Thursday, September 17, 2026
Thursday, September 17, 2026

Robbery News ಶಿವಮೊಗ್ಗ ಕಂಟ್ರಿ ಕ್ಲಬ್ ರಸ್ತೆಯಲ್ಲಿ ಚಾಕು ತೋರಿಸಿ₹20.000 ದರೋಡೆ

Date:

Robbery News ಪೆಟ್ರೋಲ್‌ ಬಂಕ್‌ಗೆ ಡ್ರಾಪ್‌ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ದರೋಡೆ ಮಾಡಿದ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ . ಕಂಪನಿಯೊಂದರಲ್ಲಿ ಕಲೆಕ್ಷನ್‌ ಎಕ್ಸಿಕ್ಯೂಟಿವ್‌ ಆಗಿರುವ ವ್ಯಕ್ತಿಯೊಬ್ಬರು ಆ ದಿನದ 20 ಸಾವಿರ ರೂಪಾಯಿ ಕಲೆಕ್ಷನ್‌ ಹಣವನ್ನು ಸಂಗ್ರಹಿಸಿ ಮರುದಿನ ಮತ್ತೊಂದು ಕಡೆಗೆ ಕಲೆಕ್ಷನ್‌ಗಾಗಿ ಶಿಕಾರಿಪುರಕ್ಕೆ ಹೊರಟಿದ್ದರು. 28 ನೇ ತಾರೀಖು ಬೆಳಗಿನ ಜಾವ 4.30 ಗಂಟೆಗೆ ಹೊರಟು ವಿದ್ಯಾನಗರದ ಕಡೆಯಿಂದ ಹೊಳೆ ಬಸ್ಟಾಪ್ ಹತ್ತಿರ ಬರುತ್ತಿರುವಾಗ ಬೈಕಿನಲ್ಲಿ, ಪೆಟ್ರೋಲ್ ಖಾಲಿಯಾಗಿದೆ. ಆದರೆ ಅಲ್ಲಿಯೇ ಇರುವ ಪೆಟ್ರೋಲ್‌ ಬಂಕ್‌ ಇನ್ನೂ ಓಪನ್‌ ಆಗಿರಲಿಲ್ಲ. ಹೀಗಾಗಿ ಬೈಕ್‌ ನಿಲ್ಲಿಸಿ ಪೆಟ್ರೋಲ್‌ ತರಲು ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಯುವಕನೊಬ್ಬ ಎಲ್ಲಿಗೆ ಹೋಗುತ್ತಿದ್ದೀರಾ ಅಂತಾ ಪ್ರಶ್ನಿಸಿದ್ದಾನೆ.
ಯುವಕನ ಪ್ರಶ್ನೆಗೆ ಪೆಟ್ರೋಲ್‌ ತರಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆಗ ಯುವಕ ಸೂಳೆಬೈಲ್‌ನಲ್ಲಿ ಪೆಟ್ರೋಲ್‌ ಬಂಕ್‌ ತೆಗೆದಿರುತ್ತದೆ. ಬನ್ನಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ. ಆತನ ಮಾತನ್ನು ನಂಬಿದ ಕಲೆಕ್ಷನ್‌ ಎಕ್ಸಿಕ್ಯೂಟಿವ್‌, ಅವರ ಬೈಕ್‌ನಲ್ಲಿ ವಿದ್ಯಾನಗರದ ಕಂಟ್ರಿಕ್ಲಬ್ ಕಡೆಗೆ ಹೋಗುವ ರಸ್ತೆಯಲ್ಲಿ ಸಾಗಿದ್ದಾರೆ.
Robbery News ಅಷ್ಟೊತ್ತಿಗೆ ಅಲ್ಲಿ ಇನ್ನೂ ಮೂವರು ಅಪರಿಚಿತ ಯುವಕರು ಅಲ್ಲಿಗೆ ಬಂದು ಚಾಕು ತೋರಿಸಿ ಹೆದರಿಸಲು ಆರಂಭಿಸಿದ್ದಾರೆ. ಅಲ್ಲದೆ ಮಾಡಿ ಕಲೆಕ್ಷನ್‌ ಹಣ 20 ಸಾವಿರ ಹಾಗೂ ಮೊಬೈಲ್‌ ಫೋನ್‌ ಕಸಿದುಕೊಂಡು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್‌ ಠಾಷೆಯಲ್ಲಿ ಕೇಸ್‌ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...