Tuesday, October 1, 2024
Tuesday, October 1, 2024

Klive News Special Article ಶೌಚಾಲಯದ ಇತಿಹಾಸ

Date:

Klive News Special Article ಈ ಲೇಖನದ ಶಿರ್ಷಿಕೆಯನ್ನು ನೋಡಿ ಛಿ.. ಛಿ.. ಏನಿದು ಲೇಖನ? ಏನೆಲ್ಲಾ ಬರಿತಾರಪ್ಪ ಎಂದು ಮೂಗೆಳೆಯದೇ ಓದಿ. ಮನುಷ್ಯನೂ ಸೇರಿದಂತೆ ಪ್ರತಿ ಪ್ರಾಣಿಯೂ ಸಹ ಆಹಾರವನ್ನು ಸೇವಿಸದ ಮೇಲೆ ಅದರಲ್ಲಿನ ಅವಶ್ಯಕ ವಸ್ತುವನ್ನು ಕರುಳು ಹೀರಿದ ಮೇಲೆ ಅದನ್ನು ವಿಸರ್ಜಿಸಲೇ ಬೇಕು. ಇದು ಪ್ರಕೃತಿ ನಿಯಮ. ಎಮ್ಮೆ, ದನ, ಕೋಳಿ, ಕುರಿ, ಹಂದಿ ಸೇರಿದಂತೆ ಅನೇಕ ಪ್ರಾಣಿಗಳೆನೋ ಅವುಗಳಿಗೆ ವಿಸರ್ಜನೆಯ ಒತ್ತಡ ಬಂದ ಕೂಡಲೇ ಎಲ್ಲೆಂದರಲ್ಲಿ ಪತ ಪತ ಎಂದು ವಿಸರ್ಜನೆ ಮಾಡಿ ಬಿಡುತ್ತವೆ. ಆದರೆ ಮನುಷ್ಯ? ಆತನಿಗೆ ಇದಕ್ಕೆ ಒತ್ತಡವಿದ್ದರೂ ಸಹ ಸಾಮಾಜಿಕ ಕಟ್ಟುಪಾಡುಗಳಿರುವ ಕಾರಣ ಎಲ್ಲೆಂದರಲ್ಲಿ ವಿಸರ್ಜಿಸುವ ಹಾಗಿಲ್ಲ. ಅದಕ್ಕೆ ಪ್ರಶಸ್ತ ಸ್ಥಳ ಬೇಕು.

ಬೆಕ್ಕುಗಳಲ್ಲಿ ಮಲವಿಸರ್ಜನೆಯ ವಿಧಾನ ಒಂಥರಾ ಭಿನ್ನ. ಅವುಗಳ ಮೂತ್ರದ ವಾಸನೆಯೂ ಸಹ ಕಠೋರ. ಬೆಕ್ಕುಗಳು ಮಲವಿಸರ್ಜನೆಯಾದ ಮೇಲೆ ಅದನ್ನು ಮರಳಿನಲ್ಲಿ ಮುಚ್ಚಿ ಬರುತ್ತವೆ. ಏಕೆ ಗೊತ್ತೆ? ಅವು ಅನಾದಿಯಿಂದಲೂ ತಮ್ಮ ಅವಾಸಸ್ಥಾನವನ್ನು ಮೂತ್ರ ವಿಸರ್ಜನೆಯ ಮೂಲಕ ಭದ್ರಪಡಿಸಿಕೊಳ್ಳುವ ಜೀವಿಗಳು.

ಭಾರತದಲ್ಲಿ ಇತ್ತೀಚೆಗೆ ಶೌಚದ ವ್ಯವಸ್ಥೆ ಸುಧಾರಿಸುತ್ತಿದೆಯಾದರೂ ಸಹ ಬಯಲು ಶೌಚ ನಿಂತಿಲ್ಲ. ಹೆಣ್ಣು ಮಕ್ಕಳು ರಸ್ತೆಬದಿಯಲ್ಲಿ ಸಂಜೆಯಾದ ಮೇಲೆ ಸಂಕೋಚದಿAದ ಕೂರುವುದನ್ನು ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದ ಅನೇಕ ಭಾಗದಲ್ಲಿವೆ.

