Narendra Modi ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಕೆ ಮಾಡಬಾರದು ಎಂದು ಬಿಜೆಪಿಯಿಂದ ಒತ್ತಡವಿತ್ತು. ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಮೋದಿ ಫೋಟೊಗಳಿದ್ದ ಧ್ವಜಗಳು ರಾರಾಜಿಸಿದವು. ಅಲ್ಲದೆ, ಮೋದಿಯ ತದ್ರೂಪಿಯೊಬ್ಬರು ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಅಚ್ಚರಿ ಮೂಡಿಸಿದರು.
ರಾರಾಜಿಸಿದ ಮೋದಿ ಫೊಟೋಗಳು
ನಾಮಪತ್ರ ಸಲ್ಲಿಕೆ ಹಿನ್ನೆಲೆ ಬೆಂಬಲಿಗರ ಮೆರವಣಿಗೆ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಭಾವಿಚಿತ್ರವಿರುವ ಧ್ವಜಗಳು ರಾರಾಜಿಸಿದವು. ಈಶ್ವರಪ್ಪ ಅವರ ಬೆಂಬಲಿಗರು ಮೆರವಣಿಗೆ ಉದ್ದಕ್ಕೂ ಮೋದಿ ಅವರ ಭಾವಚಿತ್ರವಿರುವ ಧ್ವಜಗಳನ್ನು ಹಿಡಿದು ಸಾಗಿದರು.
ಮೆರವಣಿಗೆಯಲ್ಲಿ ಮೋದಿ ಪ್ರತ್ಯಕ್ಷ
Narendra Modi ಮತ್ತೊಂದೆಡೆ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಅವರ ತದ್ರೋಪಿ ವ್ಯಕ್ತಿಯೊಬ್ಬರು ಕಾಣಿಸಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿದರು. ಎಲ್ಲರತ್ತ ಕೈ ಬೀಸುತ್ತ, ನಮಸ್ಕರಿಸುತ್ತ ತೆರದ ವಾಹನದಲ್ಲಿ ಸಾಗಿದರು. ಜನರು ಮೋದಿ ಅವರೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಿದರು. ಮೋದಿ ಅವರನ್ನು ಹೋಲುವ ಇವರು ಉಡುಪಿ ಜಿಲ್ಲೆ ಹಿರಿಯಡ್ಕದ ಸದಾನಂದ ನಾಯಕ್. ಈಶ್ವರಪ್ಪ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಸದಾನಂದ ನಾಯಕ್ ಅವರನ್ನು ಕರೆತಂದಿದ್ದು ಗಮನ ಸೆಳೆಯಿತು.
ಮೋದಿ ಅವರಪ್ಪನ ಮನೆ ಆಸ್ತಿಯಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಮೋದಿ ಭಾವಚಿತ್ರ ಬಳಸಬಾರದು ಎಂದರು. ಮೋದಿ ಇವರಪ್ಪನ ಮನೆ ಆಸ್ತಿಯೇನು? ಇಡೀ ವಿಶ್ವನಾಯಕ. ಯಡಿಯೂರಪ್ಪ, ವಿಜಯೇಂದ್ರ ಮತ್ತು ರಾಘವೇಂದ್ರ ಅವರು ಮೂವರದ್ದೇ ಫೋಟೊ ಹಾಕಿಕೊಂಡು ಪ್ರಚಾರ ಮಾಡಲಿ. ಎಷ್ಟು ಮತ ಪಡೆಯುತ್ತಾರೆ ನೋಡೋಣ. ಇವತ್ತು ಮೋದಿ ಅವರಂತೆ ಕಾಣುವ ವ್ಯಕ್ತಿ ಬಂದಿದ್ದರು. ಹಾಗಾಗಿ ಮೋದಿ ಅವರೆ ಬಂದು ಇಲ್ಲಿ ಆಶೀರ್ವಾದ ಮಾಡಿದಂತಾಗಿದೆ ಎಂದರು