Saturday, November 23, 2024
Saturday, November 23, 2024

Kanakagiri Jathre ಕನಕಗಿರಿಯಲ್ಲಿ ವೈಭವದ ಕನಕಾಚಲಪತಿ ರಥೋತ್ಸವ

Date:

Kanakagiri Jathre 500 ವರ್ಷಗಳ ಕಾಲ ಒಂದೇ ರಾಜಮನೆತನದಿಂದ ಆಳ್ವಿಕೆಗೊಳಪಟ್ಟ ಮೊದಲ ಪ್ರಾಂತ್ಯ, ಮೌರ್ಯರ ದೊರೆ ಅಶೋಕನ ಕಾಲದಿಂದಲ್ಲೂ ಪ್ರಸಿದ್ಧಿ ಪಡೆದಿದ್ದ ಸ್ಥಳ, ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲಮಿ ತನ್ನ ಕೃತಿಯಲ್ಲಿ ಉಲ್ಲೇಖಿಸಿರುವ ಕನಕಗಿರಿ (ಕಲ್ಲಿಗೇರಿಸ್)ನಲ್ಲಿ ಇಂದು ಕನಕಾಚಲಪತಿಯ ಮಹಾರಥೋತ್ಸವ ಸಹಸ್ರಾರು ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು.

ವಿಜಯನಗರದ ಅರಸರ ಪಾಳೆಯಗಾರ ಗುಜ್ಜಲ ವಂಶಸ್ಥರಿಂದ ಆಳಲ್ಪಟ್ಟ ಕನಕಗಿರಿಯ ಬಗ್ಗೆ ಸ್ಕಂದ ಪುರಾಣದ ತುಂಗಾಮಹಾತ್ಮೆಯಲ್ಲಿ ಸ್ಥಳ ವರ್ಣನೆ, ಕನಕಾಚಲಪತಿಯ ಅಷ್ಟೋತ್ತರವೂ ಇದೆ.

ಪುರಂದರದಾಸರು, ವಿಜಯದಾಸರು, ಜಗನ್ನಾಥದಾಸರು ಕೀರ್ತನೆಗಳನ್ನು ರಚಿಸಿದ್ದಾರೆ.

ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ ಕನಕಗಿರಿಯ ನಾಯಕರಿಗೆ ಆಸ್ಥಾನದಲ್ಲಿ ತಮ್ಮ ಬಲಭಾಗದಲ್ಲಿ ಕನಕಗಿರಿ ನಾಯಕರು ಆಸೀನರಾಗಲು ಅವಕಾಶ ನೀಡಿದ್ದರು.

ಬೇಹುಗಾರಿಕೆ ದಳದ ಮುಖ್ಯಸ್ಥರಾಗಿಯೂ ಕನಕಗಿರಿ ನಾಯಕರು ಕೆಲಸ ಮಾಡಿದ್ದಾರೆ.‌

ಜಯಂತಿ ಸಂಗಮ ಮೂರು ನಾಮದ ದೇವರು ಮೂರು ಅಗಸಿ ಬಾಗಿಲು ಹೊಂದಿದ ಐತಿಹಾಸಿಕ ಪಟ್ಟಣ ಎಂದರೆ ಅದು ಕನಕಗಿರಿ. ಇಲ್ಲಿನ ಲಕ್ಷ್ಮೀ ನರಸಿಂಹ ದೇವಾಲಯವನ್ನು ಕನಕಾಚಲಪತಿ ಕನಕರಾಯ ಎಂತಲೂ ಕರೆಯಲಾಗುತ್ತಿದೆ.

ವಿಜಯನಗರ ಸಾಮ್ರಾಜ್ಯದ ವಾಸ್ತು ಶೈಲಿಯಲ್ಲಿ ನಿರ್ಮಾಣವಾದ ಈ ದೇಗುಲ ಗರ್ಭಗೃಹ ಸುಖನಾಸಿಯನ್ನು ಪರಸಪ್ಪ ನಾಯಕ ನಿರ್ಮಿಸಿದರು. ಈ ದೇವಾಲಯವು ಯಾವುದೇ ಅಧಿಷ್ಠಾನದ ಮೇಲೆ ನಿಂತಿಲ್ಲ ‘ಪ್ರದಕ್ಷಿಣೆ ಪಥ’ ದೇವಾಲಯದ ಹೊರಭಾಗದಲ್ಲಿದೆ.