ಭಾರತೀಯ ಶೈಲಿ ಮತ್ತು ಪಾಶ್ಚಾತ್ಯ ಶೈಲಿಯ ಶೌಚ ಪದ್ಧತಿಯಲ್ಲಿ ಯಾವುದು ಉತ್ತಮ ಎಂದು ಅನೇಕ ಸಲ ಚರ್ಚೆಯಾಗುತ್ತದೆ. ಪ್ರತಿಯೊಂದಕ್ಕೂ ಅದರದೇ ಆದ ಗುಣಾವಗುಣಗಳಿವೆ. ಭಾರತೀಯ ಶೈಲಿಯ ಶೌಚಾಲಯದಲ್ಲಿ ದೇಹ ಮೊಣಕಾಲ ಮೇಲೆ ಕೂರುವುದರಿಂದ ಗುದನಾಳ ನೇರವಾಗಿ ಪೂರ್ಣವಾಗುತ್ತದೆ ಎನ್ನಲಾಗಿದೆ. ಆದರೆ ಇದು ವಯಸ್ಸಾದವರಿಗೆ, ಮಂಡಿನೋವಿರುವವರಿಗೆ, ಎಲುಬಿನ ಮುರಿತವಾದವರಿಗೆ ಹೇಳಿ ಮಾಡಿಸಿದ್ದಲ್ಲ. ಇದಕ್ಕೆ ಸ್ವಚ್ಚಗೊಳಿಸಲು ಕಡಿಮೆ ನೀರು ಸಾಕು. ಪಾಶ್ಚಾತ್ಯ ಶೈಲಿಯ ಶೌಚಾಲಯ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಇದರಲ್ಲಿ ಶೌಚವು ಸಂಪೂರ್ಣ ವಿಸರ್ಜನೆಯಾಗದೆ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನು ಸ್ವಚ್ಚಗೊಳಿಸಲು ನೀರು ತುಂಬಾ ಬೇಕು. ಅಲ್ಲದೇ ಅನೇಕ ಜನರು ಉಪಯೋಗಿಸಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಕಾಯಿಲೆ ಹರಡುವ ಸಾಧ್ಯತೆ ಜಾಸ್ತಿ. ಆದರೂ ಸಹ ಇದರ ಬಳಕೆ ಅವರವರ ಅನುಕೂಲಕ್ಕೆ ತಕ್ಕ ಹಾಗಿದೆ.

ರಾಮಾಯಣ ಮತ್ತು ಮಹಾಭಾರತದಲ್ಲಿ ಶೌಚದ ಬಗ್ಗೆ ವಿಶೇಷವಾಗಿ ಉಲ್ಲೇಖಗಳಿಲ್ಲ. ಆದರೆ ಅವರೆಲ್ಲಾ ಪ್ರಕೃತಿಯಲ್ಲಿ ಬಯಲು ಶೌಚವನ್ನು ಅವಲಂಭಿಸಿದ್ದರು ಎನ್ನಲಾಗಿದೆ. ಮಹಾಭಾರತದ ಯುದ್ಧದಲ್ಲಿ 18 ಅಕ್ಷೋಹಿಣಿ ಸೈನಿಕರ ಶೌಚವನ್ನು ದೊಡ್ಡ ಗುಂಡಿಯಲ್ಲಿ ಹಾಕಿ ಮುಚ್ಚಲಾಗುತ್ತಿತ್ತು ಎನ್ನಲಾಗಿದೆ. ಕೆಲವೊಂದು ಸಂಸ್ಕöÈತ ಶ್ಲೋಕಗಳಲ್ಲಿ ಇದರ ಬಗ್ಗೆ ಅಪರೋಕ್ಷವಾದ ಉಲ್ಲೇಖವಿದ್ದರೂ ಸಹ ಇದರ ಬಗ್ಗೆ ನೈಜ ವಿಷಯ ಗೊತ್ತಿಲ್ಲ. ಶ್ರೀಕೃಷ್ಣ ಮಹಾಭಾರತದ ಸಮಯದಲ್ಲಿ ಕಡಲೆಕಾಯಿ ಬೀಜವನ್ನು ತಿನ್ನುತ್ತಿದ್ದ ಎನ್ನಲಾಗಿದೆ. ಇದು ಆತ ಶೌಚಬಾಧೆಯನ್ನು ತಡೆಯಲು ಸಹಕಾರಿಯಾಗುತ್ತಿತ್ತು ಮತ್ತು ಆತ ಯುದ್ಧವನ್ನು ಮಾಡಲಾರೆ ಎಂದಿದ್ದರಿ0ದ ಆತನಿಗೆ ಹೆಚ್ಚಿನ ಆಹಾರದ ಅವಶ್ಯಕತೆ ಇಲ್ಲವಾಗಿತ್ತು ಎನ್ನಲಾಗಿದೆ.

Klive News Special Article ಆದಿ ಮಾನವನಿಂದ ಹಿಡಿದು ಹಳ್ಳಿಯಲ್ಲಿನ ಜನರು ಬಳಸುತ್ತಿದ್ದದ್ದು ಬಯಲು ಶೌಚವನ್ನೇ. ಆದರೆ ಶೌಚಾಲಯದ ಪರಿಕಲ್ಪನೆ ಹುಟ್ಟಿಕೊಂಡಿದ್ದು ಸುಮಾರು 6000 ವರ್ಷಗಳ ಹಿಂದೆ ಎನ್ನುತ್ತದೆ ಇತಿಹಾಸ. ಇದು ಮೊದಲ ಬಾರಿಗೆ ಆವಿಷ್ಕಾರವಾಗಿದ್ದು ಸ್ಕಾಟ್‌ಲ್ಯಾಂಡಿನಲ್ಲಿ ಎನ್ನಲಾಗಿದೆ. ಆಗ ಮರದ ಹಲಗೆ, ಎಲುಬುಗಳನ್ನು ಬಳಸಿ ಶೌಚಾಲಾದ ಕಮೋಡಿನ ತರದ್ದು ನಿರ್ಮಿಸಲಾಗುತ್ತಿತ್ತು. ಸ್ವಚ್ಚಗೊಳಿಸಲು ಸಮುದ್ರ ಕಳೆಯನ್ನು ಬಳಸಲಾಗುತ್ತಿತ್ತು. ಹಿಂದುಗಳಲ್ಲಿ ಶೌಚಾಲಯದ ಬಳಕೆ ಹರಪ್ಪಾ ಮತ್ತು ಮೊಹೆಂಜದಾರೋ ಸಂಸ್ಕöÈತಿಯೊAದಿಗೆ ಸುಮಾರು 4500 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು ಕಟ್ಟಿಗೆಯ ವಸ್ತುಗಳನ್ನು ಬಳಸಿ ತಯಾರಿಸಿ ಕೊಳೆಯನ್ನು ನೀರಿನಿಂದ ಸ್ವಚ್ಚಗೊಳಿಸುವ ಪದ್ಧತಿ ಇತ್ತು ಎನ್ನಲಾಗಿದೆ. ಪ್ರಾಚೀನ ಈಜಿಪ್ಶಿಯನ್ನರು ಮಲವನ್ನು ವಿಸರ್ಜನೆ ಮಾಡಿದ ನಂತರ ಹೂಳಲು ಮರಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಗ್ರೀಕರು ಮತ್ತು ರೋಮನ್ನರು ಶೌಚವನ್ನು ಕಟ್ಟಿಗೆಯ ದೋಣಿಯಂತ ಆಕರದಲ್ಲಿ ಸಂಗ್ರಹಿಸಿ ಅದನ್ನು ಮಣ್ಣಲ್ಲಿ ಹೂಳುತ್ತಿದ್ದರು ಎನ್ನಲಾಗಿದೆ. ಮಧ್ಯಪ್ರಾಚ್ಯದ ಮುಸ್ಲಿಮರು ಮೊದಲು ಶೌಚಾಲಯ ಬಳಸಿದ್ದು 1299 ರಲ್ಲಿ ಮತ್ತು ಶೌಚವನ್ನು ಸ್ವಚ್ಚಗೊಳಿಸಲು ಅವರು ನೀರನ್ನು (ಇಸ್ತಿಂಜಾ) ಮತ್ತು ಸಣ್ಣ ಕಲ್ಲನ್ನು (ಇಸ್ತಿಜ್ಮಾರ್) ಬಳಸುತ್ತಿದ್ದರು.

ಶೌಚವನ್ನು ಸ್ವಚ್ಚಗೊಳಿಸಲು ಕಾಗದವನ್ನು ಮೊದಲು ಉಪಯೋಗಿಸಿದ್ದು ಉತ್ತರ ಅಮೇರಿಕನ್ನರು 1585 ನೇ ಸಾಲಿನಲ್ಲಿ. ಈವತ್ತು ಬಳಸುವ ಟಿಶ್ಯು ಕಾಗದಕ್ಕೆ ಇದೇ ಪ್ರೇರಣೆ. ಈ ಕಾಲದಲ್ಲಿಯೇ ಮನೆಯ ಹೊರಗೆ ಕಟ್ಟಲ್ಪಡುತ್ತಿದ್ದ ಕಕ್ಕಸ್ಸನ್ನು ಮನೆಯೊಳಗೇ ಕಟ್ಟಲು ಪ್ರಾರಂಭಿಸಿದ್ದು ಎನ್ನಲಾಗಿದೆ.

ಹದಿನಾರನೆ ಶತಮಾನದಲ್ಲಿ ರಾಜ ಮಹಾರಾಜರುಗಳಿಗಾಗಿ ಮತ್ತು ಅವರ ರಾಣಿಯಂದಿರಿಗಾಗಿ ಕಲ್ಲಿನಿಂದ ನಿರ್ಮಿಸಿದ ಶೌಚಾಲಯವನ್ನು ವಿಶೇಷ ವಾಸ್ತುಶಿಲ್ಪಿಗಳು ನಿರ್ಮಿಸುತ್ತಿದ್ದರು. ಅಲ್ಲಿ ಮರಳನ್ನು ಬಳಸಿ ಶೌಚವನ್ನುಮುಚ್ಚಲಾಗುತ್ತಿತ್ತು. ನಂತರ ಅದನ್ನು ಹೊರಗೆ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಗುತ್ತಿತ್ತು. ಚೀನಿಯರು 800 ಅರ್ಷಗಳ ಹಿಂದೆ ಶೌಚಾಲಯ ಬಳಸಲು ಪ್ರಾರಂಭಿಸಿದ್ದು ಹಾನ್ ರಾಜವಂಶಸ್ಥರ ಕಾಲದಲ್ಲಿ. ಮರದ ಹಲಿಗೆ ಮತ್ತು ಬಿದಿರಿನ ಕೊಳವೆ ಬಳಸಿ ಶೌಚಾಲಯದ ರಚನೆ ಮಾಡಿದ್ದರು. ಸಾರ್ವಜನಿಕ ಶೌಚಾಲಯದ ಪರಿಕಲ್ಪನೆ ಬಂದಿದ್ದು ಚೀನಿಯರಿಂದ. ಹಣ ನೀಡಿ ಬಳಸುವ ಪಾಯಿಕಾನೆಗಳನ್ನು ಮೊದಲ ಬಾರಿಗೆ ಚೀನಾದಲ್ಲಿ ಬಳಕೆಗೆ ತರಲಾಯಿತು. ಅವುಗಳನ್ನು ಮಣ್ಣಿನ ಇಟ್ಟಿಗೆ ಮತ್ತು ಮರದ ಚಾವಣಿ ಬಳಸಿ ಕಟ್ಟಲಾಗುತ್ತಿತ್ತು. ಜಪಾನಿಯರು ಹಬೆಯನ್ನು ಬಳಸಿ ವಿಸರ್ಜಿಸಿದ ಮಲವನ್ನು ಸ್ವಚ್ಚಗೊಳಿಸುವ ತಂತ್ರಜ್ಞಾನ ಕಂಡು ಹಿಡಿದರು.

