K. S. Eshwarappa ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಈಶ್ವರಪ್ಪ ಸಮಾವೇಶ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹಿಂದುತ್ವ ನಾಯಕರನ್ನು ಬಿಜೆಪಿ ಮೂಲೆಗುಂಪು ಮಾಡಲಾಗುತ್ತಿದೆ. ಗೆದ್ದರೆ ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿ ಜಾರಿಗೆ ತರುತ್ತೇನೆ.
ಗೋವು ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕು.
ಹಿಂದೂ, ರಾಮ ಮಂದಿರ, ಗೋವು ಬಗ್ಗೆ ಮಾತಾಡುವವರು ಪಕ್ಷದಲ್ಲಿ ಮೂಲೆಗುಂಪಾಗ್ತಿದ್ದಾರೆ ಎಂದರು.
ಸಿ.ಟಿ ರವಿಯನ್ನು ರಾಜೀನಾಮೆ ಕೊಡಿಸಿದ್ರು,
ಪಕ್ಷ ಸಂಘಟನೆ ಬಗ್ಗೆ ಇಡೀ ದೇಶ ಸುತ್ತಿಸಿದ್ರು ಎಂಪಿ ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ನಮ್ಮ ಹಿಂದು ಕಾರ್ಯಕರ್ತರು ಕೂಲಿಯಾಳುಗಳಲ್ಲ
ಹಿಂದುತ್ವ ಬಗ್ಗೆ ಮಾತಾಡುವವರನ್ನು ಪಕ್ಕಕ್ಕಿಡುತ್ತಿದ್ದಾರೆ.
ಸದಾನಂದ ಗೌಡ, ಯತ್ನಾಳ್, ಪ್ರತಾಪ್ ಸಿಂಹನಿಗೆ ಮೋಸವಾಗುತ್ತಿದೆ. ಕೆಜೆಪಿ ಕಟ್ಟಿದ ಯಡಿಯೂರಪ್ಪ ಗೆ ಸಿಕ್ಕಿದ್ದು 6 ಸೀಟು ಮಾತ್ರ ಆದರೆ ಶಿಕಾರಿಪುರ ದಲ್ಲಿ ಬಿಜೆಪಿ ಅಂತರ 60 ಸಾವಿರದಿಂದ 10 ಕ್ಕೆ ಇಳಿದಿದೆ.
ಈಶ್ವರಪ್ಪ ಯಾವತ್ತಿದ್ರೂ ಬಿಜೆಪಿಯೇ, ಮತ್ತೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ
ಎಂಪಿಯಾಗಿ ಗೆದ್ದು ಮೋದಿಯನ್ನು ಪ್ರಧಾನಿ ಮಾಡಲು ಕೈ ಎತ್ತುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
K. S. Eshwarappa ದುಡ್ಡು ಮತ್ತು ಹಿಂದುತ್ವದ ಕಾರ್ಯಕರ್ತರ ನಡುವಿನ ಚುನಾವಣೆ ಇದಾಗಿದೆ. ಗೀತಾ ಶಿವರಾಜ್ ಕುಮಾರ್ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಸಿದ್ದಾರೆ. ಯಡಿಯೂರಪ್ಪನ ದುಡ್ಡು, ಜಾತಿ ಮೀರಿ ಲೋಕಸಭೆಗೆ ಹೋಗುತ್ತೇನೆ. ಕಾಂಗ್ರೆಸ್ ಜೊತೆ ಬಿಜೆಪಿ ಕೈಜೋಡಿಸಿದ್ದು, ಒಪ್ಪಂದ ಮಾಡಿದ್ದು ದುರ್ದೈವವಾಗಿದೆ.
ಕಾಂಗ್ರೆಸ್ ತರ ರಾಜ್ಯದಲ್ಲಿ ಕುಟುಂಬ ರಾಜಕಾರಣ ಇದೆ
ಬಿಜೆಪಿ 28 ಸ್ಥಾನ ಗೆಲ್ಲೋದು ಮುಖ್ಯ ಅಲ್ಲ. ವಿಜಯೇಂದ್ರ ಸಿಎಂ ಆಗೋದು ಯಡಿಯೂರಪ್ಪ ನಿಗೆ ಮುಖ್ಯವಾಗಿದೆ ಎಂದರು. ರಾಘವೇಂದ್ರ ಸೋಲುತ್ತಾನೆ ವಿಜಯೇಂದ್ರ ರಾಜೀನಾಮೆ ಕೊಡುತ್ತಾನೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎಂದು
ಉಡುಪಿಯ ಬೈಂದೂರಿನಲ್ಲಿ ಕೆ.ಎಸ್ ಈಶ್ವರಪ್ಪ ಗುಡುಗಿದರು.