Thursday, June 18, 2026
Thursday, June 18, 2026

Klive Sampadakiya ಮಿಸ್ ಆದ ಟಿಕೆಟ್ -ಬುಸ್ ಎಂದ ನಾಯಕರು

Date:

Klive Sampadakiya 2024ರ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಸ್ಪೆಷಾಲಿಟಿ ಪಡೆದುಕೊಳ್ಳುತ್ತಿದೆ. ರಾಜ್ಯದ ವಿಷಯದಲ್ಲಂತೂ ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಜಿದ್ದಾಜಿದ್ದಿ ಸುದ್ದಿ ಕೇಳಿ ಬರುತ್ತಿದೆ.

ಇಂದು ಪಕ್ಷ ನಿಷ್ಠೆ ಮೇರೆದ ಮಹಾನಾಯಕರು ಮರು ದಿನವೇ ಮತ್ತೊಂದು ಪಕ್ಷ ಅಥವಾ ಪಕ್ಷದ ವಿರುದ್ಧ ಬಂಡಾಯ ಹೇಳುವ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.

ಹಾಲಿ ಸಂಸದರಲ್ಲಿ ಕೆಲವರು, ಟಿಕೆಟ್ ಮಿಸ್ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್, ಬಿಜೆಪಿ ಹಾಗೂ ಸ್ವಲ್ಪಮಟ್ಟಿಗೆ ಜೆಡಿಎಸ್ ನಲ್ಲಿ ಆಗುವ ಲಕ್ಷಣಗಳಿವೆ.

ಶಿವಮೊಗ್ಗದ ನಿಷ್ಠಾವಂತ ಆರ್ ಎಸ್ ಎಸ್ ಸ್ವಯಂಸೇವಕ, ಹಿಂದುತ್ವವಾದಿ , ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಕಳೆದ ಶಾಸನಸಭೆ ಚುನಾವಣೆಯಲ್ಲಿ ವೈರಾಗ್ಯ ತಾಳಿದ್ದರು. ಅದು ರಾಜಕೀಯ ವೈರಾಗ್ಯ ಅಲ್ಲ ಅಂತ ಈಗ ಬಹಿರಂಗವಾಗಿದೆ.

ಪುತ್ರನಿಗೆ ಹಾವೇರಿ ಟಿಕೆಟ್ ಸಿಗಲಿಲ್ಲ. ನಿರಾಶರಾದರು. ಅಲ್ಲಿಯವರೆಗೂ ಬಿವೈ ರಾಘವೇಂದ್ರ ಅವರಿಗೆ ಸಭೆಗಳಲ್ಲಿ ಮತ ನೀಡಲು ಭಾಷಣ ಮಾಡುತ್ತಿದ್ದರು.

ಆಲ್ ಆಫ್ ಎ ಸಡನ್ ತಮ್ಮ ಪುತ್ರನಿಗೆ ಟಿಕೆಟ್ ನಿರಾಕರಣೆಯಾದ ತಕ್ಷಣ ಅವರ ಮಾತಿನ ವೈಕರಿ ಬದಲಾವಣೆ ಆಯಿತು.

ಕುಟುಂಬ ರಾಜಕಾರಣ ಯಾರಿಗೂ ಇಷ್ಟವಿಲ್ಲ. ಅವರೇ ತಮ್ಮ ಕುಟುಂಬದವರಿಗೆ ಟಿಕೆಟ್ ಕೇಳಿ, ಆ ಲಕ್ಷ್ಮಣ ಗೆರೆ ದಾಟಿಯಾಗಿದೆ. ಈಗ ರಾಜ್ಯದ ಕಾರ್ಯಕರ್ತರ ನೋವಿನ ಧ್ವನಿ ಆಗಿ ಚುನಾವಣೆಗೆ ನಿಲ್ಲುತ್ತೇನೆ. ನನ್ನ ನಿರ್ಧಾರ ಅಚಲ ಎಂದಿದ್ದಾರೆ.

