B.Y.Raghavendra ಈಶ್ವರಪ್ಪ ಅವರು ಹಿರಿಯ ನಾಯಕರಿದ್ದಾರೆ. ಅವರು ಏನೇ ಹೇಳಿದರೂ ಅದು ನನಗೆ ಆಶೀರ್ವಾದ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರಿಗೆ ಭಯ ಉಂಟಾಗಿದೆ ಎಂಬ ಈಶ್ವರಪ್ಪರ ಹೇಳಿಕೆ ಕುರಿತಾಗಿ ಈ ಪ್ರತಿಕ್ರಿಯೆ ನೀಡಿದರು. ದೊಡ್ಡವರ ಬಗ್ಗೆ ದೊಡ್ಡವರು ಮಾತನಾಡುತ್ತಾರೆ. ಹಿರಿಯರಾದ ಈಶ್ವರಪ್ಪ ಏನು ಹೇಳಿದರೂ ಅದನ್ನು ನಾನು ಹಾರೈಕೆ ಎಂದುಕೊಳ್ಳುವೆ. ಚುನಾವಣೆ ಎಂದ ಮೇಲೆ ಭಯ ಭಕ್ತಿ ಎಲ್ಲವೂ ಇದ್ದೇ ಇರುತ್ತದೆ. ಅವುಗಳನ್ನಿಟ್ಟುಕೊಂಡೇ ನಾವು ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಶರಾವತಿ ಸಮಸ್ಯೆ, ಕಾರ್ಖಾನೆ ಮುಚ್ಚಿರುವುದಕ್ಕೆ ಅರಣ್ಯ ಸಂಬಧಿ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷ ಮತ್ತು ಸ್ಥಳೀಯ ನಾಯಕರುಗಳೇ ಕಾರಣ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಬಿಜೆಪಿಗೆ ಕೇಳಿದ ಎಲ್ಲಾ ಪ್ರಶ್ನೆಗಳನ್ನು ಕಾಂಗ್ರೆಸ್ ನಾಯಕರಿಗೇ ಕೇಳಿಕೊಳ್ಳಬೇಕು. ಇಲ್ಲಿನ ಸಮಸ್ಯೆಗಳಿಗೆ ಮೂಲ ಕಾಂಗ್ರೆಸ್ ಆಗಿದೆ ಎಂದು ಅವರು ಹೇಳಿದರು.
B.Y.Raghavendra ನಾಮಪತ್ರ ಸಲ್ಲಿಕೆಗೆ ಹೆಚ್.ಡಿ.ಕೆ: ಏ.೧೮ ರಂದು ಬೆಳಗ್ಗೆ ೧೧.೩೦ ಗೆ ನಾಮಪತ್ರ ಸಲ್ಲಿಸುವೆ. ರಾಮಣಶ್ರೇಷ್ಠಿ ಪಾರ್ಕಿನಿಂದ ಮೆರವಣಿಗೆ ಹೊರಟು ನಂತರ ನಾಮಪತ್ರ ಸಲ್ಲಿಸಲಾಗುವುದು. ಅಂದು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಅಂದಿನಿAದ ಅಧಿಕೃತವಾಗಿ ಚುನಾವಣೆ ಕಣ ರಂಗೇರಲಿದೆ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಲಿದ್ದಾರೆ. ನಮ್ಮ ಪಕ್ಷಕ್ಕೆ ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳೇ ಸ್ಟಾರ್ ಕ್ಯಾಂಪೆನರ್‌ಗಳಾಗಿದ್ದಾರೆ. ಅವರೇ ನಮಗೆ ವಿಶ್ವಾಸ ಎಂದರು.
B.Y.Raghavendra ಹಿರಿಯರಾದ ಈಶ್ವರಪ್ಪ ಏನೆಂದರೂ ಅದನ್ನ ಹಾರೈಕೆಯಾಗಿ ಸ್ವೀಕರಿಸುವೆ- ಬಿ.ವೈ.ರಾಘವೇಂದ್ರ
Date: