Chandrakanth Y B ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಭಕ್ತರಾದ ಕೆ.ಎಸ್.ಈಶ್ವರಪ್ಪ ಅವರನ್ನು ಆಣೆ ಪ್ರಮಾಣ ಮಾಡಲು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರು ಆಹ್ವಾನಿಸಿರುವುದು ನೋಡಿದರೆ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೂ ದೇವರ ಮೇಲೆ ನಿಜವಾದ ನಂಬಿಕೆ ಮತ್ತು ಭಯ ಎನ್ನುವುದು ಇದೆಯೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾoತ್ ಅವರು ಪ್ರಶ್ನಿಸಿದ್ದಾರೆ.
ದೇವರ ಮೇಲೆ ಭಯ ಮತ್ತು ಭಕ್ತಿ ಇರುವವರು ಪ್ರಜೆಗಳ ಬೆವರಿನ ಹಣವನ್ನು ವಿಷವೆಂದು ಭಾವಿಸುತ್ತಾರೆ. ಇಂತಹ ಪ್ರಜೆಗಳ ಹಣವನ್ನು ಅನ್ಯ ಮಾರ್ಗದಲ್ಲಿ ಮಾಡಿದರೆ ದೇವರು ಶಿಕ್ಷಿಸದೆ ಬಿಡುವುದಿಲ್ಲ ಎನ್ನುವ ಭಯ ಹೊಂದಿರುತ್ತಾರೆ. ಇಂತದರಲ್ಲಿ ಸಾವಿರಾರು ಕೋಟಿಯ ಸ್ವತ್ತುಗಳನ್ನು ರಾಜ್ಯದ ಉದ್ದಕ್ಕೂ ಗಳಿಸಲು ಯಡಿಯೂರಪ್ಪ ಕುಟುಂಬಕ್ಕೆ ಹೇಗೆ ಸಾಧ್ಯವಾಯಿತು. ದೇವರ ಮೇಲೆ ನಿಜವಾದ ಭಯ ಇರುವರಾಗಿದ್ದರೆ ಸಂಸದ ಬಿ.ವೈ.ರಾಘವೇಂದ್ರ ಅವರು ಮೊದಲು ಈ ಪ್ರಶ್ನೆಗೆ ಉತ್ತರಿಸಬೇಕು ಎಂದು ವೈ.ಬಿ.ಚಂದ್ರಕಾoತ್ ಅವರು ಎದುರೇಟು ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಪ್ರಾಮಾಣಿಕ ಮತ್ತು ರಾಜಕಾರಣಿಗಳನ್ನು ಹೊಂದಿದ್ದ ನಾಡು ಎನ್ನುವುದು ಸುಳ್ಳಾಗಿದ್ದರೆ, ಜಿಲ್ಲೆಯಲ್ಲಿ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೇಸ್ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರಾಗಿದ್ದವರಲ್ಲಿ ಯಾರಾದರು ಒಬ್ಬರು ಭ್ರಷ್ಠರಾಗಿದ್ದವರು ಇದ್ದರೆ ಬಿ.ಎಸ್.ಯಡಿಯೂರಪ್ಪ ಕುಟುಂಬ ಮತ್ತು ಕೆ.ಎಸ್. ಈಶ್ವರಪ್ಪ ಅವರು ಸಾಬೀತು ಮಾಡುವ ಎದೆಗಾರಿಕೆ ತೋರಿಸಲಿ ಎಂದು ವಕ್ತಾರರಾದ ವೈ.ಬಿ.ಚಂದ್ರಕಾoತ್ ಅವರು ಸವಾಲು ಹಾಕಿದ್ದಾರೆ.
Chandrakanth Y B ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಅವರು ಗೆಲ್ಲುವುದು ಖಚಿತವೆಂಬ ಸುಳಿವು ದೊರಕಿರುವುದರಿಂದ ಕ್ಷೇತ್ರದ ಮತದಾರರ ದಾರಿತಪ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಸರ್ಕಾರಗಳಿಂದ ಏನೂ ಆಗಿಲ್ಲ, ತಮ್ಮಿಂದಲೆ ಎಲ್ಲಾ ಅಭಿವೃದ್ದಿ ಕಾರ್ಯಗಳು ನಡೆದಿರುವುದು ಎಂದು ಹೇಳಿಕೊಳ್ಳುವ ಬಿ.ಎಸ್.ಯಡಿಯೂರಪ್ಪ ಕುಟುಂಬ ಮತ್ತು ಕೆ.ಎಸ್.ಈಶ್ವರಪ್ಪ ಅವರು ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯಗಳು ಆಗುವ ಮೊದಲು ತಾವು ನಿಜವಾಗಿ ಹೊಂದಿದ್ದ ಸ್ವತ್ತಿನ ಬಗ್ಗೆಯೂ ಒಂದಿಷ್ಟು ಸತ್ಯವನ್ನು ಹೇಳಬೇಕೆಂದು ವಕ್ತಾರರಾದ ವೈ.ಬಿ.ಚಂದ್ರಕಾoತ್ ಅವರು ಆಗ್ರಹಿಸಿದ್ದಾರೆ.