Thursday, April 24, 2025
Thursday, April 24, 2025

B.Y.Raghavendra ಮಹಿಳೆಯರ ಕರಕುಶಲ ವಸ್ತು& ತಿಂಡಿ ತಿನಿಸುಗಳಿಗೆ ಮಾರುಕಟ್ಟೆ, ಮೋದೀಜಿಯವರ ಯೋಜನೆಗಳ ಫಲ- ಬಿ.ವೈ.ರಾಘವೇಂದ್ರ

Date:

B.Y.Raghavendra ಬಿಜೆಪಿ ನಗರ ಘಟಕದ ವತಿಯಿಂದ ಶಿವಮೊಗ್ಗ ನಗರದ ಬಂಟರ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾಮಾವೇಶವು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಸಮಾವೇಶವನ್ನು ಕುರಿತು ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ರಶ್ಮಿ ಶ್ರೀನಿವಾಸ್ ಮಾತನಾಡಿದರು.

ನಂತರದಲ್ಲಿ ಜ್ಯೋತಿ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆಗೊಂಡ ಸಮಾವೇಶದಲ್ಲಿ ಜಿಲ್ಲಾ ಮಹಿಳಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಗಾಯಿತ್ರಿ ಮಲ್ಲಪ್ಪ ಮಾತನಾಡಿ ಕೇಂದ್ರಸರ್ಕಾರ ಮಹಿಳಾ ಜನಪರ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಈ ಯೋಜನೆಗಳನ್ನು ಮನಗಂಡು ಬಿಜೆಪಿ ಯನ್ನು ಮತ್ತೊಮ್ಮೆ ಬೆಂಬಲಿಸುವ ಮೂಲಕ ಮತ್ತೊಮ್ಮೆ ಮೋದೀಜೀಯವರು ಪ್ರಧಾನಮಂತ್ರಿ ಹಾಗೂ ರಾಘವೇಂದ್ರರವರು ಸಂಸದರಾಗುವಂತೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

B.Y.Raghavendra ನಂತರದಲ್ಲಿ ಮಾತನಾಡಿದ ಸಂಸದ ಲೋಕಸಭಾ ಅಭ್ಯರ್ಥಿ ಶ್ರೀಯುತ ಬಿ.ವೈ.ರಾಘವೇಂದ್ರರವರು ಕೇಂದ್ರ ಮಹಿಳಾಪರ ಸರ್ಕಾರದಯೋಜನೆಗಳಾದ “ಲಕ್ ಪತಿ ದೀದಿ” ಹಾಗು ಇತರೆ ಯೋಜನೆಗಳ ಕುರಿತು ಪ್ರಸ್ತಾಪಿಸಿ ಈ ಹಿಂದೆ ನಗರದ ಫ್ರೀಡಂ ಪಾರ್ಕ್ ನಲ್ಲಿ ಮಹಿಳೆಯರಿಂದ ತಯಾರಾದ ಕರಕುಶಲ ವಸ್ತುಗಳು ಹಾಗು ತಿಂಡಿ ತಿನಿಸುಗಳು ಒಂದೇ ವಾರದಲ್ಲಿ ಕೊಟ್ಯಾಂತರರೂ ಆದಾಯ ಗಳಿಸಿದ್ದನ್ನು ಪ್ರಸ್ತಾಪಿಸಿ ಇದೆಲ್ಲಾ ಮೋದೀಜೀಯವರ ಯೋಜನೆಗಳ ಫಲ ಎಂದು ನುಡಿದು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಮತ ಚಲಾಯಿಸುವ ಮೂಲಕವಾಗಿ ಅತ್ಯಧಿಕ ಬಹು ಮತದೊಂದಿಗೆ ತಮ್ಮನ್ನು ಮತ್ತೊಮ್ಮೆ ಆರಿಸಿ ತರಬೇಕೆಂದು ಕೈ ಜೋಡಿಸಿ ವಿನಂತಿಸಿದರು.

ವೇದಿಕೆಯಲ್ಲಿ ಬಿಜೆಪಿಯ ನಗರಾಧ್ಯಕ್ಷರಾದ ಶ್ರೀಯುತ ಮೋಹನ್ ರೆಡ್ಡಿ,ಶಾಸಕರಾದ ಚೆನ್ನಬಸಪ್ಪ,ಕ್ಲಸ್ಟರ್ ವಿಭಾಗದ ಭಾನು ಪ್ರಕಾಶ್,ಸೂಡಾ ಮಾಜಿ ಅಧ್ಯಕ್ಷರಾದ ಎನ್ ಜಿ ನಾಗರಾಜ್,ಎನ್,ಕೆ ಜಗದೀಶ್ ಹಲವು ಬಿಜೆಪಿಯ ವಿವಿಧ ಸ ಮಹಿಳಾ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...