ಮೂರು ಪ್ರವೇಶ ದ್ವಾರಗಳು : ಮೂರು ಪ್ರವೇಶ ದ್ವಾರದ ಮೇಲೆ ಬೃಹತ್ತಾದ ಒಂದೇ ಎತ್ತರದ ಮೂರು ಮುಖ್ಯ ಗೋಪುರಗಳಿವೆ ಇವು ಹಂಪಿಯ ವಿರೂಪಾಕ್ಷ ದೇವಾಲಯದ ಗೋಪುರಗಳನ್ನು ನೆನಪಿಸುತ್ತವೆ. ಯಾವುದೇ ಗೋಡೆಯ ಆಸರೆ ಇಲ್ಲದೆ ಕನಕಾಚಲಪತಿ ದೇಗುಲದ ರಂಗಮಂಟಪ ನಿರ್ಮಿಸಿರುವುದು ವಿಶೇಷವಾಗಿದೆ.

ತಾಲೂಕು ಕೇಂದ್ರವಾಗಿರುವ ಕನಕಗಿರಿ ಪಟ್ಟಣ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಸುವರ್ಣಗಿರಿ ಅಂತ ಕೂಡ ಕನಕಗಿರಿಯನ್ನು ಕರೆಯುತ್ತಿದ್ದು, ಮೌರ್ಯ ಸಾಮ್ರಾಜ್ಯದ ಸಮಯದಲ್ಲಿಯೇ ಕನಕಗಿರಿ, ಪ್ರಾಂತೀಯ ರಾಜಧಾನಿಯಾಗಿತ್ತಂತೆ. ನಂತರ ವಿಜಯನಗರ ಅರಸರ ಕಾಲದಲ್ಲಿ, ವಿಜಯನಗರ ಪಾಳೆಗಾರರಾಗಿದ್ದ ಗುಜ್ಜಲ ವಂಶದ ರಾಜಧಾನಿಯಾಗಿತ್ತು. ಹೌದು ವಿಜಯನಗರ ಸಾಮ್ರಾಜ್ಯದಲ್ಲಿ ಮಾಂಡಲಿಕರಾಗಿದ್ದ ಗುಜ್ಜಲ ವಂಶ ಕನಕಗಿರಿಯಲ್ಲಿ ನೂರರು ವರ್ಷಗಳ ಕಾಲ ಆಳ್ವಿಕೆ ಮಾಡಿದೆ. 1436 ರಿಂದ ಸ್ವತಂತ್ರ ಸಿಗುವವರಗೂ ಗುಜ್ಜಲ ವಂಶದ ಅನೇಕ ದೊರೆಗಳು ಕನಕಗಿರಿಯನ್ನು ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಅಧಿಕಾರ ನಡೆಸಿದ್ದರು.

ಗುಜ್ಜಲ ವಂಶದ ರಾಜ ಉಡಚಪ್ಪ ನಾಯಕನ ಆಳ್ವಿಕೆಯಲ್ಲಿ ಕನಕಗಿರಿಯಲ್ಲಿ ಅನೇಕ ದೇವಸ್ಥಾನಗಳು, ಕೋಟೆಗಳು ನಿರ್ಮಾಣವಾಗಿದೆ. ತನ್ನ ಅನೇಕ ಕೊಡುಗೆಗಳಿಂದ ಉಡಚಪ್ಪ ನಾಯಕ ಹೆಸರುಗಳಿಸಿದ್ದನು. ಇನ್ನು ನವಾಬ್ ಉಡಚ ನಾಯಕನಿಗೂ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ನಡುವೆ ಅನೋನ್ಯ ಸಂಬಂಧವಿತ್ತಂತೆ. ಹೀಗಾಗಿ ಹಂಪೆಯಲ್ಲಿ ಹೇಗೆ ಅನೇಕ ದೇವಾಲಯಗಳು ನಿರ್ಮಾಣವಾದವೋ ಅದೇ ರೀತಿ, ಕನಕಗಿರಿಯಲ್ಲಿ ಕೂಡಾ ಅನೇಕ ದೇವಾಲಯಗಳ ನಿರ್ಮಾಣ ಮಾಡುವದರ ಜೊತೆಗೆ, ಈ ಭಾಗದಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಕೂಡ ಮಾಡಲಾಯಿತು ಅಂತ ಇತಿಹಾಸಕಾರರು ಹೇಳುತ್ತಾರೆ.

ಕಾಲಿದ್ದವರು ಹಂಪೆ ನೋಡಬೇಕು- ಕಣ್ಣಿದ್ದವರು ಕನಕಗಿರಿ ನೋಡಬೇಕು
ಕಾಲಿದ್ದವರು ಹಂಪೆ ನೋಡಬೇಕು. ಕಣ್ಣಿದ್ದವರು ಕನಕಗಿರಿ ನೋಡಬೇಕು ಅನ್ನೋ ಪ್ರತಿತಿ ಇದೆ. ಇದಕ್ಕೆ ಕಾರಣ, ಕನಕಗಿರಿಯಲ್ಲಿರುವ ಐತಿಹಾಸಿಕ ಸ್ಥಳಗಳು. ಹೌದು ಹಿಂದೆ ಕನಕಗಿರಿಯಲ್ಲಿ ಏಳು ನೂರು ಬಾವಿಗಳು, ಏಳು ನೂರು ಗುಡಿಗಳು, ಏಳು ನೂರು ಗೊಲ್ಲರ ಮನೆಗಳು ಇದ್ದವಂತೆ. ಇದನ್ನು ನೋಡಿಯೇ ಜನರು ಕಣ್ಣಿದ್ದವರು ಕನಕಗಿರಿ ನೋಡಬೇಕು ಅನ್ನೋ ಪ್ರತಿತಿ ಬಂದಿದೆ ಅಂತ ಹೇಳಲಾಗುತ್ತಿದೆ. ಇನ್ನು ಕನಕಗಿರಿ ಪಟ್ಟಣದಲ್ಲಿನ ಕನಕಾಚಲಪತಿ ದೇವಸ್ಥಾನವನ್ನು ಗುಜ್ಜಲ್ ವಂಶಸ್ಥರು ನಿರ್ಮಿಸಿದ್ದಾರೆ. ಈ ದೇವಸ್ಥಾನವು ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿರುವ ದಕ್ಷಿಣ ಭಾರತದ ವಾಸ್ತುಶಿಲ್ಪದ ವಿಶಿಷ್ಟ ಉಧಾಹರಣೆಯಾಗಿದೆ. ಗೋಡೆ ಮತ್ತು ಗೋಪುರುಗಳು ಅನೇಕ ಶಿಲ್ಪಕಲೆಗಳಿಂದ ಅಲಂಕೃತಗೊಂಡಿದ್ದರೆ, ದೇವಸ್ಥಾನದಲ್ಲಿನ ಅನೇಕ ಕೆತ್ತನೆಗಳು ಆಕರ್ಷಕವಾಗಿವೆ.

Kanakagiri Jathre ಇಲ್ಲಿನ ಕನಕಾಚಲಪತಿ ರಥೋತ್ಸವ ಏಪ್ರಿಲ್ ಒಂದರಂದು ನಡೆಯಿತು ಈಗಾಗಲೇ ಕಳೆದ 15 ದಿನಗಳಿಂದ ರಥೋತ್ಸವ ಸುಗಮ ವಾಗಿ ನಡೆಸಲು ಮತ್ತು ಎರಡನೇಯ ತಿರುಪತಿ ಎಂದು ಖ್ಯಾತಿ ಗಳಿಸಿರುವ ಈ ದೇವಸ್ಥಾನದಲ್ಲಿ ತಿರುಪತಿಯಲ್ಲಿರುವಂತೆ ಒಂಭತ್ತು ದಿನಗಳ ಕಾಲ ವಿವಿಧ ಉಚ್ಛಾಯಗಳು ನಡೆಯುತ್ತವೆ. ಕಳೆದ 15 ದಿನಗಳಿಂದ ‘ದೇವಸ್ಥಾನವನ್ನು ಸುಣ್ಣ–ಬಣ್ಣ, ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದಾರೆ. ದೇಗುಲದ ಪ್ರಾಂಗಣ, ಕಲ್ಯಾಣ ಮಂಟಪದ ಸುತ್ತ ಹೂವಿನಿಂದ ಅಲಂಕಾರ ಗೊಳಿಸಲಾಗಿದೆ.
ರಾಜ ಬೀದಿ ಸ್ವಚ್ಛತೆ ಹಾಗೂ ನೀರು ಸಿಂಪಡಣೆ ಮಾಡುವ ಕೆಲಸ ಪ್ರತಿದಿನ ನಡೆಯುತ್ತಿದೆ. ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವಿದ್ಯುತ್, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ದೇಗುಲ ಹಾಗೂ ತೇರನ್ನು ಸಿಂಗರಿಸಲಾಗಿತ್ತು.

