಲೆ ಹಲವಾರು ಸರಿ-ತಪ್ಪು...

Rotary Shivamogga ವೈವಿಧ್ಯಮಯ ಕಲಾಪ್ರಕಾರಗಳ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ- ಡಿ.ಕಿಶೋರ್ ಕುಮಾರ್

Rotary Shivamogga ಬಾಲ್ಯದಿಂದಲೇ ಕಲೆ, ಸಾಹಿತ್ಯ, ನೃತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ...

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...