Sunday, December 7, 2025
Sunday, December 7, 2025

ArunYogiraj ಏ.7, ಅಯೋಧ್ಯೆ ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್ ಗೆ ಗೌರವ ಅರ್ಪಣೆ

Date:

ArunYogiraj ಯಕ್ಷಾಬಿಮಾನಿ ವೇದಿಕೆ ವತಿಯಿಂದ ಎ. ೭ರಂದು ಅಯೋಧ್ಯೆಯ ರಾಮ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ ಮತ್ತು ಅಯೋಧ್ಯೆಯ ರಥದ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರಿಗೆ ಗೌರವ ಸನ್ಮಾನ ಹಾಗೂ ಹಳೆಯ ಹಿಂದಿ., ಕನ್ನಡ ಚಿತ್ರಗೀತೆಗಳ ಗಾಯನ ಭಾವಯಾನ ಎಂಬ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಯಕ್ಷಾಭಿಮಾನಿ ಬಳಗದ ಮುಖ್ಯಸ್ಥ ಮತ್ತು ಕಾರ್ಯಕ್ರಮದ ವ್ಯವಸ್ಥಾಪಕ ಶಶಿ ಮಂಗಳಗಾರ್, ಅಂದು ಸಂಜೆ ೪ ಗಂಟೆಗೆ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಯಕ್ಷಗಾನ ಕಲಾವಿದ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರ್‍ಸಸ್ಕೃತ ಎಂ ಕೆ ರಮೇಶ್ ಆಚಾರ್ ಉದ್ಘಾಟಿಸುವರು.
ಈ ಸಂದರ್ಭದಲ್ಲ್ಲಿ ರಾಮ ವಿಗ್ರಹದ ಶಿಲ್ಪಿ ಮತ್ತು ರಥದ ಶಿಲ್ಪಿ ಅರುಣ್ ಯೋಗೀರಾಜ್ ಮತ್ತು ರಾಜಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಇದಾದ ಬಳಿಕ ಹಳೆಯ ಹಿಂದಿ ಮತ್ತು ಕನ್ನಡ ಹಾಡುಗಳನ್ನು ಅವುಗಳ ಭಾವಾರ್ಥ, ವಿವರಣೆಯೊಂದಿಗೆ ಗಾಯನ ಕಾರ್ಯಕ್ರಮ ‘ಭಾವಯಾನ’ ನಡೆಯಲಿದೆ. ಇದರಲ್ಲಿ ರಾಮಚಂದ್ರ ಹಡಪದ್, ಪರಮಪದ ಬೆಂಗಳೂರು, ಸ್ಪರ್ಶ ಆರ್. ಕೆ., ಶರಧಿ ಪಾಟೀಲ್ ಹಾಡುವರು, ನಿರೂಪಣೆಯನ್ನು ರಾಘವೇಂದ್ರ ಕಾಂಚನ್ ನಿರ್ವಹಿಸುವರು, ವಾದ್ಯ ವೃಂದದಲ್ಲ್ಲಿ ದೀಪಕ್ ಜಯಶೀಲನ್, ರಂಜನ್ ಬೇವೂರು, ಶಿವಲಿಂಗ ರಾಜಾಪುರ, ಜಲೀಲ್ ಪಾಶಾ, ಮುನ್ನಾ ಮತ್ತು ಕೃಷ್ಣ ಆನಂದ್ ಸಹಕರಿಸುವರು ಎಂದರು.
ArunYogiraj ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಆದರೆ ಪಾಸ್ ಕಡ್ಡಾಯವಾಗಿದೆ., ಉಚಿತ ಪಾಸುಗಳನ್ನು ಶಶಿ ಮಂಗಳಗಾರ್- 9844466499, ಸಚಿನಬ್- 89043 79665, ಹರೀಶ್- 9008003771, ಸಂಜಯ್- 7411099141 ಇವರನ್ನು ಸಂಪರ್ಕಿಸಿ ಪಡೆಯಬಹದು ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...