ಅಮೇರಿಕಾದಲ್ಲಿ ನಾಗರೀಕತೆ ಪ್ರಾರಂಭವಾದಾಗ ಗಿಡ ಮರಗಳ ಪಕ್ಕದಲ್ಲಿ ಸಣ್ಣ ಸಣ್ಣ ಗುಂಡಿಗಳನ್ನು ತೋಡಿ ಮಲವಿಸರ್ಜನೆಯ ನಂತರ ಅವುಗಳನ್ನು ಮುಚ್ಚುವ ಪದ್ಧತಿ ಇತ್ತು. ಆದರೆ ಜನಸಂಖ್ಯೆ ಜಾಸ್ತಿಯಾದಂತೆ ಇವು ಉಪಯೋಗಕ್ಕೆ ಬರದೇ 19 ನೇ ಶತ್‌ಮಾನದ ಆರಂಭದಲ್ಲಿ ಮನೆಯ ಒಳಗೆ ಪಾಯಿಖಾನೆಗಳನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು.

ಈಗ ಬಳಸುವ ಪಿಂಗಾಣಿ ಪಾಯಿಕಾನೆಯ ಬೇಸಿನ್ ಮೊದಲ ಬಾರಿಗೆ ಚೈನಾದಲ್ಲಿಯೇ ಪ್ರಾರಂಭವಾಯಿತು. ಇವುಗಳನ್ನು ಸ್ವಚ್ಚಗೊಳಿಸುವುದು ಸುಲಭ ಮತ್ತು ಕಡಿಮೆ ನೀರಿನ ಬಳಕೆ ಇದರ ಸ್ವಚ್ಚತೆಗೆ ಸಾಕು ಎಂದು ಇದು ಬಹಳ ಜನಪ್ರಿಯವಾಗಿ ಅನೇಕ ದೇಶಗಳಿಗೆ ಈಗ ಪ್ರಸರಿಸಿದೆ. ಇದಕ್ಕೆ ಕೊಳವೆ ಅಳವಡಿಸಿ ಸೆಪ್ಟಿಕ್ ಟ್ಯಾಂಕಿಗೆ ಸಂಪರ್ಕ ನೀಡುವ ವ್ಯವಸ್ಥೆ ಪ್ರಾರಂಭ ಮಾಡಿದ್ದು ಜಪಾನಿಯನ್ನರು ಎನ್ನಲಾಗಿದೆ. ಇದು ಜನಪ್ರಿಯವಾದ ಮೇಲೆ ಭೂಮಿಯ ಅಂತರ್ಗತವಾದ ಕೊಳವೆಗಳನ್ನು ಅಳವಡಿಸುವ ಈಗ ಬಳಸುವ ವ್ಯವಸ್ಥೆ ಪ್ರಾರಂಭವಾಗಿದ್ದು 20 ನೇ ಶತಮಾನದ ಪ್ರಾರಂಭದಲ್ಲಿ.

ನೋಡಿ, ಎಲ್ಲಿಂದ ಎಲ್ಲಿಂದ ಎಲ್ಲಿಗೆ ಬಂತು ಈ ವಿಸರ್ಜನೆ ಕಾರ್ಯ. ಮುಂದೆ ಏನೇನು ಇದರಲ್ಲಿ ಆವಿಷ್ಕಾರವಾಗಲಿದೆವೆಯೋ ತಿಳಿದಿಲ್ಲ. ಬದಲಾವಣೆ ಜಗದ ನಿಯಮ. ಅದು ಪಾಯಿಕಾನೆಗೂ ಅನ್ವಯ. ಕಾಲಾಯ ತಸ್ಮೆöÊ ನಮ: ಬದಲಾವಣೆಯ ಜೊತೆಗಿರುವುದಷ್ಟೆ ನಮ್ಮ ಕೆಲಸ.
ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...