Holi 2024 ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಹಬ್ಬ ಹರಿದಿನಗಳಿಗೆ ವಿಶೇಷ ಮಹತ್ವವಿದ್ದು ಅವುಗಳು ನಮ್ಮ ಜೀವನದಲ್ಲಿ ಸಂಸ್ಕಾರಯುತ ಹೊಸ ಚೈತನ್ಯವನ್ನು ತುಂಬುತ್ತವೆ ಎಂದು ಶಿರಸಿಯ ಪ್ರಜಾಪೀತ ಬ್ರಹ್ಮ ಕುಮಾರಿ ಈಶ್ವರೀ ವಿದ್ಯಾಲಯದ ವೀಣಾಕ್ಕ ಹೇಳಿದರು.
ಸೊರಬ ಪಟ್ಟಣದ ಚಿಕ್ಕಪೇಟೆಯ ಪ್ರಜಾಪೀತ ಬ್ರಹ್ಮ ಕುಮಾರಿ ಈಶ್ವರೀ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹೋಳಿ ಹುಣ್ಣಿಮೆ, ಮಹಿಳಾ ದಿನಾಚರಣೆ ಮತ್ತು ವಿಮಲಕ್ಕನವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮೊಳಗಿನ ದುರ್ಗುಣಗಳನ್ನು ತೊರೆದು ಸದ್ಗುಣಗಳನ್ನು ಬೆಳೆಸಿಕೊಳ್ಳಲು ಹೋಳಿ ಹುಣ್ಣಿಮೆ ಯಂತಹ ಹಬ್ಬಗಳು ಪ್ರೇರಕವಾಗಿರುತ್ತವೆ ಹಾಗೂ ಮರೆಯಾಗುತ್ತಿರುವ ಸಂಸ್ಕಾರವನ್ನು, ಮಾನವತ್ವದ ಗುಣವನ್ನು ಮತ್ತು ಆತ್ಮ ಬಲದ Holi 2024 ವಿಶ್ವಾಸವನ್ನು ಜನರಲ್ಲಿ ಜಾಗೃತಗೊಳಿಸುವುದು ಈಶ್ವರೀ ವಿದ್ಯಾಲಯದ ಮುಖ್ಯ ಉದ್ದೇಶವಾಗಿದೆ ಎಂದರು.
ಸಮಾಜ ಸೇವಕ ಹಾಗೂ ದಂತ ವೈದ್ಯ ಡಾ| ಜ್ಞಾನೇಶ್ , ಉದ್ಯಮಿ ಸಮಾಜ ಸೇವಕ ನಾಗರಾಜ್ ಗುತ್ತಿ ಮಾತನಾಡಿದರು.
Holi 2024 ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಹಬ್ಬ ಹರಿದಿನಗಳಿಗೆ ವಿಶೇಷ ಮಹತ್ವವಿದೆ
Date: