Russia Terror Attack: ಮಾಸ್ಕೋಲ್ಲಿನ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಸಂಗೀತ ಕಚೇರಿ ವೇಳೆ ಗುಂಡಿನ ದಾಳಿ ನಡೆಸಲಾಗಿದ್ದು, ಈ ವೇಳೆ ಕನಿಷ್ಠ 115 ಜನರು ಮೃತಪಟ್ಟಿದ್ದು, 145ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ರಷ್ಯಾದಲ್ಲಿ ನಡೆದ ಅತಿ ಭೀಕರ ಭಯೋತ್ಪಾದಕ ದಾಳಿ ಎಂದು ಹೇಳಲಾಗಿದೆ.
ಶುಕ್ರವಾರ ರಾತ್ರಿ ನಗರದ ಪಶ್ಚಿಮ ಉಪನಗರದಲ್ಲಿರುವ ಕಿಕ್ಕಿರಿದ ಕನ್ಸರ್ಟ್ ಹಾಲ್‌ಗೆ ಶಸ್ತ್ರಾಸ್ತ್ರಗಳೊಂದಿಗೆ ನುಗ್ಗಿದ ಐವರು ಮುಸುಕುದಾರಿ ಬಂದೂಕುಧಾರಿಗಳು ಸಂಗೀತ ಕಾರ್ಯಕ್ರಮದಲ್ಲಿದ್ದವರ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಬಳಿಕ ಸ್ಥಳದಲ್ಲಿ ಸ್ಪೋಟ ಸಂಭವಿಸಿದೆ.
ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸುಮಾರು 145 ಮಂದಿ ಗಾಯಗೊಂಡಿದ್ದು, ಅವರಲ್ಲಿ 60 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಇರಾಕ್ ಮತ್ತು ಸಿರಿಯಾದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದ ISIL ಸಂಗೀತ ಕಾರ್ಯಕ್ರಮದ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಅಲ್‌ಜಝೀರಾ ವರದಿ ತಿಳಿಸಿದೆ.
ಮಾಸ್ಕೋದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕನ್ಸರ್ಟ್ ಹಾಲ್ ಸುಮಾರು 6,200 ಜನರು ಸೇರುವಷ್ಟು ದೊಡ್ಡದಾದ ವ್ಯವಸ್ಥೆ ಅಲ್ಲಿದೆ. ಈ ಬಗ್ಗೆ ಮಾತನಾಡಿದ ಸಂಗೀತ ನಿರ್ಮಾಪಕ ಅಲೆಕ್ಸಿ, ಹಲವಾರು ಮೆಷಿನ್‌ಗನ್‌ಗಳ ಸ್ಫೋಟಗಳು ಸಂಭವಿಸಿದೆ. ಬಹಳಷ್ಟು ಕಿರುಚಾಟಗಳು ಕೇಳಿ ಬಂದಿದ್ದು, ಈ ವೇಳೆ ಸ್ಪೋಟ ಗೊಂಡಿರುವುದು ಮತ್ತು ದಾಳಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಬಾಂಬ್‌ಗಳನ್ನು ಸಭಾಂಗಣದೊಳಗೆ ಸ್ಫೋಟಿಸಿದ್ದರಿಂದಾಗಿ ಇಡೀ ಸಭಾಂಗಣ ಹಾಗೂ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸಿದೆ. ದಟ್ಟವಾದ ಹೊಗೆ ತುಂಬಿದ ಸಭಾಂಗಣದಲ್ಲಿ ಹಲವಾರು ಹೊತ್ತು ಗುಂಡಿನ ದಾಳಿಯ ಸದ್ದು ಕೇಳಿ ಬರುತ್ತಿತ್ತು ಎಂದು ರಷ್ಯಾದ ಸುದ್ದಿ ಸಂಸ್ಥೆ ಆರ್ ಐಎ ನೊವಾಸ್ಟಿ ವರದಿ ಮಾಡಿದೆ.
Russia Terror Attack ಘಟನೆ ವೇಳೆ ಹಾಲ್‌ನಿಂದ ಓಡುಹೋಗಲು ಯತ್ನಿಸಿದಾಗ ತುರ್ತು ನಿರ್ಗಮನದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿದೆ. ಗುಂಡಿನ ದಾಳಿಯ ಘಟನೆಯ ನಂತರ ರಷ್ಯಾದ ಕಾನೂನು ಜಾರಿ ಅಧಿಕಾರಿಗಳು ಕ್ರೋಕಸ್ ಸಿಟಿ ಹಾಲ್ ಕನ್ಸರ್ಟ್ ಸ್ಥಳದ ಬಳಿ ರಕ್ಷಣಾ ಪಡೆಗಳನ್ನು ಇರಿಸಿ ಕಟ್ಟೆಚ್ಚರವನ್ನು ವಹಿಸಿದ್ದಾರೆ.