Wednesday, December 17, 2025
Wednesday, December 17, 2025

Klive Special Article ಸಿನಿ ಲೋಕದ ಸುತ್ತಮುತ್ತ… ಲೇ: ಜೆ.ಎಸ್. ನವೀನ್ ಚಂದ್ರ

Date:

Klive Special Article ಪ್ರೇಕ್ಷಕನಿಗೆ ಒಂದು ಸಿನಿಮಾವೆಂದರೆ ಸೀಮಿತ ಅವಧಿಯಲ್ಲಿ ಅವನ ಎಲ್ಲಾ ಜಂಜಾಟಗಳನ್ನು ಕ್ಷಣ ಕಾಲ ಮರೆಯುವಂತೆ ಮಾಡಿ ಮನಸಿಗೆ ಮನರಂಜನೆಯ ನೀಡುವ ಒಂದು ಮಾಧ್ಯಮ, ಅವನ ಜಂಜಾಟಗಳನೆಲ್ಲ ಬದಿಗೊತ್ತಿ ಸಮಯವ ಮೀಸಲಿಟ್ಟು ದುಡ್ಡು ಕೊಟ್ಟು ನೋಡಲು ಬರುತ್ತಾನೆ. ಆದರೆ ಸಿನಿಮಾ ಎಂದರೆ ಮನರಂಜನೆಯೊಂದೆ ಅದರ ಉದ್ದೇಶವಲ್ಲ,ಹೇಳಬೇಕಿರುವ ವಿಚಾರವನ್ನು ಕತೆ, ಸಂಗೀತ,ಬೆಳಕು ಹಾಗೂ ಪಾತ್ರಗಳ ಮೂಲಕ ಪ್ರೇಕ್ಷಕನನ್ನು ಕುಳಿತುಕೊಂಡು ನೋಡುವ ರೀತಿ ಕಟ್ಟಿಕೊಡುವ ಒಂದು ಕಲೆ. ಅವನಿಗೆ ಇದು ಸತ್ಯ ಕತೆಯೋ,ಆತ್ಮಕಥೆಯೋ, ಕಲ್ಪನೆಯ ಕಥೆಯೋ ಅಥವಾ ಬೆರೆಸಿದ ಕಥೆಯೋ ಬೇಕಾಗಿಲ್ಲ ಆದರೆ ಅದು ಯಾವುದೇ ತೆರನಾದ ಕಥೆಯಾಗಿರಲಿ ಅದನ್ನು ದೃಶ್ಯಾತ್ಮಕವಾಗಿ ಹೇಳುವ ರೀತಿ ಅವನಿಗೆ ಅದು ಮನಮುಟ್ಟುವ ರೀತಿ ಮುಖ್ಯ, ಅದು ಯಾವುದೇ ತೊಡಕಿಲ್ಲದೆ ನೋಡಿಸಿಕೊಂಡು ಹೋದರೆ ಸಾಕು.

ಈ ಕಲೆಯ ಅದ್ಭುತ ಕುಸುರಿ ಮಾಡುವ ಜಾಣ್ಮೆ, ತಾಳ್ಮೆ ಕಥೆ ಕಟ್ಟುವವನಿಂದ ಹಿಡಿದು ನಿರ್ದೇಶಕ, ಸಂಗೀತ, ನಟರು, ತಾಂತ್ರಿಕ ವರ್ಗ, ನಿರ್ಮಾಣ ಹೀಗೆ ಆ ಸಿನಿಮಾದ ಪ್ರತಿಯೊಬ್ಬ ಕೆಲಸಗಾರನಿಗೆ ಇರಬೇಕು. ಎಲ್ಲರನ್ನೂ ಒಂದೇ ಲಯದಲ್ಲಿ ಕೂಡಿಕೊಂಡು ಕೆಲಸ ತೆಗೆಸುವ ಹೊಣೆ ನಿರ್ದೇಶಕನಾದರೂ ಎಲ್ಲರ ಕರ್ತವ್ಯ ನಿಷ್ಠೆ ಇಲ್ಲಿ ತುಂಬಾ ಮುಖ್ಯ. ಪ್ರೇಕ್ಷಕನಿಗೆ ತಂಡ ಎಷ್ಟು ಕಷ್ಟ ಪಟ್ಟಿದೆ,ಎಷ್ಟು ದಿನ ಕೆಲಸ ಮಾಡಿದೆ ,ಎಷ್ಟು ದುಡ್ಡು ಖರ್ಚು ಮಾಡಿದ್ದಾರೆ,ಎಷ್ಟು ಜನ ಕೆಲಸ ಮಾಡಿದ್ದಾರೆ ಇದು ಯಾವುದು ಅವನಿಗೆ ಮುಖ್ಯವಲ್ಲ. ಅವನು ಕೊಟ್ಟ ಹಣಕ್ಕೆ ಸಮಯಕ್ಕೆ ಒಂದೊಳ್ಳೆ ಸಿನಿಮಾನಾ ಇಲ್ಲವಾ ಎಂದು ನೋಡುತ್ತಾನೆ.