ನಿರ್ಧಾರ ಅದರ ವೈಯಕ್ತಿಕ ಸ್ವಾತಂತ್ರ್ಯ ಅದನ್ನು ಪ್ರಶ್ನಿಸುವುದಿಲ್ಲ.

ಮಾಧ್ಯಮಗಳಲ್ಲಿ ಅವರ ಹೇಳಿಕೆ ಇದೆ. ನಾನು ಗೆದ್ದೆ ಗೆಲ್ತೇನೆ, ಗೆದ್ದ ಮೇಲೆ ನನ್ನ ತಾಯಿ ಪಕ್ಷ ಬಿಜೆಪಿಗೆ ಮತ್ತೆ ಸೇರ್ತೇನೆ.

Klive Sampadakiya ಈಶ್ವರಪ್ಪನವರು-ಪ್ರಧಾನಿ ಮೋದಿ ಅವರು ಶಿವಮೊಗ್ಗಕ್ಕೆ ಬಂದಾಗ ಸಾರ್ವಜನಿಕ ಸಭೆಯಿಂದ ಅಂತರ ಕಾಯ್ದುಕೊಂಡರು. ಸಮಾಧಾನ ಹೇಳುವ ಪ್ರಯತ್ನವು ನಡೆಯಿತು. ಅದಕ್ಕೆ ನಾನು ಬಗ್ಗುವುದಿಲ್ಲ ಎಂದು ಈಶ್ವರಪ್ಪನವರು ದೃಢ ಹೇಳಿಕೆ ನೀಡಿದರು.

ಈಗ ಸಾರ್ವಜನಿಕರಲ್ಲಿ ಕಾಡುವ ಪ್ರಶ್ನೆಗಳೆಂದರೆ,

ನಿಷ್ಠಾವಂತ ಪಕ್ಷದ ಸ್ವಯಂಸೇವಕ ಪಕ್ಷದ ಅಭ್ಯರ್ಥಿ ವಿರುದ್ಧ ಚುನಾವಣೆಗೆ ನಿಲ್ಲಲು ಸಾಧ್ಯವೇ?

ಕುಟುಂಬ ರಾಜಕಾರಣ ಶೋಧಿಸುವ ಭರದಲ್ಲಿ ತಮ್ಮ ಬೇಡಿಕೆ ಯಾವುದಾಗಿತ್ತು?

ಚುನಾವಣೆಗೆ ನಿಲ್ಲುವುದು ಸ್ಥಿರವಾದಲ್ಲಿ ಪಕ್ಷದ ಶಿಸ್ತು ಕ್ರಮಗಳನ್ನು ಎದುರಿಸಬೇಕಾಗುವುದಲ್ಲವೆ? ನೂರಕ್ಕೆ ನೂರು ತಮ್ಮ ಪುತ್ರ ಹಾವೇರಿ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎಂದಾದರೆ, ತಾವು ಶಿವಮೊಗ್ಗ ಕ್ಷೇತ್ರದಲ್ಲಿ ನಿಲ್ಲುವ ನಿರ್ಧಾರ ಬದಲಿಸಿ ಹಾವೇರಿ ಕ್ಷೇತ್ರದಲ್ಲಿ ಪುತ್ರರ ಉಮೇದುವಾರಿಕೆ ಮಾಡಿ ಪ್ರಚಾರ ಮಾಡಬಹುದಲ್ಲ?

ಸ್ಥಳೀಯ ಮತದಾರರು ಮುಖ್ಯ ಪೀಠದ ಗುರುಗಳು ಬಂದು ಮತಕ್ಕೆ ಪ್ರಚಾರ ನೀಡುತ್ತಾರೆ ಯೇ?

ಚುನಾವಣೆ ಎದುರಿಸುವಾಗ ವೈಯಕ್ತಿಕ ರಿಪೋರ್ಟ್ ಕಾರ್ಡ್ ಅಗತ್ಯ. ತಾನು ಏನು ಸಾಧಿಸಿದ್ದೇನೆ ಎಂಬ ಮಾಹಿತಿ ಹೇಗೆ ಕೊಡುವಿರಿ?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...