Sports News ಇತ್ತೀಚಿಗಷ್ಟೆ ಟೆಸ್ಟ್ ಟೀಮ್ ಇಂಡಿಯಾ ಆಟಗಾರರ ಸಂಭಾವನೆಯನ್ನು ಬಿಸಿಸಿಐ ಜಾಸ್ತಿ
ಮಾಡಿತ್ತು. ಅದರ ಬೆನ್ನಲ್ಲೇ ರಣಜಿ ಟ್ರೋಫಿ
ಪಂದ್ಯಾವಳಿಯತ್ತ ಆಟಗಾರರನ್ನು ಸೆಳೆಯಲು ಬಿಸಿಸಿಐ
ಮನಸ್ಸು ಮಾಡಿದೆ.
ಅನೇಕ ಆಟಗಾರರು ಐಪಿಎಲ್
ಪಂದ್ಯಾವಳಿಗೆ ಫಿಟ್ನೆಸ್ ಕಾಪಾಡಿಕೊಳ್ಳುವ ಉದ್ದೇಶದಿಂದ
ರಣಜಿ ಪಂದ್ಯಗಳಿಗೆ ಗೈರುಹಾಜರಾಗುವುದು ಕಂಡುಬಂದಿತ್ತು.
ಅದಕ್ಕೆ ಕಾರಣ, ಐಪಿಎಲ್ ಜನಪ್ರಿಯತೆ. ಜೊತೆಗೆ
ಇತರೆ – ಕ್ರಿಕೆಟ್
ಮಾದರಿಗಳಿಗೆ ಪ್ರಾಮುಖ್ಯತೆ
ಕಡಿಮೆಯಾಗುತ್ತಿರುವುದನ್ನು ಬಿಸಿಸಿಐ ಗುರುತಿಸಿದೆ.
ಟೆಸ್ಟ್ ಕ್ರಿಕೆಟ್‌ನ ಘನತೆ ಮತ್ತು ಪ್ರಾಮುಖ್ಯತೆ ಉಳಿವಿಗೆಕ್ರಮ ಕೈಗೊಳ್ಳಲು ಮುಂದಾಗಿದೆ. ಸದ್ಯ ರಣಜಿ
ಆಟಗಾರರು ನಮ್ಮಲ್ಲಿ 40,000- 60,000ರವರೆಗೆ
ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಆಟಗಾರನೊಬ್ಬ
ತನ್ನ ರಾಜ್ಯದ ಪರ ಎಲ್ಲಾ ರಣಜಿ ಪಂದ್ಯಗಳನ್ನು ಆಡಿದಲ್ಲಿ
ಒಟ್ಟು 11 ಲಕ್ಷ ರೂ.ಗಳನ್ನು ಸಂಭಾವನೆಯಾಗಿ
ಪಡೆಯುತ್ತಾನೆ. . ಐಪಿಎಲ್ ಗೆ ಹೋಲಿಸಿದರೆ ಅಲ್ಲಿನ ಡಿಮ್ಯಾಂಡೇ ಬೇರೆಯಾಗಿದೆ.
ಆಟಗಾರನೊಬ್ಬನ ಮೂಲ ಬೆಲೆಯೇ 20 ಲಕ್ಷ ರೂ.
ಗಳಾಗಿವೆ. ಹರಾಜು 20 ಲಕ್ಷಕ್ಕೂ ಮೀರಿರುತ್ತದೆ.
ಹೀಗಾಗಿ ಆಟಗಾರರು
ಐಪಿಎಲ್‌ನತ್ತ, ಸೆಳೆಯಲ್ಪಡುತ್ತಿದ್ದಾರೆ.
Sports News ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ವಯಂಪ್ರೇರಣೆಯಿಂದ ತನ್ನ
ದೇಸೀ ಕ್ರಿಕೆಟ್ ಆಟಗಾರರು ಬಿಸಿಸಿಐನಿಂದ ಪಡೆಯು
ವಷ್ಟೇ ಮೊತ್ತವನ್ನು ಹೆಚ್ಚುವರಿ ನೀಡುವುದಾಗಿ ಹೇಳಿದೆ. ಹೀಗಾಗಿ , ಮುಂಬಯಿ ಕ್ರಿಕೆಟ್ ಆಟಗಾರರ
ಸಂಭಾವನೆ ಇಮ್ಮಡಿಯಾಗಿದೆ.