Cyber Crime Police ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಕಳುವಾಗಿದ್ದ 12.10ಲಕ್ಷ ರೂ., ಮೌಲ್ಯದ ಒಟ್ಟು 100 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಏ.1ರಂದು ಮೂಲ ಮಾಲೀಕರಿಗೆ ಅವರವರ ಮೊಬೈಲ್ ಗಳನ್ನು ಹಿಂದಿರುಗಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ಮಾಡಿದ ಎಸ್ ಪಿ ಮಿಥು ಕುಮಾರ್, ಸೈಬರ್ ಕ್ರೈಂ ಸಿಬ್ಬಂದಿಗಳನ್ನೊಳಗೊ ಸಿಇಐಆರ್ ಪೋರ್ಟಲ್ ನಲ್ಲಿ ಪತ್ತೆಯಾದ ಮೊಬೈಲ್ ಗಳು ಇವಾಗಿವೆ ಎಂದರು.
ಈವರೆಗೆ ಈ ಪೋರ್ಟಲ್ ಮೂಲಕ 500 ಕ್ಕೂ ಹೆಚ್ಚಿನ ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ. ಪತ್ತೆಹಚ್ಚಿದ ಪೊಲೀಸರಿಗೆ ಎಸ್ ಪಿ ಮಿಥುನ್ ಕುಮಾರ್ ಅಭಿನಂದಿಸಿದರು.
Cyber Crime Police ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡದೇ ತಾವೇ ಸ್ವತಃ KSP ಅಪ್ಲಿಕೇಷನ್ ನ eLOST APP ಮೂಲಕ ದೂರು ದಾಖಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಅಲ್ಲಿ ಅರ್ಜಿ ತುಂಬಿ ಅಗತ್ಯ ವಿವರಗಳನ್ನು ದಾಖಲಿಸಿದರೆ ದೂರು ದಾಖಲಾದ 24 ಗಂಟೆಯೊಳಗೆ ಕಳೆದುಹೋದ ಮೊಬೈಲ್ ಬ್ಲಾಕ್ ಆಗುತ್ತದೆ. ಆಗ ಮೊಬೈಲ್ ದುರ್ಬಳಕೆಯಾಗುವುದಿಲ್ಲ. ಆಗ ಮೊಬೈಲ್ ಬಳಸಲು ಪ್ರಯತ್ನಿಸಿದಲ್ಲಿ ಅದರ ವಿವರ ಪೊಲೀಸರಿಗೆ ಸಿಗುತ್ತದೆ. ಸುಲಭವಾಗಿ ಇದರಿಂದ ಮೊಬೈಲ್ ಕಳ್ಳತನ ಪತ್ತೆಹಚ್ಚಬಹುದು ಎಂದರು.
