Tuesday, April 22, 2025
Tuesday, April 22, 2025

Lok Sabha Election ಬಡಜನತೆ ಉದ್ಧರಿಸುವ ಕೋಟ್ಯಾಧಿಪತಿಗಳು ಈಗಿನ ಚುನಾವಣಾ ಅಭ್ಯರ್ಥಿಗಳು

Date:

Lok Sabha Election 2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ಹೆಸರಲ್ಲಿ ₹10.31 ಕೋಟಿ ಮೌಲ್ಯದ ಆಸ್ತಿ ಘೋಷಣೆಯಾಗಿತ್ತು.

ಈ ಬಾರಿ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಪತ್ನಿ ಜಯಲಕ್ಷ್ಮಿ ಹೆಸರಲ್ಲಿ ಒಟ್ಟು ₹33.50 ಕೋಟಿ ಆಸ್ತಿ ಕೆ.ಎಸ್‌.ಈಶ್ವರಪ್ಪ ಘೋಷಣೆ ಮಾಡಿಕೊಂಡಿದ್ದಾರೆ. ಕಳೆದ 6 ವರ್ಷಗಳಲ್ಲಿ ಕೆ.ಎಸ್‌. ಈಶ್ವರಪ್ಪ ದಂಪತಿಯ ಆಸ್ತಿ ಮೂರು ಪಟ್ಟು ಹೆಚ್ಚಳಗೊಂಡಿದೆ.

ಮೊದಲ ಬಾರಿಗೆ ಸ್ಪರ್ಧಿಸಿರುವ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ₹44.53 ಕೋಟಿ ಆಸ್ತಿಯ ಒಡತಿಯಾಗಿದ್ದರೂ ಅವರ ಬಳಿ ಒಂದೂ ವಾಹನ ಇಲ್ಲ. ನಾಮಪತ್ರದೊಂದಿಗೆ ನೀಡಿದ ಪ್ರಮಾಣಪತ್ರದಲ್ಲಿ ಅವರು ಈ ವಿವರ ಘೋಷಿಸಿಕೊಂಡಿದ್ದಾರೆ.

ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ₹56.21 ಕೋಟಿ ಆಸ್ತಿ ಹೊಂದಿದ್ದರೂ ಅವರ ಬಳಿ ಚಿನ್ನ, ವಾಹನ ಇಲ್ಲ. ₹9.07 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ₹9.58 ಕೋಟಿ ಸಾಲ ಇದೆ. ₹47.14 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಹಿಂದೆ ಏಳು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಕಳೆದ ವರ್ಷ ಮೊದಲ ಬಾರಿ ಸೋಲು ಅನುಭವಿಸಿದ್ದರು.

ಕಾಗೇರಿ ಆ ವೇಳೆ ಅವರ ಆಸ್ತಿ ಮೌಲ್ಯ ₹9.82 ಕೋಟಿ ಇತ್ತು. ವರ್ಷದೊಳಗೆ ₹46 ಲಕ್ಷ ಏರಿಕೆಯಾಗಿದೆ.

ಬಳ್ಳಾರಿ

Lok Sabha Election ಬಳ್ಳಾರಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿ.ಶ್ರೀರಾಮುಲು ಅವರು ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿಕೊಂಡಿದ್ದ ಅಸ್ತಿ ವಿವರವನ್ನು ಗಮನಿಸಿದರೆ ಒಂದು ವರ್ಷದಲ್ಲಿ ಅವರ ಒಟ್ಟು ವರಮಾನದಲ್ಲಿ ₹69 ಲಕ್ಷ ನಷ್ಟವಾಗಿದೆ ಮತ್ತು ಸಾಲ ₹1.27 ಕೋಟಿ ಬಿ.ಶ್ರೀರಾಮುಲು ಹೆಚ್ಚಾಗಿದೆ.

ಬಿಎಂಡಬ್ಲ್ಯು ಕಾರಿನ ಒಡೆಯರಾದ ಅವರ ಬಳಿ ಕಳೆದ ಬಾರಿ ಬೆಂಜ್ ಕಾರು ಸಹ ಇತ್ತು. ಈ ಬಾರಿ ಇನ್ನೋವಾ ಕಾರು ಇದೆ. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದಾಗ ಅವರು ಘೋಷಿಸಿಕೊಂಡಿದ್ದ ಅಸ್ತಿಯ ಮೌಲ್ಯ ₹15.13 ಕೋಟಿ.

ಇ.ತುಕಾರಾಂ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು. ಒಂದು ಬಾರಿ ಅಲ್ಪ ಅವಧಿಗೆ ಅವರು ಸಚಿವರೂ ಆಗಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಅವರ ಆಸ್ತಿ ಮೌಲ್ಯ₹1.27 ಕೋಟಿ ಇತ್ತು. ವರ್ಷದೊಳಗೆ ಅವರ ಆಸ್ತಿ ₹2 ಕೋಟಿಗೆ ಏರಿದೆ.

ವರ್ಷದ ಹಿಂದೆ ಅವರು ತಮ್ಮ ಪತ್ನಿಗೆ ನೀಡಿದ್ದ ಸಾಲದ ಮೊತ್ತ ₹78 ಲಕ್ಷ ಇತ್ತು. ಈಗ ಅದು ₹83 ಲಕ್ಷಕ್ಕೆ ಏರಿದೆ.

ಮರು ಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ, ಸಂಸದ ಡಾ. ಉಮೇಶ ಜಾಧವ ಅವರಿಗಿಂತ ಪತ್ನಿ ಗಾಯತ್ರಿ ಜಾಧವ ಅವರ ಆಸ್ತಿ ಹೆಚ್ಚಿದೆ. ಉಮೇಶ ಜಾಧವ ಬಳಿ ₹1.92 ಕೋಟಿಯ ಆಸ್ತಿ ಇದ್ದರೆ, ಪತ್ನಿಯ ಬಳಿ ₹4.18 ಕೋಟಿ ಮೌಲ್ಯದ ಆಸ್ತಿ ಇದೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರ ಆಸ್ತಿ ಐದು ವರ್ಷಗಳಲ್ಲಿ ₹10.59 ಕೋಟಿ ಹೆಚ್ಚಾಗಿದೆ. 2019ರ ಚುನಾವಣೆಗೆ ಸ್ಪರ್ಧಿಸಿದ್ದಾಗ ಸಲ್ಲಿಸಿದ ಅಫಿಡವಿಟ್‌ನಲ್ಲಿ ₹8.47 ಕೋಟಿ ಆಸ್ತಿ ಘೋಷಣೆ ಮಾಡಿದ್ದರು.

ಈಗ ಘೋಷಣೆ ಮಾಡಿದ ಹಿಟ್ನಾಳ ಪ್ರಕಾರ ಅವರ ಆಸ್ತಿಯ ಮೌಲ್ಯ ₹19.06 ಕೋಟಿ. ಅವರ ಬಳಿ 22 ವಾಹನಗಳಿವೆ. ಸತತ ಎರಡನೇ ಬಾರಿಗೆ ಸ್ಪರ್ಧೆ ಮಾಡಿರುವ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು.

ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರ ಆಸ್ತಿ ₹29.48 ಕೋಟಿ ಇದೆ.

ಅವರ ಬಳಿ ರಾಧಾಕೃಷ್ಣ ಎರಡು ವಾಹನಗಳಿವೆ. ₹4.18 ಕೋಟಿ ಸಾಲವೂ ಇದೆ. ಪತ್ನಿ ಡಾ. ಜಯಶ್ರೀ ಅವರ ಬಳಿ ₹13.03 ಕೋಟಿ ಮೌಲ್ಯದ ದೊಡ್ಡಮನಿ ಆಸ್ತಿ ಇದೆ. ₹2.53 ಕೋಟಿ ಸಾಲವಿದೆ.

ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಆಯ್ಕೆ ಬಯಸಿರುವ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಬಳಿ ಮನೆಯಿಲ್ಲ. ಆದರೆ ಅವರಲ್ಲಿ ₹65 ಲಕ್ಷ ಮೌಲ್ಯದ ಲೆಕ್ಸಸ್ ಕಾರಿದೆ. ಮೊದಲ ಬಾರಿಗೆ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....