Youth Hostel Association ಪೂರ್ವಜರು ಮಾಡಿರುವ ಆಚರಣೆಗಳು ಧರ್ಮದ ಉಳಿವಿಗಾಗಿ, ಆಯಾ ಕಾಲಕ್ಕೆ ತಕ್ಕಂತೆ ಹಬ್ಬ ಆಚರಣೆ ಏರ್ಪಡಿಸಿದ್ದಾರೆ. ಭಾರತ ದೇಶವು ವೈವಿಧ್ಯಮಯ ಆಚರಣೆಗಳ ಸಾಂಸ್ಕೃತಿಕ ರಾಜಧಾನಿ ಎಂದು ಅ.ನಾ.ವಿಜಯೇಂದ್ರರಾವ್ ಹೇಳಿದರು.
ಯೂತ್ ಹಾಸ್ಟೆಲ್ ತರುಣೋದಯ ಘಟಕದಿಂದ ನಗರದ ಅರಕೆರೆಯ ವೀರಭದ್ರಶ್ವರ ದೇವಸ್ಥಾನದ ಅವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಳದಿಂಗಳಲ್ಲಿ ಭೋಜನ ಸವಿಯುವ ಸವಿ ಅನನ್ಯ. ವಸಂತ ಋತುವಿನಲ್ಲಿ ಬರುವ ಹುಣ್ಣಿಮೆಯಲ್ಲಿ ತರುಣೋದಯ ಘಟಕ ಆಯೋಜಿಸಿರುವ ಕಾರ್ಯಕ್ರಮ ಶ್ಲಾಘನೀಯ ಎಂದು ತಿಳಿಸಿದರು.
ಯೂತ್ ಹಾಸ್ಟೆಲ್, ರಾಷ್ಟ್ರೀಯ ಚಾರಣ ಏರ್ಪಡಿಸಿದಾಗ ಪ್ರತಿದಿನ ಸಂಜೆ ಭಾರತೀಯ ಭಾವೈಕ್ಯತಾ ಕಾರ್ಯಕ್ರಮ ಹಮ್ಮಿಕೊಂಡು, ಪ್ರಾಚೀನ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಅದೇ ರೀತಿ ಪ್ರಾಚೀನ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ – ಬೆಳೆಸಲು ಇಂದು ಈ ರೀತಿ ಕಾರ್ಯಕ್ರಮ ತರುಣೋದಯ ಘಟಕದಿಂದ ಆಯೋಜಿಸಲಾಗಿದೆ ಎಂದರು.
ಅರಕೆರೆ ದೇವಸ್ಥಾನದ ಕಂಬದ ಮೇಲೆ ಇತಿಹಾಸ ಸಾರುವ ಲೇಖನವಿದ್ದು, ಅದರ ಪೂರ್ಣ ಮಾಹಿತಿ ಓದಿದ ದಿಲೀಪ್ ನಾಡಿಗ್, ಶಿವಮೊಗ್ಗ ಜಿಲ್ಲೆಯ ಇತಿಹಾಸಗಾರರ ಮಾಹಿತಿ ನೀಡಿ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.
Youth Hostel Association ಸುಮಾರಾಣಿ ಅವರು ಭಾರತೀಯ ಸಂಸ್ಕೃತಿಯನ್ನು ಬೆಳಗುವ ಗಾಯನದ ಕ್ರೀಡೆಗಳನ್ನು ಆಡಿಸಿದರು. ಜಿ.ವಿಜಯಕುಮಾರ್ ಅವರು ಸುಮಧುರವಾದ ಗೀತೆಗಳನ್ನು ಹಾಡಿ ರಂಜಿಸಿದರು. ಸ್ವಾಗತಿಸಿದ ಚೇರ್ಮನ್ ಎಸ್.ಎಸ್.ವಾಗೇಶ್, ಬೇಸಿಗೆಯಲ್ಲಿ ಚಾರಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ, ಆದ್ದರಿಂದ ಈ ರೀತಿ ಕಾರ್ಯಕ್ರಮ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಚಾರಣಿಗರು ಸಂಜೆ ಬೆಳೆದಿಂಗಳ ತಂಪಲ್ಲಿ ಭೋಜನದ ಸವಿದರು. ಕಾರ್ಯದರ್ಶಿ ಸುರೇಶಕುಮಾರ್, ನಿರ್ದೇಶಕರಾದ ನಾಗರಾಜ್, ಭಾರತಿ, ಡಾ. ಪ್ರಕೃತಿ, ನಾಗರಾಜ್, ರಂಗನಾಥ್, ಶೋಭಾ, ಆಶಾ, ಸಂಪತ್ ಕುಮಾರಿ, ಶ್ರೀಲತಾ, ಪ್ರಜ್ವಲ್, ಶ್ರೀಕಾಂತ್, ರಾಜಶೇಖರ್ ಹಾಗೂ ನಾಲ್ಕರಿಂದ ಎಂಬತ್ತರ ವಯೋಮಾನದ ಸದಸ್ಯರು ಭಾಗವಹಿಸಿದ್ದರು.