Klive Special Article ಪ್ರೇಕ್ಷಕನಿಗಾಗಿ ಸಿನಿಮಾ ಮಾಡಿದಾಗ ಅವನು ನೋಡುವಂತೆ ಮಾಡಬೇಕು, ಅದರ ಅರ್ಥ ಈಗಾಗಲೇ ಗೆದ್ದಿರುವ ಸಿನಿಮಾಗಳ ಸೂತ್ರಗಳನಿಟ್ಟು ಕೊಂಡಗಾಲಿ, ಅದೇ ರೀತಿಯ ಕಥೆಯಾನಾಗಲಿ, ಅದೇ ನಟನನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದಲ್ಲ. ಪ್ರೇಕ್ಷಕನನ್ನು ಹಿಡಿದಿಡುವ ರೀತಿ, ನಿಮ್ಮದೇ ಛಾಪು ಮೂಡಿಸುವ ಕಲೆ, ನಿಮ್ಮ ವಿಶಿಷ್ಟ ಶೈಲಿಯಲ್ಲಿ ಮಾಡುವುದು. ಸಂಪೂರ್ಣ ಸಿನಿಮಾದ ಚಿತ್ರಣ ನಿಮ್ಮ ಹಿಡಿತದಲ್ಲಿ ಇದ್ದರು ಅದನ್ನು ನೋಡುವುದು ಪ್ರೇಕ್ಷಕ ಎಂಬುದನ್ನು ಮರೆಯಬಾರದು.

ಒಂದು ಸಿನಿಮಾ ಒಂದೆಳೆ ಕಥೆಯಿಂದ,ದೊಡ್ಡ ಕಥೆಯಾಗಿ, ಅದು ತಿದ್ದುಪಡಿಯಾಗಿ,ಅದಕ್ಕೆ ಚಿತ್ರಕಥೆ ಬರೆದು ಅದರ ತಿದ್ದುಪಡಿ ಮಾಡಿ ಸಮಯದ ಪರಿಧಿಯಲ್ಲಿ ತಿದ್ದಿ ಸಂಭಾಷಣೆ ಬರೆದು, ಅದರ ಬಜೆಟ್ ತಯಾರಿಸಿ, ಚಿತ್ರೀಕರಣದ ಸ್ಕ್ರಿಪ್ಟ್ ತಯಾರಿಸಿ, ಅದನ್ನು ನಿರ್ಮಾಪಕರ ಮನೆಮನೆಗೆ ಅಲೆದು ಒಪ್ಪಿಸಿ ಅವರ ಬಜೆಟ್ಗೆ ಹೊಂದಿಕೆ ಮಾಡಿ, ಟೈಟಲ್ ರಿಜಿಸ್ಟ್ರಾರ್ ಮಾಡಿಸಿ, ತಂಡದ ಆಯ್ಕೆ, ತಾಂತ್ರಿಕ ವರ್ಗದ ಆಯ್ಕೆ ಮಾಡಿ,ನಟರ ಆಯ್ಕೆ, ಸ್ಥಳಗಳ ಹುಡುಕಾಟ, ಪರ್ಮೀಷನ್ಗಳು, ಚಿತ್ರೀಕರಣ(ಸುಸೂತ್ರವಾಗಿ ನಡೆದರೆ ತೊಂದರೆ ಇಲ್ಲ, ಆದರೂ ನೂರಾರು ವಿಘ್ನಗಳು ಇದ್ದೇ ಇರುತ್ತದೆ{ಎಲ್ಲಾ ಹಂತದಲ್ಲೂ}) , ಸಂಕಲನ,ಸಂಗೀತ, ಡಬ್ಬಿಂಗ್, ರೀರೆಕಾರ್ಡಿಂಗ್,ಕಾಲರಿಂಗ್,ಫೈನಲ್ ಕರೆಕ್ಷನ್,ಪ್ರಮೋಷನ್,ಪಬ್ಲಿಸಿಟಿ, ಥಿಯೇಟರಗಾಗಿ ಪರದಾಟ ಇಷ್ಟೆಲ್ಲಾ ಸರ್ಕಸ್ ಇರುತ್ತದೆ.

ಹೇಗೋ ಆಗೋ ಹಿಗೋ ಎಲ್ಲಾ ತಯಾರಿ ಮಾಡಿ ಚಿತ್ರ ಬಿಡುಗಡೆ ಮಾಡಿದರೆ ಪ್ರೇಕ್ಷಕ ಪ್ರಭುವಿನ ಕೊರತೆ, ಉತ್ತಮ ಪ್ರಚಾರದ ಕೊರತೆ ಹೀಗೆ ಅನೇಕ ಕಾರಣಗಳಿಂದ ಚಿತ್ರ(ಉತ್ತಮ/ಉತ್ತಮವಲ್ಲದ) ಮಕಾಡೆ ಮಲಗುವುದು ಇದು ಬಹುತೇಕ ಚಿತ್ರಗಳ ವ್ಯಥೆಯ ಕಥೆ(ಕೆಲ ಸ್ಟಾರ್ ನಟ/ನಿರ್ದೇಶಕರ ಚಿತ್ರಗಳ ಹೊರತು ಪಡಿಸಿ). ಇಲ್ಲಿ ಎಲ್ಲವೂ ಹಾಗೆ ಸೋತು ಹೋಗುತ್ತದೆ ಎಂದು ಸಂಪೂರ್ಣವಾಗಿ ಹೇಳಲು ಆಗದು, ಅಲ್ಲೊಂದು ಇಲ್ಲೊಂದು ಉತ್ತಮ ಚಿತ್ರಗಳ ಕೈಹಿಡಿದು ಎತ್ತಿದ ಉದಾಹರಣೆಗಳಿವೆ ಅದು ಹೊಸಬರದಾಗಿರಲಿ ಯಾರದೇ ಆಗಿರಲಿ.

