Wednesday, September 16, 2026
Wednesday, September 16, 2026

Bhadravati Police ಭದ್ರಾವತಿಯಲ್ಲಿ ಗೋಮಾಂಸ ಮಾರಾಟದ ಹೋಟೆಲ್ ಮೇಲೆ ದಾಳಿ, ಪ್ರಕರಣ ದಾಖಲು

Date:

Bhadravati Police ಭದ್ರಾವತಿ ನಗರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ನಗರ ಸಭೆ ಮಾಲಿಕತ್ವದ ಕೊಠಡಿಯ ಹೋಟೆಲ್ ಮಿಲನ್ ನಲ್ಲಿ ಗೋಮಾಂಸ ವ್ಯಾಪಾರ ಖಚಿತ ಮಾಹಿತಿಯ ಮೇರೆಗೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ ಅರಳಿಹಳ್ಳಿ ರವರು ದೂರನ್ನು ನೀಡಿದ್ದು ನ್ಯೂ ಟೌನ್ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪದೇ ಪದೇ ಭದ್ರಾವತಿಯಲ್ಲಿ ಗೋ ಹತ್ಯೆ ಗೋ ಮಾಂಸದ ಪ್ರಕರಣಗಳು ದಾಖಲಾಗಿರುತ್ತಿರುವುದು ಸರ್ವೇಸಾಧಾರಣವಾಗಿದೆ. ಭದ್ರಾವತಿ ನಗರಸಭೆ ಆಡಳಿತ ಗೋಹತ್ಯೆ ವಿಚಾರವಾಗಿ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಭದ್ರಾವತಿಯಲ್ಲಿ ಇನ್ನೂ ಅನೇಕ ಗೋಮಾಂಸದ ಹೋಟೆಲ್ ಗಳು ನಡೆಯುತ್ತಿವೆ ಎಂದು ದೇವರಾಜ್ ಅರಳಿಹಳ್ಳಿ ಅವರು ಗುಡುಗಿದ್ದಾರೆ.

ಸಂವಿಧಾನ ಶಿಲ್ಪಿ ಡಾಕ್ಟರ್ ಭೀಮರಾವ್ ರಾಮಜಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನವೂ ಸಹ ಈ ರೀತಿ ಕಾನೂನು ವಿರೋಧಿ ಕೃತ್ಯಗಳು ಭದ್ರಾವತಿಯಲ್ಲಿ ನಡೆಯುತ್ತಿರುವುದು ಗೋ ಹತ್ಯೆ ಕಾನೂನು ಉಲ್ಲಂಘನೆ ಮಾಡುತ್ತಿರುವುದು ಕಾನೂನಿನ ಭಯವಿಲ್ಲದಂತಾಗಿದೆ ಎಂಬುದು ಎದ್ದು ಕಾಣುತ್ತಿದೆ.

Bhadravati Police ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜ ದೊಡ್ಡ ಮಟ್ಟದಲ್ಲಿ ಗೋ ಹತ್ಯೆ ವಿರುದ್ಧ ಜನಜಾಗೃತಿ ಜನಂದೋಲನ ಚಳುವಳಿಯನ್ನು ಏರ್ಪಡಿಸಲಾಗುತ್ತದೆ. ಗೋ ಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಇಲ್ಲವಾದಲ್ಲಿ ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ಗೋಹತ್ಯೆ. ಗೋ ಮಾಂಸದ ಹೋಟೆಲ್ಗಳ ಹೊಣೆಯನ್ನು ಭದ್ರಾವತಿ ನಗರಸಭೆ ಹೊರಬೇಕಾಗುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...