Lok Sabha Election ಬೆಳಗಾವಿ:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೆಳಗಾವಿ ಸಂಸದರ ಗಾದಿ ಏರುತ್ತಾರ? ಎಂಬ ಪ್ರಶ್ನೆ ಕುತೂಹಲದ ಹಂತದಲ್ಲೇ ಇದೆ.
ಬೆಳಗಾವಿ ತವರಿನ ಹಲವು ಟಿಕೆಟ್ ಆಕಾಂಕ್ಷಿ ನಾಯಕರ ಅತೃಪ್ತಿಯ ಹೊಗೆಯ ನಡುವೆ ಶೆಟ್ಟರ್ ಪ್ರವೇಶವಾಗಿದೆ.
ಬೆಳಗಾವಿ ಬಿಜೆಪಿಗೆ ಮುಖ್ಯ ಆಧಾರಸ್ಥಂಭಗಳೆಂದರೆ ತಕ್ಷಣ ಡಾ.ಕೋರೆ ಮತ್ತು ಜಾರಕಿಹೊಳಿ ನೆನಪಿಗೆ ಬರುತ್ತಾರೆ.
ಮಿಕ್ಕವರು ಅಮುಖ್ಯರೆಂದಲ್ಲ ಗಾಳಿ ಬಂದಂತೆ ತೂರಿಕೊಳ್ಳುವ ಮನೀಷೆಯ ಮಂದಿಯೂ ಕೆಲವರಿದ್ದಾರೆ.
ಇದು ಎಲ್ಲೆಡೆಯ ಸಾಮಾನ್ಯ ಸಂಗತಿ.
ಈಗ ಕಾಂಗ್ರೆಸ್ ಕೂಡ ಚುರುಕಾಗಿ ಕೆಲಸಮಾಡಬೇಕಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯವರ ಪುತ್ರ ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ ಗೆ ಟಿಕೆಟ್ ನೀಡಿಯಾಗಿದೆ.

ಈಗ ಮೇಲ್ನೋಟಕ್ಕೆ
ಜಗದೀಶ್ ಶೆಟ್ಟರ್ ಎದುರಾಳಿಗೆ ವೈಟೇಜ್ ಹೇಗೆ ಕೊಡುವುದು? ಎಂಬ ಪ್ರಶ್ನೆ ಕಾಡುತ್ತದೆ.
ಬೆಳಗಾವಿ ಲೋಕಸಭಾ ಚುನಾವಣೆ.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ರವೀಂದ್ರ ಹೆಬ್ವಾಳ್ಕರ್
ಬೆಳಗಾವಿಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ವಕೀಲ ಮೋಹನ್ ಕಾತರಕಿ, ಡಾ ಗಿರೀಶ್ ಸೋನವಾಲ್ಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಮತ್ತು ಯುವ ಕಾಂಗ್ರೆಸ್ ಮುಖಂಡ ಕಿರಣ ಸಾಧುನವರ್ ಸೇರಿದ್ದಾರೆ. ಚಿಕ್ಕೋಡಿಯಿಂದ ಲಕ್ಷ್ಮಣರಾವ್ ಚಿಂಗಳೆ ಮತ್ತು ಪ್ರಕಾಶ ಹುಕ್ಕೇರಿ ಪ್ರಬಲ ಆಕಾಂಕ್ಷಿಗಳಾಗಿದ್ದರು.
ಇವರೆಲ್ಲರ ಪೈಪೋಟಿಯ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೆ ಟಿಕೆಟ್ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವ ಕಾಂಗ್ರೆಸ್ ನಾಯಕ ಎಂದು ಚಾಲ್ತಿಯಲ್ಲಿರುವ ಮೃಣಾಲ್ ಯುವಜನರ ಪ್ರತಿನಿಧಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಜನ ಯಾವ ಹಿನ್ನೆಲೆಯಲ್ಲಿ ತಮ್ಮ ಮತ ಚಲಾಯಿಸುತ್ತಾರೆ ಎಂಬುದು ನಿಗೂಢವಾಗಿದೆ.
ರಾಜಕೀಯದಲ್ಲಿ ಶೆಟ್ಟರ್ ಹಳೇಹುಲಿ.
ಆದರೆ ಆಖಾಡಕ್ಕೆ ಹೊಸಬರು. ಜಾತಿ ಲೆಕ್ಕಾಚಾರ ಬಂದರೆ ಈರ್ವರೂ ಒಂದೇ ಬ್ಯಾಂಡ್ ನಲ್ಲಿದ್ದಾರೆ.
ಸಾಧನೆಗಳ ಪಟ್ಟಿ ಇಬ್ಬರದೂ ಬೆಳಗಾವಿ ಅಭಿವೃದ್ದಿಯಲ್ಲಿ ಪಾತ್ರ ಢಾಳಾಗಿ ಕಾಣದು.
ಮೃಣಾಲ್ ಅವರು ಕಾಂಗ್ರೆಸ್ ಗ್ಯಾರಂಟಿ, ತಾಯಿಯವರ ಸಚಿವಸ್ಥಾನದ ಸೇವೆ ಇವುಗಳ ಹಿನ್ನೆಲೆಯಲ್ಲಿ ವಿಶ್ವಾಸವಿರಿಸಿಕೊಂಡಿದ್ದಾರೆ.
Lok Sabha Election ಜಗದೀಶ್ ಶೆಟ್ಟರ್ ಅವರ ಗೆಲುವಿಗೆ
ಇಲ್ಲಿ ರಮೇಶ್ ಜಾರಕಿಹೊಳಿ ,ಪ್ರಭಾಕರ್ ಕೋರೆ ಅವರ ಪುಶ್ ಹೇಗಿದೆ ಎಂದು
ನೋಡಬೇಕಿದೆ.