ಲೇ: ಸಿ.ಕೆ.ಅಕ್ಷತಾ
KLive Special Article ಹಳ್ಳಿಗಳ ವಿಕಾಸ ಯೋಜನೆಯ ಅಡಿಯಲ್ಲಿ ಶುರುವಾದಂತ ಅನೇಕ ಕಾಮಗಾರಿಕೆಗಳು ನಮ್ಮ ಪರಿಸರ ನಾಶಕ್ಕೆ ಕಾರಣವಾಗಿವೆ, ಹೌದಾ ಅದ್ ಹೇಗೆ..?? ಅಂತ ನೀವು ಕೇಳೋದ್ ಆದ್ರೆ,
ಹೌದು ಒಂದು ಕಾಲದಲ್ಲಿ ದಾರಿಯುದ್ಧಕ್ಕೂ ಅನೇಕ ರೀತಿಯ ಮರಗಳ ರಾಶಿ ಹೊಂದಿದ್ದ ನಮ್ಮದೆ ಹಳ್ಳಿಗಳು ಈಗ ಅಲ್ಲಿದ್ದ ಮರಗಳ ಗುರುತು ಕೂಡ ಕಾಣದಷ್ಟು ಬರಡಾಗಿ ಕೇವಲ ಕಣ್ಣು ಹಾಯಿಸಿದಷ್ಟು ದೂರ ಟಾರು ರೋಡು ಕಾಣುವಂತಾಗಿದೆ.

ತಲೆ ಎತ್ತಿ ನೋಡಿದರು ಸೂರ್ಯನ ಕಿರಣ ಕಾಣ ಸಿಗದಷ್ಟು ಎತ್ತರದ ಮರ ಗಿಡಗಳು ಕಾಣೆಯಾಗಿ ಎತ್ತ ನೋಡಿದರತ್ತ ಎತ್ತರದ ಮಹಡಿ ಮನೆಗಳು ಮತ್ತು ಮಳಿಗಿಗೆಗಳು ಕಣ್ಣು ಕುಕ್ಕುವಂತಾಗಿವೆ.
ಎಷ್ಟೋ ವರ್ಷಗಳಿಂದ ನಮ್ಮ ಪೂರ್ವಜರು ಸಿಹಿ ನೀರು ಅಂತ ಕುಡಿತ ಇದ್ದಂತ ನೀರಿನ ಬಾವಿಗಳನ್ನ ಮುಚ್ಚಿ ಹಾಕಿ ಅದರ ಮೇಲೆ ತಮ್ಮ ಸಾಮ್ರಾಜ್ಯವನ್ನ ಸೃಷ್ಟಿಸಿಕೊಳ್ತಾ ಇದಾನೆ ಮನವ, ಇಡಿ ಊರಿಗೆ ನೀರ್ ಕೊಟ್ಟು ದನ ಕರುಗಳಿಗೆ ಬಾಯಾರಿಕೆ ನಿಗ್ಸಿ ನಮ್ಮ ಗದ್ದೆಗಳಿಗೂ ನೀರನ್ನ ಒದಗಿಸ್ತಾ ಇದ್ದಂತ ಎಷ್ಟೋ ಹಳ್ಳಿಗಳ ಕೆರೆಗಳನ್ನ ಮುಚ್ಚಿ ಹಾಕಿ ಸಮತಟ್ಟಾದ ನೆಲವನ್ನಾಗಿ ಮಾಡಿ ಅಲ್ಲಿ ಕೂಡ ತಮಗೆ ಅನುಕೂಲವಾಗುವಂತೆ ಪರಿಸರವನ್ನ ನಾಶ ಮಾಡ್ತಾ ಇರೋ ನಾವುಗಳು ಈಗ ಅಂತರ್ಜಲ ಮಟ್ಟ ಕುಸಿತ ಇದೆ ಅಂತ ಟಿವಿ ಕಾರ್ಯಕ್ರಮಗಳಲ್ಲಿ ಕೂತು ಬೊಬ್ಬೆ ಹಾಕ್ತಾ ಇದೀವಿ.
KLive Special Article ಈ ಪರಿಸರ ನಾಶದ ಕುರಿತು ಹೇಳೋಕೆ ನಾನು ತುಂಬಾ ದೂರಾ ಹೋಗಲ್ಲ ನನ್ನ ಹುಟ್ಟುರನ್ನೇ ಉದಾಹರಣೆಯಾಗಿ ಕೊಡ್ತೀನಿ ನಮ್ಮದು ಕೂಡ ಒಂದು ಚಿಕ್ಕ ಹಳ್ಳಿ ನಮ್ ಅಜಂದಿರ ಕಾಲದಲ್ಲಿ ದಾರಿಯುದ್ಧಕ್ಕೂ ಮಾವಿನ ಹಣ್ಣಿನ ಮರಗಳು ಇದ್ವು ದನ ಕಾದು ವಿಶ್ರಾಂತಿಗೆ ಆ ಮರಗಳ ಕೆಳಗೆ ಕುರ್ತಾ ಇದ್ವಿ ಮನೆಗೆ ಬರಬೇಕಾದ್ರೆ ಮಾವಿನ ಹಣ್ಣುಗಳ ಸುಗ್ಗಿಯಲ್ಲಿ ಮಾವಿನ ಹಣ್ಣನ್ನ ರಾಶಿ ರಾಶಿ ತರ್ತಾ ಇದ್ವಿ ಅಂತ ನಮ್ಮ ಮನೆ ಹಿರಿಯರು ಹೇಳೋರು ನಾನು ಕೂಡ ಆಷ್ಟೊಂದ್ ಮರಗಳನ್ನ ನೋಡ್ದೆ ಇದ್ರು ಅಲ್ಪ ಸ್ವಲ್ಪ ಮರಗಳನ್ನ ನೋಡಿದ್ದೇ ಆದ್ರೆ ನಾನು ಪಿ ಯು ಸಿ ಗೆ ಬರೋ ಹೊತ್ತಿಗೆ ಆ ಮರಗಳನ್ನ ಎಲ್ಲಾ ಕಡೆದು ತೆಗದು ರಾಷ್ಟ್ರೀಯ ಹೆದ್ದಾರಿಯನ್ನ ಮಾಡಿದ್ರು ಈಗ ದಾರಿಯುದ್ದಕ್ಕೂ ನೆರಳು ಕೊಡೊ ಮರಗಳು ಮರೆಯಾಗಿ ಕೇವಲ ಹೋದಷ್ಟು ದೂರಾ ” ಮುಂದೆ ಅಪಾಯ ಇದೆ ನಿಧಾನವಾಗಿ ಚಲಿಸಿ ಅನ್ನೋ ಸೂಚನಾ ಫಲಖಗಳಿವೆ ಅಷ್ಟೇ “

ಈ ಮರುಭೂಮಿಕರಣ, ಜಾಗತಿಕರಣ, ರಸ್ತೆ ಅಗಲಿಕೆ, ಗಣಿಗಾರಿಕೆ ಇವೆಲ್ಲ ಮಾಡೋಕೆ ನಾವು ನಮ್ಮ ಸುಂದರ ಕಾಡುಗಳನ್ನ ನಾಶ ಮಾಡ್ತಾ ಇದೀವಿ ಈ ನಾಶ ನಮ್ನ ಯಾವ ವಿನಾಶಕ್ಕೆ ಒಯ್ಯುತ್ತೆ ಅನ್ನೋ ಅರಿವು ಕೂಡ ಯಾರಿಗೂ ಇಲ್ಲ, ಒಬ್ಬಳು ತಾಯಿ ತನಗೆ ಮಕ್ಕಳು ಇಲ್ಲ ಅನ್ನೋ ಕಾರಣಕ್ಕೆ ಗಂಡನ ಜೊತೆ ಸೇರಿ ರಸ್ತೆಯ ಬದಿಯಲ್ಲಿ ಸಾಲು ಮರಗಳನ್ನ ಹಚ್ಚಿ ಮಕ್ಕಳಂತೆ ಸಲುಹಿ ಬೆಳೆಸಿ ಸಾಲುಮರದ ತಿಮ್ಮಕ್ಕಳಾಗಿ ಎಲ್ಲರ ಮನೆ ಮನಗಳಲ್ಲಿ ಉಳ್ದಿರೋ ಇವರೂಗಳ ನಡುವೆ ಹಸಿರಿನ ಪ್ರಾಣಹರಣ ಮಾಡಿ ಕಾಡು ಪ್ರಾಣಿಗಳನ್ನ ನಾಡಿಗೆ ಬರೋ ಹಾಗೆ ಮಾಡ್ತಾ ಇರೋ ಜನಗಳು ಇದಾರೆ ಅನ್ನೋದೇ ವಿಪರ್ಯಾಸ, ನಾವು ಮನುಷ್ಯರು ಬದುಕಲ್ಲಿ ನಡೆದು ಬಂದ ಹಾದಿಯನ್ನ ಮರಿತಿವಿ ಆದ್ರೆ ಕಾಡು ಪ್ರಾಣಿಗಳು ಹಾಗಲ್ಲ ತಮ್ಮ ಆಹಾರಕ್ಕಾಗಿ ಮತ್ತೆ ತಮ್ಮ ನೆಲೆಯನ್ನ ಹುಡುಕಿಕೊಂಡು ಮೊದ್ಲಿನ ಜಗಕ್ಕೆ ಬಂದ್ ಬಿಡ್ತಾವೇ ಅಂತ ಪ್ರಾಣಿಗಳನ್ನ ಹಿಡ್ದು ಬೋನಿಗೆ ಹಾಕಿ ನಾವೆಲ್ಲ ಖುಷಿ ಪಡ್ತೀವಿ ಛೀ ಎಂತ ಬದುಕು ಇದು.
ಗಿಡಾ ಮರಗಳನ್ನು ಬೆಳೆಸಿ ಶುದ್ಧವಾದ ಗಾಳಿ ಕುಡಿಬೇಕಿದ್ದ ನಾವು ಈಗ ಕರೋನದಂತ ಮಹಾಮಾರಿ ಬಂದಾಗ ಉಸಿರಾಡೋಕು ಕಷ್ಟ ಆಗಿ ಆಕ್ಸಿಜೆನ್ ಸಿಲೆಂಡರ್ ಗಳನ್ನ ಕೊಂಡ್ಕೊಂಡು ಉಸಿರಾಡಿದೀವಿ ಇದೆಲ್ಲ ನಮ್ಮ ಪರಿಸರ ನಾಶದ ಪರಿಣಾಮಾನೆ ಅಲ್ವ, ಹಳ್ಳಿಗಳನ್ನ ಉದ್ಧಾರ ಮಾಡೋ ಹೆಸರಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳನ್ನ ನಿರ್ಮಿಸಿ ಎಷ್ಟೋ ಕೆಮಿಕಾಲ್ಸ್ ಗಳನ್ನ ಊರಾಚೆಗಿನ ಕೆರೆಗಳಿಗೆ ಬಿಡೋದ್ರಿಂದ ತುಂಬಾನೇ ವಿಷಕಾರಿಯಾದ ರಾಸಾಯನಿಕಗಳಿಂದ ಕೆರೆಯಲ್ಲಿ ಇದ್ದಂತ ನೀರಿನ ಸಸ್ಯಾಗಳು ಸತ್ತು ಹೋಗಿ ಮತ್ತೆ ಪರಿಸರ ಅಸಮತೋಲನ ಶುರುವಾಗುತ್ತೆ, ಅಭಿರುದ್ದಿ, ನವಿಕರಣ ಅನ್ನೋ ಹೆಸರಲ್ಲಿ ನಡೀತಾ ಇರೋ ಈ ಪರಿಸರದ ಮಾರಣಹೋಮದಿಂದ ಮಳೆ ಸರಿಯಾಗಿ ಆಗ್ತಾ ಇಲ್ಲ, ಮಣ್ಣು ತನ್ನ ಫಲವತ್ತತೆ ಕಳ್ಕೋತ ಇದೆ, ವಾತಾವರಣ ಶುದ್ಧ ಗಾಳಿಯ ಹೊರತಾಗಿ ವಾಹನಗಳ ಕೆಟ್ಟ ಹೊಗೆಯಿಂದ ತುಂಬಿಕೊಂಡು ಬಿಟ್ಟಿದೆ, ಈ ರಸ್ತೆ ಅಗಲೀಕರಣದಿಂದಾಗಿ ಸಾವುಗಳ ಸಂಖ್ಯೆ ಹೆಚ್ಚುತ್ತ ಇದೆ ಹಚ್ಚ ಹಸುರಿನ ಬಿಡು ಈಗ ಕಾಂಕ್ರಿಟ್ ಕಾಡಗಿದೆ ಇದಕ್ಕೆಲ್ಲ ಕಾರಣ ನಮ್ಮದೆ ಮಿತಿಮೀರಿದ ಬುದ್ದಿವಂತಿಕೆ ಅಂದ್ರೆ ತಪ್ಪಾಗಲ್ಲ.
ಸಾಕು ವಿಕಾಸದ ಹೆಸರಲ್ಲಿ ನಾವ್ ಮಾಡಿರೋ ಪರಿಸರ ನಾಶ ಇನ್ಮೇಲೆ ಆದ್ರೂ ಮರ ಗಿಡಳನ್ನ ಬೆಳ್ಸಿ ನಮ್ಮ ಮುಂದಿನ ಪೀಳಿಗೆಗೂ ಶುದ್ಧ ಗಾಳಿ ನೀರು ಕೊಡೋಣ, ಪ್ರಕೃತಿ ಮಾತೆಯ ಹಸಿರನ ಉಡುಗೆಯನ್ನ ನಾವು ಕಿತ್ತೆಸೆದಷ್ಟು ಪ್ರಕೃತಿ ವಿಖಾರ ರೂಪ ತಾಳ್ತಾಳೆ ನಮ್ಮ ಈ ಕೆಟ್ಟ ತನವನ್ನ ಸದೆಬಡಿಯೋಕೆ ಉಗ್ರ ರೂಪವನ್ನ ತಾಳಿ ನಮ್ಮನೆಲ್ಲ ಸರ್ವನಾಶ ಮಾಡಿ ಬಿಡ್ತಾಳೆ. ಮನೆ ಅಕ್ಕ ಪಕ್ಕದ ಗಿಡ ಮರಗಳನ್ನ ಕಡಿದು ಸಂಜೆ ವಿಶ್ರಾಂತಿಗೆ ಅಂತ ದುಡ್ಡು ಕೊಟ್ಟು ಕೃತಕ ಉದ್ಯಾನಗಳಿಗೆ ಹೋಗೋ ಕೆಟ್ಟ ಅಭ್ಯಾಸವನ್ನ ಮರ್ತು
” ದಿನಕೊಂದು ಗಿಡ ಮನೆಗೊಂದು ನೀ ನೆಡ “
ಅಂತ ನಿಮ್ಮ ಮನಸ್ಸನ್ನ ನೀವೇ ಉತ್ತೇಜನಗೊಳಿಸ್ತಾ ನಮ್ಮ ಹಳ್ಳಿಗಳ ಶುದ್ಧ ಪರಿಸರವನ್ನ ಮತ್ತೆ ವಾಪಸು ತರೋ ಪ್ರಯತ್ನ ಮಾಡೋಣ
” ಅಭಿವೃದ್ಧಿಯ ಹೆಸರಲ್ಲಿ ಆಗದಿರಲಿ ಪರಿಸರ ನಾಶ
ಹಸಿರೇ ನಮ್ಮೆಲ್ಲ ಉಸಿರೆಂದು ಕೂಗಿ ಹೇಳಿದೊಡೆ ಸುರಿಸ್ಯಾನು ಮಳೆಯ ಆ ಆಕಾಶ…
ಬರಹ : ಅಕ್ಷತಾ.ಸಿ.ಕೆ, ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ, ಶ್ರೀ ಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