Monday, May 4, 2026
Monday, May 4, 2026

National Education Society ವಿದ್ಯಾರ್ಥಿ ವೇತನವನ್ನ ಸದ್ಬಳಕೆ ಮಾಡಿಕೊಳ್ಳಿ- ಜಿ.ಎಸ್.ನಾರಾಯಣ ರಾವ್

Date:

National Education Society ವಿದ್ಯಾರ್ಥಿ ವೇತನಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಮೌಲ್ಯ ಹೆಚ್ಚಿಸಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್‌ಇಎಸ್ ಎಜುಕೇಷನ್ ಅಸಿಸ್ಟಾನ್ಸ್ ಟ್ರಸ್ಟ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಸಾಧಿಸುವ ಕನಸಿಗಿಂತ, ಗೆಲ್ಲುವ ಮನಸ್ಸು ಮಾಡಬೇಕಿದೆ. ಸಾಧನೆಯ ಜೊತೆಯಲ್ಲಿ ಇತರರನ್ನು ಗೆಲ್ಲಿಸುವ ಹಂಬಲ ನಮ್ಮದಾಗಬೇಕಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳಿ ಎಂದರು.


National Education Society ಎನ್‌ಇಎಸ್ ಎಜುಕೇಷನ್ ಅಸಿಸ್ಟಾನ್ಸ್ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಅಶ್ವಥ ನಾರಾಯಣಶೆಟ್ಟಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಸಣ್ಣ ಇಡಿಗಂಟಿನಿ0ದ ಪ್ರಾರಂಭವಾಗಿ ಇಂದು ಒಟ್ಟು ಇಪ್ಪತ್ತು ಲಕ್ಷ ರೂಪಾಯಿವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ವಿದ್ಯಾಸಂಸ್ಥೆಗಳ ಪ್ರಾಥಮಿಕದಿಂದ ಪದವಿಯ ವರೆಗಿನ ೩೨೦ ವಿದ್ಯಾರ್ಥಿಗಳಿಗೆ ಒಟ್ಟು ೨೦ ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಎನ್.ಟಿ.ನಾರಾಯಣರಾವ್, ಅನಂತದತ್ತ, ಕುಲಸಚಿವ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಲೆಕ್ಕಪತ್ರ ವಿಭಾಗದ ಸಂಜಯ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...