Monday, February 2, 2026
Monday, February 2, 2026

Madhu Bangarappa ಈಶ್ವರಪ್ಪನವರೇ ಗೌರವದಿಂದ ಇರಿ.ಗೌರವ ಉಳಿಸಿಕೊಳ್ಳಿ- ಮಧು ಬಂಗಾರಪ್ಪ

Date:

Madhu Bangarappa ಈಶ್ವರಪ್ಪ ಅವರಿಗೆ ಬಸ್ಟ್ಯಾಂಡ್ ನಲ್ಲಿ ಕಣಿ ಹೇಳೋಕೆ ಹೇಳಿ.
ಈಶ್ವರಪ್ಪ ಅವರು ಡಬ್ಬದ ಹಾಗೆ ಸೌಂಡ್ ಮಾಡುತ್ತಿದ್ದಾರೆ.ಅವರು ಕ್ಯಾಂಡಿಡೇಟ್ ಆಗಲ್ಲ.
ಯಡಿಯೂರಪ್ಪ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ಈಶ್ವರಪ್ಪ ತಟ್ಟೆಯಲ್ಲಿ ಹೆಗಣ ಕೊಳೆತು ನಾರ್ತಿದೆ.
ಈಶ್ವರಪ್ಪ ಅವರಿಗೆ ಪೊಲಿಟಿಕಲ್ ಸುಫಾರಿ ಯಡಿಯೂರಪ್ಪ ಕೊಟ್ಟಿದ್ದಾರೆ.
ಈಶ್ವರಪ್ಪ ಅವರನ್ನು ಹಿಂದುಳಿದ ವರ್ಗದ ಮತ ಒಡೆಯಿರಿ ಅಂತಾ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

ಜಾತಿ ರಾಜಕಾರಣ ಮಾಡಿ ಇವರು ಹೊಲಸು ಮಾಡಿದ್ದಾರೆ.
ಈಶ್ವರಪ್ಪ ಅವರಿಗೆ ಮಗನಿಗೆ ಟಿಕೇಟ್ ಕೊಡಿಸುವ ಗಂಡಸುತನ ಇದ್ದರೆ ಅದರ ಬಗ್ಗೆ ಮಾತನಾಡಲಿ,ನಮ್ಮ ಅಕ್ಕ ಒಳ್ಳೆಯ ರೀತಿ ಪ್ರಚಾರ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡುತ್ತಾರೆ.
ಒಂದು ಸರಿ ದೆಹಲಿಯಿಂದ ಪೋನ್ ಬಂದ್ರೆ ನನ್ನ ಮನಸು ಕರಗುತ್ತದೆ ಅಂತಾರೆ.
ಈಶ್ವರಪ್ಪ ಅವರೇ ಗೌರವದಿಂದ ಇರಿ, ಗೌರವ ಉಳಿಸಿಕೊಳ್ಳಿ ಎಂದು ಕಟ್ಟೆಚ್ಚರದ ಮಾತನ್ನು ಹೇಳಿದ್ದಾರೆ.

Madhu Bangarappa ಕಾಂಗ್ರೆಸ್ ಬೇರೆಯರ ಮನೆ ಒಡೆದಿದೆ ಅಂತಾ ಮತ ಕೇಳಲ್ಲ.ನಮ್ಮ ಗ್ಯಾರಂಟಿ ಯೋಜನೆ ಕೈ ಹಿಡಿಯುತ್ತವೆ.
ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ.ರಾಘವೇಂದ್ರ ಅವರು ಮಾತನಾಡಬೇಕಾದರೆ ಅವರ ತಲೆ. ಇಮ್ಬ್ಯಾಲೆನ್ಸ್ ಆಗಿದೆ ಅನ್ಸುತ್ತೆ.
ಯಾರ ಕುಟುಂಬದಲ್ಲಿ ಸಿಎಂ ಇದ್ದಾರೆ, ಶಾಸಕ ಇದ್ದಾರೆ, ಮಂತ್ರಿ ಇದ್ದಾರೆ ಅದಕ್ಕೆ ಕುಟುಂಬ ರಾಜಕಾರಣ ಅಂತಾರೆ ಎಂದಿದ್ದಾರೆ.
ಕುಟುಂಬ ರಾಜಕಾರಣಕ್ಕೆ ಅರ್ಥ ಪೂರ್ಣ ಉದಾಹರಣೆ ಯಡಿಯೂರಪ್ಪ ‌ಕುಟುಂಬ ಎಂದು ಅವರು ಮಧು ಬಂಗಾರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...