ಇಲ್ಲಿ ಸರಿತಪ್ಪಿನ ಪ್ರಶ್ನೆಯ ಅವಶ್ಯಕತೆ ಇಲ್ಲ. ಸಿನಿಮಾ ಮಾಡುವವರು ನೋಡುವವರ ಮಧ್ಯೆ ಇರಬೇಕಾದದ್ದು. An undefined and unconditional Culture of understanding.( what he needs, what I can give, how I can give what he want but with the contents what I have, How he can support, How I can make him proud and create an unique way etc…)

ಸಿನಿಮಾ ಎಂಬುದು ಪ್ರೇಕ್ಷಕ ಹಾಗೂ ಸಿನಿಮಾ ಮಾಡುವವರ ನಡುವೆ ಇರಬೇಕಾದ ಯಾವ ಷರತ್ತು ಇಲ್ಲದ ಹೊಂದಾಣಿಕೆ ಹಾಗೂ ಅರ್ಥ ಮಾಡಿಕೊಳ್ಳುವ ಅನುಬಂಧ. ಸಿನಿಮಾ ಎಂಬುದು ಅವ್ಯಕ್ತ ಭಾವನೆಗಳನ್ನು ಕಲಾತ್ಮಕವಾಗಿ ಮನರಂಜನೆಯನ್ನು ದೃಶ್ಯಗಳ ಮೂಲಕ ತೆರೆಯ ಮೇಲೆ ಕಟ್ಟಿಕೊಡುವ ಒಂದು ಅನನ್ಯ ಕಲೆ. ಇಲ್ಲಿ ಒಂದು ಕಲ್ಪನೆ ನಿಜವಾಗುತ್ತದೆ, ಒಂದು ಸುಳ್ಳು ಸತ್ಯವಾಗುತ್ತದೆ, ಈ ಕಾಲ ಆ ಕಾಲವಾಗುತ್ತದೆ. ಕನಸು ನನಸಾಗುತ್ತದೆ. ಸಮಸ್ಯೆಗೆ ಪರಿಹಾರದ ದಾರಿ, ಇತಿಹಾಸದ ತುಣುಕುಗಳ ಮರುಸೃಷ್ಟಿ ಹೀಗೆ ಇಲ್ಲಿ ಎಲ್ಲವೂ ಸಾಧ್ಯ, ಅಸಾಧ್ಯವು ಸಾಧ್ಯ. ಅನಕ್ಷರಸ್ಥ ಡಾಕ್ಟರ್, ಇಂಜಿನಿಯರ್, ಪೊಲೀಸ್ ಆಗುತ್ತಾನೆ ಅಕ್ಷರಸ್ಥ ಅನಕ್ಷರಸ್ಥ, ಭಿಕ್ಷುಕ ಆಗಬಹುದು, ಕುಬೇರ ಬಡವನಾಗುವ ಹೀಗೆ ಇಲ್ಲಿ ಎಲ್ಲವೂ ಸಾಧ್ಯ.

ಸಿನಿಮಾ ಒಂದು ಲೋಕ, ಲೋಕದೊಳಗೆ ಮಾಂತ್ರಿಕತೆ, ಅದರೊಳಗೊಂದು ಕತೆ, ಕತೆಯೊಳಗೆ ತಾಂತ್ರಿಕತೆ. ಬ್ರಹ್ಮ ಸೃಷ್ಟಿಸದ ಮಾನವ ಸೃಷ್ಟಿಸಿದ ಭ್ರಮಾಲೋಕ. ಇಲ್ಲಿ ಎಲ್ಲವೂ ಉಂಟು ಆದರೂ ಏನಿಲ್ಲ ಏನಿಲ್ಲವೆಂದರೆ ಏನೇನೋ ಇಲ್ಲ. ಆದರೂ ಸಿನಿಮಾದ ಒಳಗೆ ಎಲ್ಲವೂ ಉಂಟು. ನಮ್ಮ ಬದುಕಿನ ಜೊತೆಗೆ ಅಂಟಿರುವ ಬಿಡಿಸಲಾಗದ ನಂಟು.

ಬರಹ : ನವೀನ್ ಚಂದ್ರ, ಜೆ.ಎಸ್ ನೆಟ್ ವರ್ಕ್ ಕಮ್ಯೂನಿಕೇಷನ್, ಬೆಂಗಳೂರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...