Saturday, December 6, 2025
Saturday, December 6, 2025

Rotary Club Shivamogga ಸಾಧಕರಿಗೆ ರೋಟರಿ ಮಲೆನಾಡು ವತಿಯಿಂದ ಸನ್ಮಾನ

Date:

Rotary Club Shivamogga ವೈದ್ಯರಾಗಬೇಕೆಂಬ ಕನಸು ಕಂಡಿರುವ ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ಶಿವಮೊಗ್ಗ ನಗರದಲ್ಲಿ ಆರಂಭವಾಗುತ್ತಿರುವ ಶಿಕ್ಷಣ ಸಂಸ್ಥೆ ದೇಶ್ ನೀಟ್ ಅಕಾಡೆಮಿಯ ರೂವಾರಿ ಅವಿನಾಶ್ ಅವರನ್ನು ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ಸನ್ಮಾನಿಸಲಾಯಿತು.

ಮಲೆನಾಡಿನಲ್ಲೇ ಜನಿಸಿದ ಅವಿನಾಶ್ ಅವರು ಸ್ವತಃ ಭೌತಶಾಸ್ತ ಉಪನ್ಯಾಸಕರಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಮನಗೆದ್ದಿರುವ ಉಪನ್ಯಾಸಕರಾಗಿದ್ದು, ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ತರಬೇತಿ ಸಂಸ್ಥೆ ಸ್ಥಾಪಿಸಿದ್ದಾರೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ಅಧ್ಯಕ್ಷ ಸಿ.ರಾಜು ಹೇಳಿದರು.

ನೀಟ್ ತರಬೇತಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಂಗಳೂರು, ಮಂಗಳೂರು, ಕೋಟ ಮುಂತಾದ ಸ್ಥಳಗಳಿಗೆ ಹೋಗಿ ಅನೇಕ ಅನಾನುಕೂಲತೆಗಳನ್ನು ಅನುಭವಿಸುವ ಬದಲು ನೀಟ್ ಪರೀಕ್ಷಾರ್ಥಿಗಳಿಗೆ ಶಿವಮೊಗ್ಗದಲ್ಲೇ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕೋಟಾದ ಸಂಸ್ಥೆಗಳಿಂದಲೇ ನುರಿತ ತರಬೇತುದಾರರನ್ನು ಕರೆಸಿ ತರಬೇತಿ ಕೊಡುವ ಸದಾಶಯದೊಂದಿಗೆ ದೇಶ್ ಅಕಾಡೆಮಿ ಆರಂಭಿಸುತ್ತಿದ್ದಾರೆ ಎಂದು ತಿಳಿಸಿದರು.

Rotary Club Shivamogga ದಶಕಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಹೊಸ ಆಲೋಚನೆಗಳೊಂದಿಗೆ ಮಲೆನಾಡಿನ ಭಾಗದ ವಿದ್ಯಾರ್ಥಿಗಳಿಗೆ ವಿಶಿಷ್ಠ ಕೊಡುಗೆ ನೀಡುತ್ತಿದ್ದಾರೆ. ಸಂಸ್ಥೆಯ ಸದಾಶಯಗಳನ್ನು ಶೀಘ್ರದಲ್ಲೇ ಜನಮನ ತಲುಪುವಂತೆ ಮಾಡಲು ವಿನೂತನ ಕಾರ್ಯಕ್ರಮವನ್ನು ಸಹ ಆಯೋಜಿಸಲಿದ್ದಾರೆ. ಇದರ ಜೊತೆಯಲ್ಲಿ ಅವಿನಾಶ್ ಅವರು ‘ವಿಧಾತ್ರಿ ಭವನ್’ ಹೋಟೆಲ್ ಉದ್ಯಮವನ್ನು ಸ್ಥಾಪಿಸಿ ಶಿವಮೊಗ್ಗದ ಆಹಾರ ಪ್ರಿಯರ ಮನವನ್ನು ಗೆದ್ದಿರುವುದು ಕೂಡ ಶ್ಲಾಘನೀಯ ಎಂದರು.

ಸನ್ಮಾನ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ಅಧ್ಯಕ್ಷ ಸಿ.ರಾಜು, ಕಾರ್ಯದರ್ಶಿ ಪ್ರಕಾಶ್ ಮೂರ್ತಿ, ರೋಟರಿ ಮಂಜುಳಾ ರಾಜು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...