Lok Sabha Election ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆಗೆ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಮನೆ ಮನೆಗೆ ಹೋಗಿ ಪ್ರಚಾರ ಮಾಡಲಿದ್ದಾರೆ.
ಗ್ರಾಮಾಂತರ ಪ್ರಭಾರಿಯಾಗಿ ಡಾ|| ಧನಂಜಯ್ ಸರ್ಜಿ ನೇಮಕವಾಗಿದ್ದಾರೆ. ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅತಿ ಹೆಚ್ಚು ಮತ ಗಳಿಸುವ ವಿಶ್ವಾಸವಿದೆ ಎಂದು ಸಿವಮೊಗ್ಗ ಕ್ಷೇತ್ರದ ಪ್ರಭಾರಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು,
ಜೆಡಿಎಸ್ ನೊಂದಿಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆಯದ ಬಳಿಕ ಸಮನ್ವಯ ಸಮಿತಿ ರಚನೆ ಆಗಿರಲಿಲ್ಲ. ಈಗ ರಚನೆ ಆಗಿದೆ. ಅದೇ ರೀತಿ ವಿಧಾನಸಭಾ ಕ್ಷೇತ್ರವಾರು ರಚನೆ ಮಾಡಲಾಗಿದೆ. ಜೆಡಿಎಸ್ ಮತ್ತು ಬಿಜೆಪಿಯ ತಲಾ ೧೦ ಸದಸ್ಯರು ಸಮನ್ವಯ ಸಮಿತಿಯಲ್ಲಿರುತ್ತಾರೆ. ಈಗಾಗಲೆ ಸಭೆನಡೆಸಲಾಗಿದೆ. ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ, ತಾಪಂ, ಗ್ರಾಪಂ ಮಟ್ಟದಲ್ಲಿ ಪ್ರಚಾರ ಮಾಡಲಾಗುವುದು ಎಂದರು.
Lok Sabha Election ಪ್ರತಿ ಬೂತ್ ಮಟ್ಟಕ್ಕೆ ತೆರಳಿ ಸಮನ್ವಯತೆಯಲ್ಲಿನಡೆಸಲು ಪ್ರಯತ್ನಿಸಲಾಗುತ್ತಿದೆ. ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಎಂಬುದ ಕರಪತ್ರಗಳಲ್ಲಿ ಇರುತ್ತದೆ. ಚಿಹ್ನೆ ಕಮಲ ಇರುತ್ತದೆ ಎಂದರು. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಘವೇಂದ್ರ ಇರುತ್ತಾರೆ. ಗ್ರಾಮಾಂತರ ಭಾಗದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಹರಿಗೆ ವಾರ್ಡ್ನಿಂದ ಪ್ರಚಾರ ಆರಂಭಿಸಲಾಗಿದೆ ಎಂದರು.
Lok Sabha Election ಗ್ರಾಮಾಂತರದಲ್ಲಿ ಬಿ.ವೈ.ರಾಘವೇಂದ್ರಗೆ ಅತಿ ಹೆಚ್ಚು ಮತಗಳು ರಘುಪತಿ ಭಟ್ ವಿಶ್ವಾಸ
Date: