Saturday, December 6, 2025
Saturday, December 6, 2025

Arun Yogiraj ಜನರನ್ನು ಮೆಚ್ಚಿಸುವುದು ಕಷ್ಟ, ರಾಮಲಲ್ಲಾ ಮೂರ್ತಿ ಮೆಚ್ಚುಗೆಯಾಗುವದೋ ಇಲ್ಲವೋ ಅನುಮಾನವಿತ್ತು- ಶಿಲ್ಪಿ ಅರುಣ್ ಯೋಗಿರಾಜ್

Date:

Arun Yogiraj ನನ್ನ ಕುಲಕಸುಬು ಕೆತ್ತನೆ. ಇದು ನನಗೆ ಬಹಳ ಇಷ್ಟ. ಶಿಲ್ಪಿ ಕೆತ್ತಿದರೆ ಸಾಲದು. ಅದು ಸಾರ್ವಜನಿಕರು ಮೆಚ್ಚುಗೆಗೆ ಪಾತ್ರವಾಗಬೇಕು. ಇದು ನನಗೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಕೆತ್ತನೆ ಅನಾವರಣ ಆದನಂತರ ಹುಟ್ಟಿದ ವಿಚಾರ ಎಂದು ರಾಮಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ಮಹಾಸಭಾ, ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘ, ಶ್ರೀಕಾಳಿಕಾಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ, ಹರಕೆರೆ ಕಾಳಿಕಾಂಬ ದೇವಸ್ಥಾನ ಸಮಿತಿ ಹಾಗೂ ಜಿಲ್ಲಾ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿಗಳಾದ ಅರುಣ್ ಯೋಗಿರಾಜ್‌ಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಾಮಲಲ್ಲಾನ ವಿಗ್ರಹದ ಕೆತ್ತನೆಯ ಆದೇಶ ಬರುವ ಮುಂಚೆ ಮೊದಲಿಗೆ ಶಂಕರಾಚಾರ್ಯರ ಪ್ರತಿಮೆ ಕೆತ್ತನೆ ಕೆಲಸ ಮಾಡಿದ್ದೆ. ಶಂಕರಾಚಾರ್ಯರ ವಿಗ್ರಹ ಕೆತ್ತನೆಯ ನಂತರ ತನ್ನ ಜೀವನವೇ ಬದಲಾಯಿತು. ಭಗವಂತ ಅವಕಾಶ ಕಲ್ಪಿಸಿಕೊಡ್ತಾನೆ. ಅದರ ಸದುಪಯೋಗ ಹೇಗೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಡೆಯುತ್ತದೆ ಎಂದರು.

ಶಂಕರಾಚಾರ್ಯರ ಪ್ರತಿಮೆ ಕೆತ್ತನೆ ಕೆತ್ತುವ ಮೂಲಕ ದಕ್ಷಿಣದಿಂದ ಉತ್ತರಕ್ಕೆ ನಮ್ಮ ಕಲೆ ಪರಿಚಯವಾಯಿತು ಎಂದರು.

Arun Yogiraj ಕಷ್ಟದ ನಂತರ ಸುಖ ಇರುತ್ತದೆ. ಎಷ್ಟೇ ಕಷ್ಟ ಎನಿಸಿದರೂ ಮಾಡುವ ಕರ್ಮ ಬಿಡಬಾರದು. ಕಷ್ಟದ ನಂತರ ಬರುವುದೇ ಸುಖ ಅದಕ್ಕೆ ನಾನೇ ಉದಾಹರಣೆ ಎಂದ ಯೋಗಿರಾಜ್, ಜನರನ್ನು ಮೆಚ್ಚಿಸುವುದು ಕಷ. ಹಾಗಾಗಿ ದೇಶದ ಜನರಿಗೆ ರಾಮಲಲ್ಲಾನ ಮೂರ್ತಿ ಮೆಚ್ಚಿಗೆ ಆಗುವುದೇ ಎಂಬ ಆತಂಕ ಮತ್ತು ಕುತೂಹಲವಿತ್ತು. ಆದರೆ ದೇವರ ಕೃಪೆ ಜನ ಮೆಚ್ಚಿಕೊಂಡರು ಎಂದರು.

ಸನ್ಮಾನ ಸಿಗಲಿದೆ ಎಂಬ ಕಾರಣಕ್ಕೆ ಬಾಲರಾಮನ ವಿಗ್ರಹ ಕೆತ್ತನೆಮಾಡಲಿಲ್ಲ. ಆದರೆ ಕೆತ್ತನೆಯ ಮೂಲಕ ಜನ ನನ್ನನ್ನು ಮೆಚ್ಚಿಕೊಂಡಿದ್ದಾರೆ. ೨೦ ವರ್ಷದಿಂದ ಕೆತ್ತನೆ ಮಾಡಿಕೊಂಡು ಬಂದಿರುವೆ. ಆದರೆ ನಮ್ಮಪ್ಪ ನನ್ನ ಕೆಲಸವನ್ನು ಮೆಚ್ಚಿಕೊಂಡಿರಲಿಲ್ಲ. ಆದರೆ ಜನರು ನಿನ್ನ ತಾತನ ಹಾಗೆ ಕೆತ್ತನೆ ಮಾಡುತ್ತಿರುವೆ ಎನ್ನುತ್ತಿದ್ದರು. ಆದರೆ ತಂದೆ ಒಪ್ಪಿರಲಿಲ್ಲ. ಆದರೆ ರಾಮಲಲ್ಲನ ವಿಗ್ರಹ ಅನಾವರಣಗೊಂಡಾಗ ಅಪ್ಪ ಒಪ್ಪಿಕೊಂಡರು. ತಾತನ ಹೆಸರು ಉಳಿಸಿದೆ ಎಂದರು.

ಹಾಸನ ಜಿಲ್ಲೆಯ ಅರೆಮಾದನಹಳ್ಳಿಯ ಶಿವಸುಜ್ಞಾನ ಸ್ವಾಮೀಜಿ, ಚನ್ನಗಿರಿ ತಾಲೂಕಿನ ವಡ್ನಾಳ್ ಮಟದ ಶಂಕರ ಆತ್ಮಾನಂದ ಸರಸ್ವತಿ ಮಹಾಸ್ವಾಮಿಜಿ ದಿವ್ಯಸಾನಿಧ್ಯ ವಹಿಸಿದ್ದರು.

ವಿಶ್ವಕರ್ಮ ಮಹಾಸಭಾದ ನಿರಂಜನ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಗೆ ದೇವಶಿಲ್ಪಿ ಬಿರುದನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...