Sunday, August 2, 2026
Sunday, August 2, 2026

Vidyapati Movie ಕರಾಟೆ ಸ್ಕೂಲಿನಲ್ಲಿ ಚಿತ್ರೀಕರಣ ಪೂರೈಸಿದ ಸಿನಿಮಾ “ವಿದ್ಯಾಪತಿ”

Date:

Vidyapati Movie ವಿದ್ಯಾಪತಿ ಸಿನಿಮಾವನ್ನು ಎ ಶಾಮ್ ಖಾನ್ ಹಾಗೂ ಹಸಿನ್ ಖಾನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾಗಭೂಷಣ ಎನ್.ಎಸ್ ಹಾಗೂ ಇತ್ತೀಚಿಗಷ್ಟೇ ಶಾಖಾಹಾರಿ ಸಿನಿಮಾದಲ್ಲಿ ರಂಗಾಯಣ ರಘು ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿದ್ಯಾಪತಿ ಸಿನಿಮಾ ಲವಿತ್ ಅವರ ಛಾಯಾಗ್ರಹಣದಿಂದ ಮೂಡಿಬಂದಿದೆ. ಡಾಲಿ ಪಿಚ್ಚರ್ಸ್ ಅಡಿಯಲ್ಲಿ ಧನಂಜಯ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿದ್ಯಾಪತಿ ಸಿನಿಮಾದಲ್ಲಿ ಹೆಚ್ಚಿನ ಚಿತ್ರೀಕರಣ ಕರಾಟೆ ಸ್ಕೂಲಿನಲ್ಲಿಯೇ ನಡೆದಿದೆ. ನಟ ನಾಗಭೂಷಣ್ ಅವರು ವಿದ್ಯಾಪತಿ ಎಂಟರ್ಟೈನಿಂಗ್ ಕಥೆಯಾಗಿದೆ. ಹೊಸ ವಿಷಯವನ್ನು ಹೇಳುವಂಥ ಕಥೆಯನ್ನು ಒಳಗೊಂಡಿದೆ. ಇದರಲ್ಲಿ ನನ್ನ ಹಾಗೂ ರಂಗಾಯಣ ರಘು ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಇನ್ನು ರಂಗಾಯಣ ರಘು ಅವರು ಇತ್ತೀಚಿನ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿದ್ಯಾಪತಿ ಸಿನಿಮಾದಲ್ಲಿ ಕರಾಟೆ ಮಾಸ್ಟರ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಪ್ರಿಯರಲ್ಲಿ ಇನ್ನಷ್ಟು ಕುತೂಹಲವನ್ನು ಮೂಡಿಸುವಂತಾಗಿದೆ.

Vidyapati Movie ರಂಗಾಯಣ ರಘು ಅವರ ಕರಾಟೆ ಮಾಸ್ಟರ್ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ವಿಭಿನ್ನವಾಗಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಉಪಾಧ್ಯಕ್ಷ ಚಿತ್ರದ ನಾಯಕಿ ಮಲೈಕಾ ವಸುಪಾಲ್ ಅವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...