Sunday, August 2, 2026
Sunday, August 2, 2026

Election Masala ಕೋಟ್ಯಾಧಿಪತಿಗಳು ಚುನಾವಣಾ ಕಣದಲ್ಲಿ

Date:

Election Masala ಚುನಾವಣೆ ಕಾವೇರಿದಂತೆ ಅಭ್ಯರ್ಥಿಗಳ ಜಾತಕದಲ್ಲಿನ ಆಸ್ತಿ ಮಾಹಿತಿ ಹೊರ ಬೀಳುತ್ತದೆ.
ಇದೀಗ ಕೆಲವರ ಆಸ್ತಿ ವಿವರ ಮಾಧ್ಯಮಗಳಲ್ಲಿ ಕಣ್ಣು ಕುಕ್ಕುವಂತಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ
ಕಾಂಗ್ರೆಸ್ ಅಭ್ಯರ್ಥಿ‌ ಮತ್ತು ಹಾಲಿ ಸಂಸದರಾಗಿರುವ ಡಿ.ಕೆ.ಸುರೇಶ್ ಅವರು ಘೋ಼ಷಿಸಿರುವಂತೆ ಅವರ ಆಸ್ತಿ
ಒಟ್ಟ ₹593 ಕೋಟಿ.
ಇಷ್ಡಿದ್ದರೂ ಸ್ವಂತ ಕಾರಿಲ್ಲವಂತೆ.ಇನ್ನೂ ಕುತೂಹಲವೆಂದರೆ ಅವರ ಕುಡುಂಬದವರಿಗೇ
₹44 ಕೋಟಿ ಸಾಲ ನೀಡಿದ್ದಾರೆ.
ಅವರ ಆಸ್ತಿ ಸಂಸದತನ ಅವಧಿಯಲ್ಲ
₹254 ಕೋಟಿ ಹೆಚ್ಚಳ ಕಂಡಿದೆ.

ಇನ್ನು ಹಾಸನದ ಜೆಡಿಎಸ್ ಅಭ್ಯರ್ಥಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ಒಟ್ಟು
ಆಸ್ತಿಯನ್ನ ₹40.94 ಎಂದು ಘೋಷಿಸಿಕೊಂಡಿದ್ದಾರೆ.
ಒಂದು ಲೆಕ್ಕಾಚಾರದ ಪ್ರಕಾರ ಸ್ಥಿರಾಸ್ತಿ ಮೌಲ್ಯ ಏಳುಪಟ್ಟು ಹೆಚ್ಚಾಗಿದೆಯಂತೆ.
ಇವರೂ ಅಷ್ಟೆ ಕುಟುಂಬದವರಿಗೇ ಸಾಲ ನೀಡಿದ್ದಾರೆ.
ಅಜ್ಜಿ ಶ್ರೀಮತಿ ಚನ್ನಮ್ಮನವರಿಗೆ ₹23 ಲಕ್ಷ, ಸಹೋದರ ಸೂರಜ್ ರೇವಣ್ಣ ಅವರಿಗೆ ₹1.36 ಕೋಟಿ ಸಾಲನೀಡಿದ್ದಾರೆ.
ವಿವಿಧ ಮೂಲಗಳಿಂದ ₹3.72 ಕೋಟಿ ಸಾಲವನ್ನು ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Election Masala ಬಡಜನರ ಸೇವಕ ,ಬಡವರ ಹಿತವೇ ನನ್ನ ಹಿತ ಎಂದು ‌ಚುನಾವಣೆಯಲ್ಲಿ ಸ್ಪರ್ಧಾಳುಗಳು ಭಾಷಣ ಮಾಡುತ್ತಾರೆ. ಕೆಲವರು ಗೆಲ್ಲುತ್ತಾರೆ.
ಹಲವರು ಸೋಲುತ್ತಾರೆ.
ಗೆದ್ದವರು ಸದ್ಯ ತಮ್ಮಲ್ಲಿದ್ದದ್ದಕ್ಕಿಂತ
ಆಸ್ತಿಯನ್ನ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಾರೆ.
ಇತ್ತ ಬಡಜನ ,ಬಡತನದಲ್ಲಿಯೇ ಕೊಳೆಯುತ್ತಿರುತ್ತಾರೆ.
ಇದು ಪ್ರಜಾಪ್ರಭುತ್ವದ ದುರಂತವಲ್ಲದೆ ಮತ್ತೇನು?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...