ತೇರಿನ ಗಡ್ಡಿಗೆ ಬಣ್ಣಹಚ್ಚಲಾಗಿದೆ ಗಡ್ಡಿಯ ಮೇಲೆ ಐದು ಪ್ರಕಾರದ ಚಟ್ಟಗಳನ್ನು ಕಟ್ಟಲಾಗಿತ್ತು. ಅದಕ್ಕೆ ವಿವಿಧ ನಮೂನೆಯ ಪರದೆಗಳನ್ನು ಹಾಕಲಾಗಿತ್ತು. ತೆರಿಗೆ ವಿವಿಧ ಅಲಂಕಾರಗಳನ್ನು ಮಾಡುವುದರ ಮೂಲಕ ಗೊಂಬೆಗಳನ್ನು ಕೂಡಿಸಿ ಹೂವಿನಿಂದ ಅಲಂಕಾರ ಮಾಡಿ ಇಂದು ವಿಜೃಂಭಣೆಯಿಂದ ರಥೋತ್ಸವವನ್ನು ಸಕಲ ಭಕ್ತ ಸಮೂಹದ ನಡುವೆ ಆಚರಣೆ ಮಾಡಲಾಯಿತು. ಇನ್ನು 9 ದಿನಗಳ ಕಾಲ ಈ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಮುಂದುವರಿಯುತ್ತದೆ ಸುತ್ತಮುತ್ತಲಿನ ಹಳ್ಳಿಗಳ ಜನ ಹಾಗೂ ಕೊಪ್ಪಳ ಹೊಸಪೇಟೆ, ಗಂಗಾವತಿ ಮತ್ತು ಕುಷ್ಟಗಿದ್ದ ಅನೇಕ ಭಕ್ತ ಸಮೂಹ ಕನಕಚಲಪತಿಯ ದರ್ಶನವನ್ನು ಮಾಡಲು ಮತ್ತು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲು ಬರುತ್ತಾ ಇರುತ್ತಾರೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಿಯಿಂದ ಹೆಚ್ಚು ಹೆಚ್ಚು ನೀರಿನ ಟ್ಯಾಂಕರ್ ಗಳನ್ನು ಮತ್ತು ಊರಿನ ಒಳಭಾಗದಲ್ಲಿ ಸ್ವಚ್ಛತೆಗಾಗಿ ವ್ಯವಸ್ಥೆ ಮಾಡಲಾಗಿದೆ ಬರುವ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆಯೂ ಸಹ ಆಯೋಜಿಸಲಾಗಿದೆಲೋಕಸಭಾ ಚುನಾವಣೆ ಇರುವುದರಿಂದ ರಾಜಕೀಯ ವ್ಯಕ್ತಿಗಳಿಗೆ ಈ ವರ್ಷ ಕಡಿವಾಣ ಹಾಕಲಾಗಿದೆ ಆದರೂ ಸ್ವಕ್ಷೇತ್ರವಾದ ಶ್ರೀ ಶಿವರಾಜ್ ತಂಗಡಿ ಅವರ ಐತಿಹಾಸಿಕ ಸ್ಥಳದಲ್ಲಿ ಅನೇಕ ವರ್ಷಗಳಿಂದ ಕನಕಗಿರಿ ಉತ್ಸವನ್ನು ಮತ್ತು ಪುರಾತನ ಕಾಲದಿಂದಲೂ ಮಹಾ ರತೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರೇ ಇರುವದರಿಂದ, ಸ್ವಕ್ಷೇತ್ರದಲ್ಲಿ ನಡೆಯುತ್ತಿರುವ ರಥೋತ್ಸವನ್ನು ಅದ್ದೂರಿಯಾಗಿ ಆಯೋಜಿಸಿದ್ದಾರೆ.

ವಿ.ವರದಿ kanakaಮುರುಳಿಧರ ನಾಡಿಗೇರ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...