Kannada Sahitya Parishath ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಎರಡನೇ ಸ್ವಾತಂತ್ರ‍್ಯ ಹೋರಾಟ ನಡೆಯಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಪ್ರತಿಪಾದಿಸಿದರು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೀಪಲ್ಸ್ ಲಾಯರ್ಸ್ ಗಿಲ್ಡ್ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಭಾನುವಾರ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನದ ಆಶಯಗಳು ಮತ್ತು ಭಾವೈಕ್ಯತೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
Kannada Sahitya Parishath ಇತಿಹಾಸ ನೋಡಿದಾಗ, ಹೋರಾಟಗಳು ನಡೆದಿದ್ದರಿಂದ ಮಾತ್ರ ಅನೇಕ ಬದಲಾವಣೆಗಳಾಗಲು ಸಾಧ್ಯವಾಯಿತು ಎಂದು ಸಾಬೀತಾಗಿದೆ. ಸ್ವಾತಂತ್ರ‍್ಯ ಹೋರಾಟದಂತಹ ತೀವ್ರ ತರವಾದ ಹೋರಾಟ ಬೇಕಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಎಲ್ಲಾ ಮಹಿಳೆಯರಿಗೆ, ದುರ್ಬಲರಿಗೆ ಸಂವಿಧಾನ ಆಶಯ ತಲುಪಿಸಿದ್ದಿರ ಎಂದು ಸರ್ಕಾರಗಳನ್ನು ಪ್ರಶ್ನಿಸಿದಾಗ ಅವರಿಂದ ಉತ್ತರವಿಲ್ಲ. ಸ್ಟಾರ್ ಹೋಟೆಲ್‌ಗಳಿಗಿಂತ ರುಚಿಯಾಗಿ ಬಿಸಿಯೂಟ ಅಡುಗೆ ಮಾಡುವ ಮಹಿಳೆಯರು ಅಡುಗೆ ಮಾಡುತ್ತಾರೆ. ಅದರೇ ಸರ್ಕಾರ ಅಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲದೆ ಉಪೇಕ್ಷೆ ಮಾಡುತ್ತಿದೆ. ನಮ್ಮ ನಡುವೆ ಇರುವುದು ನ್ಯಾಯ ನೀಡುವ ಆಡಳಿತಗಾರರಲ್ಲ, ಬಂಡವಾಳಶಾಹಿಗಳ, ಉದ್ಯಮಿಗಳ ಏಜೆಂಟ್‌ಗಳು ಎಂದು ಟೀಕಿಸಿದರು.
ಶ್ರಮಜೀವಿಗಳ ಸಂಕಷ್ಟ, ಬೆವರ ವಾಸನೆ ಗ್ರಹಿಸದ ನಾಯಕರಿದ್ದಾರೆ. ರೈತರನ್ನು ಬೆನ್ನೆಲುಬು ಎನ್ನುತ್ತೇವೆ. ಆದರೆ ಅವರನ್ನು ಮಹಿಳೆಯರ ಹಾಗೆಯೇ ಶೋಷಿಸಲಾಗುತ್ತಿದೆ. ಮಹಿಳೆಯರು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಸದೃಢರು. ಆದರೆ ಅವರ ಬದುಕು ಸದೃಢÁಗಿಲ್ಲ ಎಂದರು.
Kannada Sahitya Parishath ನಮ್ಮ ನಡುವೆ ಇರುವುದು ನ್ಯಾಯ ನೀಡುವ ಆಡಳಿತಗಾರರಲ್ಲ, ಬಂಡವಾಳಷಾಹಿ ಉದ್ಯಮಿಗಳ ಏಜೆಂಟರು- ನಿವೃತ್ತ ನ್ಯಾ. ಗೋಪಾಲಗೌಡ
Date: